ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನ್ಯಾಮತಿ ತಾಲೂಕು ಸಭಾ ಭವನದಲ್ಲಿ ಮಂಗಳವಾರ ಪತ್ರಕರ್ತರ ದಿನಾಚರಣೆ ಆಚರಿಸಲಾಯಿತು. ಇದರ ನೇತೃತ್ವವನ್ನು ನ್ಯಾಮತಿ ತಾಲೂಕಿನ ದಂಡಾಧಿಕಾರಿಗಳಾದ ತನುಜಾ ಟಿ ಸೌದತ್ತಿ ಅವರು ದೀಪವನ್ನ ಬೆಳಗಿಸುವುದರ ಮೂಲಕ ಚಾಲನೆಯನ್ನು ಕೊಟ್ಟರು . ನಂತರ ನ್ಯಾಮತಿ ತಾಲೂಕಿನ ದಂಡಾಧಿಕಾರಿಗಳಾದ ತನುಜಾ ಟಿ ಸೌದತ್ತಿ ಅವರು ಮಾತನಾಡಿ ದೇಶದ ಇತಿಹಾಸದಲ್ಲಿ ಪತ್ರಿಕಾರಂಗ ಆಡಳಿತ ವ್ಯವಸ್ಥೆ ಯಾದ ದಾರಿಯಲ್ಲಿ ಸಾಗುವಂತೆ ನೋಡಿಕೊಂಡು ಬರುತ್ತಿದೆ. ಪ್ರಸ್ತುತ ಕರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಪತ್ರಕರ್ತರು ತಮ್ಮ ಜೀವನದ ಹಂಗು ತೊರೆದು ಕೈಜೋಡಿಸಿ ಸಮಾಜಸೇವೆಗೆ ಧುಮುಕಿ ರುವುದು ನಿಜಕ್ಕೂ ಶ್ಲಾಘನೀಯ ಸಂಗತಿಯಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹನುಮಂತಪ್ಪ, ಎಂ ನಡಹಳ್ಳಿ ಅವರು ಪತ್ರಿಕಾರಂಗ ಹುಟ್ಟಿ ಅದು ಬೆಳೆದು ಬಂದ ಹಾದಿ ಬಗ್ಗೆ ಮಾಹಿತಿ ನೀಡಿ ಪತ್ರಕರ್ತರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದ್ದಲ್ಲಿ ಅವರ ಕಾರ್ಯ ಸಮಾಜಕ್ಕೆ ಆದರ್ಶಪ್ರಾಯವಾಗಿ ಇರುತ್ತದೆ, ಎಂದು ತಿಳಿಸಿದರು ಆಯುಷ್ ಇಲಾಖೆಯ ವೈದ್ಯರಾದ ಡಾಕ್ಟರ್ ಸಾಲಿಮಠ ಕರೋನವೈರಸ್ ವಿರುದ್ಧ ರೋಗ ನಿರೋಧಕ ಔಷಧ ಕಿಟ್ಟುಗಳನ್ನು ಪತ್ರಕರ್ತರಿಗೆ ವಿತರಿಸಿ ಅವುಗಳ ಬಳಕೆ ಮತ್ತು ಉಪಯೋಗದ ಬಗ್ಗೆ ವಿವರಿಸಿದರು.
ವೈದ್ಯರಾದ ಲಿಂಗರಾಜೇಂದ್ರ ಅವರು ಕೂಡ ಆಯುರ್ವೇದಿಕ್ ಔಷಧ ಪದ್ಧತಿಗಳ ಉಪಯೋಗದ ಬಗ್ಗೆ ಮಾಹಿತಿಯನ್ನು ನೀಡಿದರು. ಸಂಘದ ಜಿಲ್ಲಾಧ್ಯಕ್ಷ ಎಂಪಿಎಂ ಷಣ್ಮುಖಯ್ಯ ಮಾತನಾಡಿದರು ಪ್ರಧಾನ ಕಾರ್ಯದರ್ಶಿ ಡಿ ಎಂ ಆಲಾರಾಧ್ಯ ಪ್ರಾಸ್ತಾವಿಕ ಮಾತನಾಡಿದರು, ಸಂಘದ ಅಧ್ಯಕ್ಷ ಹೊಳೆಮಠ ಶಾಸ್ತ್ರೀ ಅಧ್ಯಕ್ಷ ಭಾಷಣ ಮಾಡಿದರು. ಆರಂಭದಲ್ಲಿ ಈಚೆಗೆ ಲಿಂಗೈಕ್ಯರಾದ ರಾಂಪುರ ಮಠದ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಗೌರವಾರ್ಥ ಎರಡು ನಿಮಿಷಗಳ ಕಾಲ ಮೌನಾಚರಣೆ ಯನ್ನು ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ ರೇಣುಕಾನಂದ, ಉಪ ತಹಶೀಲ್ದಾರ್ ರಾದ ಎನ್ ನಾಗರಾಜ್ ಸಹ ಭಾಗವಹಿಸಿದ್ದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು . ನೂತನ ಅಧ್ಯಕ್ಷರಾಗಿ ರಾಂಪುರದ ಏಕೆ ಹಾಲೇಶ್ ಉಪಾಧ್ಯಕ್ಷರಾಗಿ ರಾಜು ಪ್ರಧಾನ ಕಾರ್ಯದರ್ಶಿಯಾಗಿ ಡಿ.ಎಂ ಆಲಾರಾದ್ಯ , ಸಹಕಾರ್ಯದರ್ಶಿ ಯಾಗಿ ಶಕೀಲ್ ಆಹ್ಮದ್, ಖಜಾಂಚಿಯಾಗಿ ಎಸ್ ಸುರೇಶ್ ಸಂಘಟನಾ ಕಾರ್ಯದರ್ಶಿಯಾಗಿ ರಮೇಶ್ ಮಡಿವಾಳ ಜಿಲ್ಲಾ ಸಂಚಾಲಕರಾಗಿ ಗಿರೀಶ ನಾಡಿಗ್ ಸಲಹಾ ಸಮಿತಿ ಸದಸ್ಯರಾಗಿ ವಿಜಯಾನಂದ ಸ್ವಾಮಿ ಎಂಪಿಎಂ ಷಣ್ಮುಖಯ್ಯ ಶಾಸ್ತ್ರಿ ಹೊಳೆಮಠ ಆಯ್ಕೆಯಾದರು. ರಾಜ್ಯ ಸಮಿತಿಯ ಸದಸ್ಯರಾದ ಮಾಸಡಿ ಅರುಣ್ ಗೌಡ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಂಡು ಕೆಲಸ ಕಾರ್ಯಗಳನ್ನು ನಿಭಾಯಿಸಿದರು.