ದಾವಣಗೆರೆ ಜಿಲ್ಲೆ ಜುಲೈ 30 ಹೊನ್ನಾಳಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು ಈ ಸಾಮಾನ್ಯ ಸಭೆಯು ಮಧ್ಯಾಹ್ನ ಊಟದ ನಂತರ ಮತ್ತೆ ಸಭೆ ಮುಂದುವರೆಯಿತು ಮುಂದುವರೆದ ಭಾಗವೆಂದರೆ ದೇವನಾಯ್ಕನಹಳ್ಳಿ ಗ್ರಾಮದಲ್ಲಿರುವ ತೋಟಗಾರಿಕೆ ಇಲಾಖೆಗೆ ಪ್ರತಿದಿವಸ 200ರಿಂದ 300 ಜನಗಳು ಆಫೀಸಿಗೆ ಎದುರುಗಡೆ ಬಂದು ನಿಲ್ಲುತ್ತಿದ್ದಾರೆ ಇಲಾಖೆಯಲ್ಲಿ ಕೆಲಸ ಮಾಡುವ ಬಿ ವರ್ಗ ಸಿ ವರ್ಗದವರು ಬರುವ ರೈತರಿಗೆ ಇಂದು ಬಾ ನಾಳೆ ಬಾ ಎಂದು ಸಬೂಬು ಹೇಳುತ್ತಿದ್ದಾರೆ ಇದು ನನ್ನ ಗಮನಕ್ಕೆ ಬಂದಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಕುಳಗಟ್ಟೆ ರಂಗಪ್ಪನವರು ಹೇಳಿದರು .ಇದಾದನಂತರ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ತಿಪ್ಪೇಶ್ ಅವರು ಹೇಳುತ್ತಾರೆ ನಾನು ಒಂದು ದಿವಸ ತೋಟಗಾರಿಕೆ ಇಲಾಖೆ ಹೋದಾಗ ಒಬ್ಬ ಕಂಪ್ಯೂಟರ್ ಮಹಿಳೆಯಾದ ರುದ್ರಾಂಬಿಕಾ ಅನ್ನುವರು ಎದುರುಗಡೆ ಒಂದು ಘಟನೆ ನಡೆದಿದೆ ಅದು ಏನೆಂದರೆ ಎರಡು ಜನ ಬ್ರೋಕರ್ ಅನ್ನು ಚೇರ್ ರಿನಲ್ಲಿ ಕೂರಿಸಿ ಮಹಿಳೆ ಮಾತಾಡಿಸುತ್ತಾರೆ ಆದರೆ ನಾನು ತಾಲೂಕ್ ಪಂಚಾಯಿತಿ ಉಪಾಧ್ಯಕ್ಷರಾದ ನಾನು ನಿಲ್ಲುವಂತ ಪರಿಸ್ಥಿತಿ ಬರುತ್ತದೆ ಒಬ್ಬ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ನನಗೆ ಈ ರೀತಿ ಆದರೆ ಜನಸಾಮಾನ್ಯರಿಗೆ ಹೇಗೆ ಇಲ್ಲಿ ಬ್ರೋಕರ್ ಹಾವಳಿ ತುಂಬಾ ಹೆಚ್ಚಾಗಿದೆ ಎಂದು ತಾಲೂಕ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ನಂತರ ಸಾಸ್ವೇಹಳ್ಳಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ತಾಲೂಕ್ ಪಂಚಾಯತಿ ಸದಸ್ಯರಾದ ಅಬಿದ್ ಅಲಿ ಖಾನ್ ಅವರು ಮಾತನಾಡಿ ತೋಟಗಾರಿಕೆ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳುತ್ತಾ ತೋಟಗಾರಿಕೆ ಇಲಾಖೆಯಲ್ಲಿ ಒಂದು ಫೈಲಿಗೆ 2000ದಿಂದ ಮೂರು ಸಾವಿರ ರೂಗಳನ್ನು ಕೇಳುತ್ತಾರೆ ಇದು ತೋಟಗಾರಿಕೆ ಇಲಾಖೆಯಲ್ಲಿ ಇದು ಆರ್.ಟಿ.ಓ ಆಫೀಸಾ ಅಥವಾ ಆರ್ಟಿಕಲ್ ಆಫೀಸಾ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.ಹಿರಿಯ ಸಹಾಯಕ ನಿರ್ದೇಶಕರಾದ ಜೆ. ಶಂಕರ್ ರವರು ಮಾತನಾಡಿ ನಮ್ಮ ಗಮನಕ್ಕೆ ಬಾರದೆ ರೈತರಿಗೆ ಸಕಾಲಕ್ಕೆ ಸ್ಪಂದಿಸದೆ ಇರುವುದು ನೋವಿನ ಸಂಗತಿ ಮುಂದೆ ಈ ರೀತಿ ನಡೆಯದಂತೆ ನೋಡಿಕೊಳ್ಳುತ್ತೆವೆ ಎಂದು ತಾಲೂಕು ಪಂಚಾಯಿತಿ ನಿರ್ವಹಣಾಧಿಕಾರಿಗಳಿಗೆ ಮತ್ತು ಅಧ್ಯಕ್ಷರು ಮತ್ತು ಉಪಧ್ಯಕ್ಷರು ಹಾಗೂ ಸರ್ವ ಪಕ್ಷದ ತಾಲೂಕು ಪಂಚಾಯಿತಿ ಸದಸ್ಯರುಗಳಿಗೆ ಮನವಿ ಮಾಡಿಕೊಂಡರು .
ತಾಲೂಕು ಪಂಚಾಯಿತಿಯ ನಿರ್ವಾಣ ಅಧಿಕಾರಿಗಳಾದ ಗಂಗಾಧರಮೂರ್ತಿ ಅವರು ಮಾತನಾಡಿ ಜನ ಸಾಮಾನ್ಯರಿಗೆ ತೊಂದರೆ ಕೊಡುವ ಕೆಲಸ ಮಾಡಿದರೆ ಅಥವಾ ಮೋಸ ಮಾಡುವ ಅಧಿಕಾರಿಗಳಿಗೆ ಸಸ್ಪೆಂಡ್ ಮಾಡಿದರೆ ಅವರ ಹೆಂಡತಿ ಮತ್ತು ಮಕ್ಕಳಿಗೆ ತೊಂದರೆಯನ್ನು ಕೊಟ್ಟ ಹಾಗೆ ಆಗುತ್ತದೆ ಆದಕಾರಣ ಈ ರೀತಿ ಮಾಡದನೆ ಅವರ ಮೇಲೆ ಎಫ್ಐಆರ್ ದಾಖಲಿಸಿ ಕಾನೂನುರೀತ್ಯ ಕ್ರಮ ಕೈಗೊಂಡಾಗ ಅವರುಗಳಿಗೆ ಗೊತ್ತಾಗುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾದವರು ತಾಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ತಾಲೂಕು ನಿರ್ವಣಾಧಿಕಾರಿಗಳು ಮತ್ತುಎಲ್ಲಾ ಪಕ್ಷದ ತಾಲೂಕು ಪಂಚಾಯಿತಿ ಸದಸ್ಯರುಗಳು ಎಲ್ಲಾತಾಲೂಕು ಮಟ್ಟದ ಅಧಿಕಾರಿಗಳು ಸಹ ಭಾಗಿಯಾಗಿದ್ದರು.