ದಾವಣಗೆರೆ ಜು.30
      ಕರ್ನಾಟಕ ಸಂಘಗಳ ಅಧಿನಿಯಮ 1960ರಡಿಯಲ್ಲಿ
ನೋಂದಣಿಗೊಂಡು 5 ವರ್ಷಗಳಿಗೂ ಮೇಲ್ಪಟ್ಟು
ನವೀಕರಣಗೊಳ್ಳದೇ ಇರುವ ಸಂಘ ಸಂಸ್ಥೆಗಳಿಗೆ ನವೀಕರಣಕ್ಕಾಗಿ
ಕಡೆಯ ಒಂದು ಅವಕಾಶ ನೀಡಲಾಗಿದೆ.
    ಜಿಲ್ಲಾ ವ್ಯಾಪ್ತಿಯಲ್ಲಿನ ಸಂಘ ಸಂಸ್ಥೆಗಳು ಪ್ರತಿ ವರ್ಷಕ್ಕೆ ರೂ.500/-
ರಂತೆ ದಂಡ ಪಾವತಿಸಿ ಮತ್ತು ಅವಶ್ಯ ದಾಖಲೆಗಳನ್ನು ಸಲ್ಲಿಸಿ ಡಿ.31
ರೊಳಗೆ ನವೀಕರಣ ಮಾಡಿಸಿಕೊಳ್ಳಬಹುದಾಗಿರುತ್ತದೆ. ತಪ್ಪಿದಲ್ಲಿ
ನೋಂದಣಿ ರದ್ದು ಮಾಡಲಾಗುವುದು. ಕೋವಿಡ್-19 ಪ್ರಯುಕ್ತ
ವಾರ್ಷಿಕ ಸಭೆ ನಡೆಸಲು ಡಿ.31 ರವರಗೆ ಕಾಲಾವಧಿ ವಿಸ್ತರಿಸಲಾಗಿದೆ ಎಂದು
ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳು ಹಾಗೂ ಸಹಕಾರ
ಸಂಘಗಳ ಉಪನಿಬಂಧಕರಾದ ಬಿ.ಜಯಪ್ರಕಾಶ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *