ದಾವಣಗೆರೆ ಜು.31
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲೆಯಲ್ಲಿ ಆಗಸ್ಟ್ 1
ರಿಂದ 15 ರವರೆಗೆ ಶಾಲಾ ಚುಚ್ಚುಮದ್ದು ಕಾರ್ಯಕ್ರಮವನ್ನು
ಏರ್ಪಡಿಸಲಾಗಿದ್ದು, ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಇವರು ಇಂದು ಈ ಕಾರ್ಯಕ್ರಮ ಕುರಿತಾದ
ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚುಚ್ಚುಮದ್ದು
ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೊದಲನೇ ಹಂತದಲ್ಲಿ ಕೋವಿಡ್ ಇಲ್ಲದೇ ಇರುವ ಗ್ರಾಮೀಣ
ಭಾಗಗಳಲ್ಲಿ 5 ನೇ ಮತ್ತು 10 ನೇ ತರಗತಿ ಮಕ್ಕಳಿಗೆ
ಧನುರ್ವಾಯು ಮತ್ತು ಗಂಟಲು ಮಾರಿ ರೋಗವನ್ನು ತಡೆಗಟ್ಟಲು
ಡಿ.ಟಿ ಚುಚ್ಚುಮದ್ದನ್ನು ಜಿಲ್ಲೆಯ ಎಲ್ಲಾ ಉಪ ಕೇಂದ್ರ/ಹಳ್ಳಿಯ
ಶಾಲೆಗಳಲ್ಲಿ ನಿಗದಿತ ದಿನಾಂಕಗಳಂದು ಸಂಸ್ಥೆಗಳಲ್ಲಿ ಕೋವಿಡ್
ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು
ನೀಡಲಾಗುವುದು. ಪೋಷಕರು ನಿಗದಿತ ದಿನಾಂಕಗಳಂದು
ತಮ್ಮ ಮಕ್ಕಳನ್ನು ಶಾಲೆಗಳಿಗೆ ಕರೆದುಕೊಂಡು ಬಂದು
ಚುಚ್ಚುಮದ್ದನ್ನು ಹಾಕಿಸಬೇಕೆಂದು ಜಿಲ್ಲಾಧಿಕಾರಿಗಳು ಈ ವೇಳೆ
ತಿಳಿಸಿದರು.
ಈ ವೇಳೆ ಡಿಹೆಚ್‍ಓ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ
ಡಾ.ರಾಘವನ್, ಆರ್‍ಸಿಹೆಚ್‍ಓ ಡಾ.ಮೀನಾಕ್ಷಿ ಇದ್ದರು.
ಜಿಲ್ಲೆಯಲ್ಲಿ 5ನೇ ಮತ್ತು 10 ನೇ ತರಗತಿ ಸೇರಿ ಒಟ್ಟು 54177
ಮಕ್ಕಳಿಗೆ ಚುಚ್ಚುಮದ್ದು ನೀಡುವ ಗುರಿ ಹೊಂದಲಾಗಿದೆ ಎಂದು
ಆರ್‍ಸಿಹೆಚ್ ಹಾಗೂ ಡಿಹೆಚ್‍ಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.