ದಾವಣಗೆರೆ ಜು.22
ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಶಾಸನಬದ್ದ ಬಾದ್ಯತೆಗೆ
ಸಂಬಂಧಿಸಿದ ಕೆಲಸ ನಿರ್ವಹಿಸಲು ಹೊರಗುತ್ತಿಗೆ ಆಧಾರದಲ್ಲಿ ಅಕೌಂಟ್
ಮ್ಯಾನೇಜರ್ ನೇಮಕ ಮಾಡಿಕೊಳ್ಳಲು ಆನ್‍ಲೈನ್ ಮೂಲಕ ಅರ್ಜಿ
ಆಹ್ವಾನಿಸಲಾಗಿದೆ.
   ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅನುಷ್ಟಾನದಲ್ಲಿ
ಶಾಸನಬದದ್ದ ಬಾದ್ಯತೆಗಳಾದ ಆದಾಯ ತೆರಿಗೆ ಪಾವತಿ, ಸರಕು
ಮತ್ತು ಸೇವಾ ತೆರಿಗೆ ಪಾವತಿ, ರಾಜಧನ ಕಟಾವಣೆ ಹಾಗೂ ಪಾವತಿ,
ವಾರ್ಷಿಕ ಲೆಕ್ಕಪತ್ರಗಳ ತಯಾರಿಕೆ ಮತ್ತು ನಿರ್ವಹಣೆ, ಹಣಕಾಸಿನ
ವಿಷಯಕ್ಕೆ ಸಂಬಧಿಸಿದಂತೆ ವಿವಿಧ ಬ್ಯಾಂಕ್‍ಗಳ ಜೊತೆಗೆ ಸಮನ್ವಯ
ಸಾಧಿಸುವುದು ಹಾಗೂ ಇನ್ನಿತರೆ ಲೆಕ್ಕಪತ್ರ ರ್ಕಾಗಳನ್ನು
ನಿರ್ವಹಿಸಲು ಹಾಗೂ ಮೇಲಿನ ವಿಷಯಗಳಲ್ಲಿ ಗ್ರಾ.ಪಂ ಗಳಿಗೆ
ಸಹಕರಿಸಲು ಲೆಕ್ಕಪತ್ರ ವಿಷಯದಲ್ಲಿ ನುರಿತಾದ ಅಭ್ಯರ್ಥಿಗಳನ್ನು
ಅಕೌಂಟ್ ಮ್ಯಾನೇಜರ್ ಆಗಿ ಜಿಲ್ಲಾ ಪಂಚಾಯತ್‍ನಲ್ಲಿ ಕಾರ್ಯನಿರ್ವಹಿಸಲು
ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು
ಆನಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸುವವರು ಎ.ಕಾಂ, ಎಂ.ಬಿ.ಎ (ಫೈನಾನ್ಸ್) ನಲ್ಲಿ
ಸ್ನಾತಕೋತ್ತರ ಪದವಿ ಹೊಂದಿರಬೇಕು ಹಾಗೂ 35 ವರ್ಷ
ಮೀರಿರಬಾರದು. ಕನಿಷ್ಟ 2 ವರ್ಷಗಳ ಸಂಬಂಧಿತ ಅನುಭವ
ಹೊಂದಿರಬೇಕು.  ಮಾಸಿಕ ಸಂಭಾವನೆ
ರೂ. 30,000 ಹಾಗೂ ಪ್ರಯಾಣ ಭತ್ಯೆ ಭರಿಸಲಾಗುತ್ತದೆ.
    ಅರ್ಜಿ ಸಲ್ಲಿಸಲು ಆಗಸ್ಟ್ 10 ಕೊನೆಯ ದಿನವಾಗಿದ್ದು,
hಣಣಠಿ://ಜಚಿvಚಿಟಿಚಿgeಡಿe.ಟಿiಛಿ.iಟಿ/ ಈ ವೆಬ್‍ಸೈಟ್‍ನ ನೇಮಕಾತಿ ವಿಭಾಗದಲ್ಲಿ ಆನ್‍ಲೈನ್
ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 1800-425-
22-03 ಸಂರ್ಪಕಿಸಬಹುದೆಂದು ಜಿ ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ
ಪದ್ಮಾ ಬಸವಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *