ದಾವಣಗೆರೆ ಜಿಲ್ಲೆ ಜುಲೈ 31 ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ವಿನಾಯಕ ಬಡಾವಣೆಯ ಯುವಕರ ಸಂಘದ ವತಿಯಿಂದ ಈ ಹಿಂದೆ ವಿನಾಯಕ ಕಾಲೋನಿಯಲ್ಲಿ ಎರಡು ಜನಗಳಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಆ ಕಾಲೋನಿಯ ಹತ್ತು ಮನೆಗಳನ್ನು ಸೀಲ್ ಡೌನ ಮಾಡಲಾಗಿತ್ತು .ಆದಕಾರಣ ಕೆಂಚಿಕೊಪ್ಪ ಗ್ರಾಮದ ವಿನಾಯಕ ಬಡಾವಣೆ ಯುವಕರು ಗಳು ಸೇರಿ ತರಕಾರಿ ಕಿಟ್ಟುಗಳನ್ನು ತಯಾರುಮಾಡಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡರ್ ಅವರನ್ನ ಕರೆಸಿ ತರಕಾರಿ ಕಿಟ್ಟು ಗಳನ್ನು ಸೀಲ್ ಡೌನ್ ಆದಂತ ಬಡಾವಣೆಯ ಕಾಲೋನಿಯ ಜನಗಳಿಗೆ ಇವರುಗಳ ಕೈಯಿಂದ ವಿತರಣೆಯನ್ನು ಮಾಡಿಸಿದರು .ಈ ಸಮಯದಲ್ಲಿ ಇದ್ದ ಯುವಕರು ಬೊಮ್ಮಪ್ಪ ಟಿ ಹುತ್ತೇಶ ಎಸ್ ಕೆ ರವಿ ಸಿ ದೊಡ್ಡೆನಹಳ್ಳಿ ಪ್ರಶಾಂತ್ ಹಾಗೂ ಈ ಗ್ರಾಮದ ಹಿರಿಯರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರಗಿತು.

Leave a Reply

Your email address will not be published. Required fields are marked *