ಬೆಂಗಳೂರು ನೇಕಾರರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಕೂಡಲೇ ಇವರ ಸಮಸ್ಯೆಯನ್ನು ಬಗೆಹರಿಸಿ ಎಂದು ಎಂ ಡಿ ಲಕ್ಷ್ಮಿ ನಾರಾಯಣ್ ಆಗ್ರಹಿಸಿದ್ದರು. ಈ ಕುರಿತು ಸಿಎಂಗೆ ಪತ್ರ ಬರೆದಿರುವ ಅವರು ಕೋವಿಡ್-19 ಕೊರೋನಾ ಬಂದ ನಂತರ ನೇಕಾರ ಸಮಸ್ಯೆಗಳ ಹಾಗೂ ಆತ್ಮಹತ್ಯೆ ಬಗ್ಗೆ ತಮಗೆ ಹತ್ತನೆಯ ಪತ್ರ ಬರೆದಿರುವುದು ರಾಜ್ಯದಲ್ಲಿ ನೇಕಾರರ ಆತ್ಮಹತ್ಯೆ 9 ಸಂಖ್ಯೆ ಮಟ್ಟಿದೆ ಮುಟ್ಟಿದೆ ಈ ದಿನ ಬೆಳಗ್ಗೆ ಬೆಂಗಳೂರು ಯಲಹಂಕ ಕೋಗಿಲು ಅಗ್ರಹಾರದ ನೇಕಾರರ ಕಾಲೋನಿಯ ಲಕ್ಷ್ಮಿಪತಿ 60ವರ್ಷದ ಬಡ ನೇಕಾರರ ಕೋರೋಣ ಕಾಯಿಲೆ ಹಾಗೂ ಮಾಡಿದ ಸಾಲ ತೀರಿಸಲಾಗದೆ ಬೆಳಗ್ಗೆ ನೇಕಾರಿಕೆ ಮಾಡುತ್ತಿರುವ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೇಕ ಬಾರಿ ತಮಗೆ ಹಾಗೂ ಜವಳಿ ಮಂತ್ರಿಗಳಿಗೆ ನೇಕಾರರ ಸಮಸ್ಯೆಗಳನ್ನು ಬಗೆಹರಿಸಲು ಪತ್ರ ನೀಡಿದ್ದು ಇದುವರೆಗೂ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬಗಳಿಗೆ ಪರಿಹಾರ ನೀಡುವುದಿಲ್ಲ. ನೇಕಾರರ ಸಮಸ್ಯೆಗಳನ್ನು ಪರಿಹಾರ ಮಾಡಿರುವುದಿಲ್ಲ. ತಕ್ಷಣ ನೇಕಾರರ ಸಮಸ್ಯೆಗಳನ್ನು ಬಗೆಹರಿಸಲು ಸಭೆ ಕರೆಯಬೇಕು ಹಾಗೂ ಆತ್ಮಹತ್ಯೆ ಮಾಡಿಕೊಂಡಿರುವ ಎಲ್ಲಾ ನೇಕಾರರ ಕುಟುಂಬದವರಿಗೆ 10 ಲಕ್ಷ ಪರಿಹಾರ ನೀಡಲು ನೇಕಾರರ ಪರವಾಗಿ ಆಗ್ರಹ ಮಾಡುತ್ತೇನೆ