ದಾವಣಗೆರೆ ಆ.08
ಜಿಲ್ಲೆಯಲ್ಲಿ ಇಂದು 132 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 61 ಮಂದಿಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, 02 ಸಾವು ಸಂಭವಿಸಿದೆ.
ಈದಿನ ದಾವಣಗೆರೆಯಲ್ಲಿ 99, ಹರಿಹರದಲ್ಲಿ 12, ಜಗಳೂರಿನಲ್ಲಿ 04, ಚನ್ನಗಿರಿ 06, ಹೊನ್ನಾಳಿ 07,ಹಾಗೂ ಅಂತರ್ ಜಿಲ್ಲೆಯಿಂದ 04 ಕೋವಿಡ್-19 ಪ್ರಕರಣಗಳು ವರದಿಯಾಗಿವೆ.
ಇಂದು ತಾಲ್ಲೂಕುವಾರು ಬಿಡುಗಡೆಯಾದವರು- ದಾವಣಗೆರೆಯಿಂದ 44, ಹರಿಹರದಿಂದ 09, ಚನ್ನಗಿರಿಯಿಂದ 03, ಹೊನ್ನಾಳಿ 02, ಅಂತರ್ಜಿಲ್ಲೆಯಿಂದ 03 ಸೇರಿದಂತೆ ಒಟ್ಟು 61 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ..
ಜಿಲ್ಲೆಯಲ್ಲಿ ಒಟ್ಟು 3278 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 2109 ಮಂದಿ ಸಂಪೂರ್ಣ ಗುಣಮುಖರಾಗಿಬಿಡುಗಡೆ ಹೊಂದಿದ್ದಾರೆ. 80 ಸಾವು ಸಂಭವಿಸಿದ್ದು, ಪ್ರಸ್ತುತ 1089 ಸಕ್ರಿಯಪ್ರಕರಣಗಳು ಇವೆ.–
