ದಾವಣಗೆರೆ ಅ.01
ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ
ಕರ್ನಾಟಕ ವಿಧಾನ ಪರಿಷತ್ತಿಗೆ ಒರ್ವ ಸದಸ್ಯರನ್ನು
ಚುನಾಯಿಸಲು ಚುನಾವಣೆ ನಡೆಯಲಿದೆ.
ನಾಮಪತ್ರದ ನಮೂನೆಗಳನ್ನು
ಚುನಾವಣಾಧಿಕಾರಿಗಳಾದ ಪ್ರಾದೇಶಿಕ ಆಯುಕ್ತರು,
ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿ
ಬೆಂಗಳೂರು ವಿಭಾಗ 2ನೇ ಮಹಡಿ ಬಿ.ಎಂ .ಟಿ.ಸಿ ಕಟ್ಟಡ ಕೆ.ಹೆಚ್
ರಸ್ತೆ ಶಾಂತಿನಗರ ಬೆಂಗಳೂರು-560027 ಅಥವಾ ಸಹಾಯಕ
ಚುನಾವಣಾಧಿಕಾರಿಗಳ ಕಚೇರಿಯಿಂದ ಪಡೆಯಬಹುದು.
ಉಮೇದುದಾರರು ಅಥವಾ ಅವರ ಸೂಚಕರು
ಚುನಾವಣಾಧಿಕಾರಿಗಳಾದ ಪ್ರಾದೇಶಿಕ ಆಯುಕ್ತರು,
ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿ
ಬೆಂಗಳೂರು ವಿಭಾಗ 2ನೇ ಮಹಡಿ ಬಿ.ಎಂ .ಟಿ.ಸಿ ಕಟ್ಟಡ ಕೆ.ಹೆಚ್
ರಸ್ತೆ ಶಾಂತಿನಗರ ಬೆಂಗಳೂರು-560027 ಅಥವಾ ಸಹಾಯಕ
ಚುನಾವಣಾಧಿಕಾರಿಗಳು ಇವರಿಗೆ ಸಾರ್ವತ್ರಿಕ ರಜಾ ದಿನ
ಹೊರತರುಪಡಿಸಿ ಅ.08 ರಂದು ಬೆಳಿಗ್ಗೆ 11 ಗಂಟೆಯಿಂದ
ಮಧ್ಯಾಹ್ನ 3 ರೊಳಗೆ ನಾಮಪತ್ರಗಳನ್ನು
ಸಲ್ಲಿಸಬಹುದು.
ನಾಮಪತ್ರಗಳನ್ನು ಚುನಾವಣಾಧಿಕಾರಿಗಳನ್ನು
ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗದ
ಕಾರ್ಯಾಲಯದಲ್ಲಿ ಅ.09 ರಂದು ಬೆಳಿಗ್ಗೆ 11 ಗಂಟೆಗೆ
ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು.
ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳವ ತಿಳುವಳಿಕೆ
ಪತ್ರವನ್ನು ಉಮೇದುವಾರನು ಅಥವಾ ಅವರ ಯಾರೇ
ಸೂಚಕರು ಅಥವಾ ಅದನು ಸಲ್ಲಿಸಲು ಉಮೇದುವಾರನಿಂದ
ಲಿಖಿತದಲ್ಲಿ ಅಧಿಕೃತನಾದ ಅವರ ಚುನಾವಣೆ ಏಜೆಂಟರು
ಮೇಲ್ಕಂಡ ಅಧಿಕಾರಿಗಳಿಗೆ ಅವರ ಕಚೇರಿಯಲ್ಲಿ ಅ.12ರ
ಮಧ್ಯಾಹ್ನ 3 ಗಂಟೆಯೊಳಗೆ ಸಲ್ಲಿಸಬಹುದು.
ಚುನಾವಣೆ ದಿನವಾದ ಅ.28 ರಂದು ಬೆಳಿಗ್ಗೆ 08 ಗಂಟೆಯಿಂದ
ಸಂಜೆ 05 ರವರೆಗೆ ಮತದಾನ ನಡೆಯಲಿದೆ ಎಂದು ಕರ್ನಾಟಕ
ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿ
ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ
ನವೀನ್ ರಾಜ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.