ದಾವಣಗೆರೆ ಸೆ.30
ಭಾರತ ಚುನಾವಣಾ ಆಯೋಗವು ಕರ್ನಾಟಕ ಆಗ್ನೇಯ
ಪದವೀಧರರ ಕ್ಷೇತ್ರಕ್ಕೆ ಚುನಾವಣಾ
ವೇಳಾಪಟ್ಟಿಯನ್ನು ಹೊರಡಿಸಿದೆ ಹಾಗೂ ಮಾದರಿ ನೀತಿ
ಸಂಹಿತೆಯು ಸೆ.29 ರಿಂದ ನ.5 ರವರೆಗೆ ಜಾರಿಯಲ್ಲಿರುತ್ತದೆ. .
ವೇಳಾಪಟ್ಟಿ : ಅ.01 ರಂದು ಅಧಿಸೂಚನೆಯನ್ನು
ಹೊರಡಿಸಲಾಗುವುದು. ಅ.08 ರಂದು ನಾಮಪತ್ರ ಸಲ್ಲಿಸಲು
ಕಡೆಯ ದಿನವಾಗಿರುತ್ತದೆ. ಅ.09 ರಂದು ನಾಮಪತ್ರ
ಪರಿಶೀಲನೆ ನಡೆಸಲಾಗುವುದು. ಅ.12 ರಂದು
ನಾಮಪತ್ರಗಳನ್ನು ಹಿಂಪಡೆಯುವ ದಿನವಾಗಿರುತ್ತದೆ.
ಅ.28 ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ
ಮತದಾನ ನಡೆಸಲಾಗುವುದು. ನ.02 ರಂದು ಮತ ಎಣಿಕೆ
ಮಾಡಲಾಗುವುದು. ನ.05 ರಂದು ಚುನಾವಣೆ ಮುಕ್ತಾಯ
ದಿನವಾಗಿದೆ.
ಚುನಾವಣಾ ಕ್ಷೇತ್ರದ ವ್ಯಾಪ್ತಿ: ಕರ್ನಾಟಕ ಆಗ್ನೇಯ
ಪದವೀಧರರ ಕ್ಷೇತ್ರ ಚುನಾವಣೆ-2020 ಕ್ಕೆ ಸಂಬಂಧಿಸಿದಂತೆ
ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲ್ಲೂಕುಗಳು
ಚುನಾವಣಾ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತವೆ.
ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ,
ಬೆಂಗಳೂರು ಇವರು ಕರ್ನಾಟಕ ಆಗ್ನೇಯ ಪದವೀಧರರ
ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು,
ದಾವಣಗೆರೆ ಇವರು ಸಹಾಯಕ
ಚುನಾವಣಾಧಿಕಾರಿಯಾಗಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು
ಆ.ಪ.ಕ್ಷೇ ಸಹಾಯಕ ಚುನಾವಣಾಧಿಕಾರಿ ಮಹಾಂತೇಶ ಬೀಳಗಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.