ದಾವಣಗೆರೆ ಅ.01
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ
ಕಾರ್ಯಕ್ರಮದಡಿ ಮೊದಲನೇ ಸುತ್ತಿನ ಕಾಲುಬಾಯಿ ರೋಗ
ಲಸಿಕಾ ಅಭಿಯಾನವನ್ನು ಅ.02 ರಿಂದ ನ.05 ರವರೆಗೆ 45 ದಿನಗಳ
ಕಾಲ ದಾವಣಗೆರೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
3.28 ಲಕ್ಷ ಜಾನುವಾರುಗಳಿಗೆ (ದನ ಮತ್ತು ಎಮ್ಮೆಗಳಿಗೆ)
ಉಚಿತವಾಗಿ ಲಸಿಕೆ ಹಾಕಲು ಯೋಜಿಸಲಾಗಿದೆ. ಲಸಿಕಾ ಅಭಿಯಾನವು
ಬೆಳಿಗ್ಗೆ 6.30 ರಿಂದ 10 ಗಂಟೆಯವರೆಗೆ ನಡೆಯಲಿದ್ದು ಈ
ಅವಧಿಯಲ್ಲಿ ನಿಯೋಜಿತ ಲಸಿಕಾ ತಂಡವು ಪ್ರತಿ ಹಳ್ಳಿಗೆ ಭೇಟಿ
ನೀಡಿ ಉಚಿತವಾಗಿ ಲಸಿಕೆ ಹಾಕಲಾಗುವುದು. ಜಿಲ್ಲೆಯಲ್ಲಿನ
ರೈತರು ತಮ್ಮ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ
ಹಾಕಿಸಿಕೊಳ್ಳುವ ಮೂಲಕ ಕಾಲುಬಾಯಿ ರೋಗ
ನಿಯಂತ್ರಣದಲ್ಲಿ ಸಹಕರಿಸಬೇಕಿದೆ.
ಹೆಚ್ಚಿನ ಮಾಹಿತಿಗಾಗಿ ಡಾ.ಜಗದೀಶ್ ಪಿ.ವಿ, ಸಹಾಯಕ
ನಿರ್ದೇಶಕರು, ದಾವಣಗೆರೆ ದೂ.ಸಂ: 9448005250, 08192-
296832 ಡಾ. ದೇವೇಂದ್ರಪ್ಪ ಆರ್, ಸಹಾಯಕ ನಿರ್ದೇಶಕರು,
ಚನ್ನಗಿರಿ ದೂ.ಸಂ: 9448571800 ಡಾ. ನಂದಾ ಎಸ್.ಎಲ್. ಸಹಾಯಕ
ನಿರ್ದೇಶಕರು, ಹರಿಹರ ದೂ.ಸಂ: 8073900950 ಡಾ. ಬಾಬುರತ್ನ,
ಸಹಾಯಕ ನಿರ್ದೇಶಕರು, ಹೊನ್ನಾಳಿ ದೂ.ಸಂ: 9448170225
ಡಾ. ಲಿಂಗರಾಜು, ಕೆ.ಬಿ. ಸಹಾಯಕ ನಿರ್ದೇಶಕರು, ಜಗಳೂರು
ದೂ.ಸಂ: 8088882755 ಸಹಾಯಕ ನಿರ್ದೇಶಕರನ್ನು
ಸಂಪರ್ಕಿಸಬಹುದೆಂದು ಪಶುಪಾಲನಾ ಮತ್ತು ಪಶುವೈದ್ಯ
ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.