ದಾವಣಗೆರೆ ಅ.01
2020-21 ನೇ ಸಾಲಿನಲ್ಲಿ ಕರ್ನಾಟಕ ಅಲೆಮಾರಿ ಮತ್ತು ಅರೆ
ಅಲೆಮಾರಿ ಅಭಿವೃದ್ದಿ ನಿಗಮದಿಂದ ಅಲೆಮಾರಿ ಸಮಾಜಕ್ಕೆ ಸೇರಿದ
ಜನಾಂಗದವರ ಆರ್ಥಿಕ ಅಭಿವೃದ್ದಿಗಾಗಿ ಅರ್ಜಿ ಆಹ್ವಾನಿಸಿದೆ.
ಅಲೆಮಾರಿ ಸಮಾಜಕ್ಕೆ ಸೇರಿದ ಪ್ರವರ್ಗ-1ರ ಬೈರಾಗಿ(ಬಾವ),
ಬಾಲ, ಸಂತೋಷಿ-ಜೋಷಿ, ಬಾಜಿಗರ್, ಭರಡಿ, ಬುಡಬುಡಕಿ-ಜೋಷಿ-
ಗೋಂಧಳಿ, ಚಾರ, ಚಿತ್ರಕಥಿ-ಜೋಷಿ, ಧೋಲಿ, ಡವೇರಿ, ದೊಂಬರಿ,
ಘಿಸಾಡಿ, ಗರುಡಿ, ಗೋಪಾಲ್, ಗೊಂದಳಿ, ಹೆಳವ, ಜೋಗಿ, ಕೇಲ್ಕರಿ,
ಕೋಲಟಿ, ನಂದಿವಾಲ-ಜೋಷಿ-ಗೊಂದಳಿ, ಪುಲ್‍ಮಾಲ್ಲಿ ನಾಥಪಂಥಿ-
ಡೌರಿ-ಗೋದಾವಿ, ನಿರ್ತಿಕಾರಿ, ಪಾಂಗ್ಯುಯಲ್, ಜೋಷಿ, ಸಾನ್ಸಿಯಾ,
ಸರಾನಿಯ, ತಿರುಮಲಿ, ವಾಯ್ಡುವಾಸುದೇವ್, ವಾಡಿ, ವಾಗ್ರಿ, ವಿರ್,
ಬಜನಿಯ, ಶಿಕ್ಕಲಿಗಾರ್, ಗೊಲ್ಲ,, ಕಿಲ್ಲಿಕ್ಯಾತಸ್, ಸರೋಡಿ, ದುರ್ಗ-
ಮುರ್ಗ(ಬುರ್ ಬರ್‍ಚಿ), ಹಾವಗಾರ್, ಪಿಚಗುಂಟಲ, ಮಸಣಿಯ ರೋಗಿ,
ಬುಂಟೆಬೆಸ್ತ, ಕಟಿಬು, ದರ್ವೇಶ್, ಕಾಶಿ ಕಾಪಾಡಿ, ದೊಂಬಿದಾಸ್ ಮತ್ತು
ಬೈಲ್‍ಪತರ್ ಜನಾಂಗದವರ ಆರ್ಥಿಕ ಅಭಿವೃದ್ದಿಗಾಗಿ ಸ್ವಯಂ
ಉದ್ಯೋಗ ಸಾಲ ಯೋಜನೆ, ಸ್ವಸಹಾಯ ಗುಂಪುಗಳ
ಮೂಲಕ ಸಾಲ ಮತ್ತು ಸಹಾಯಧನ ಯೋಜನೆ, ಅರಿವು
ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ,
ಭೂಖರೀದಿ ಯೋಜನೆ ಮತ್ತು ಅರಿವು ಶೈಕ್ಷಣಿಕ ಸಾಲ
ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಭೂಖರೀದಿ
ಯೋಜನೆ ಹಾಗೂ ಬ್ಯಾಂಕ್‍ಗಳ ಸಹಯೋಗದೊಂದಿಗೆ ಸಾಲ
ಮತ್ತು ಸಹಾಯಧನದ ಸೌಲಭ್ಯ ಪಡೆಯಲು ಅರ್ಜಿ
ಆಹ್ವಾನಿಸಲಾಗಿದೆ.
ನಿಗಮದ ಸೌಲಭ್ಯ ಪಡೆಯಲು ಅರ್ಜಿದಾರರು ಪ್ರವರ್ಗ-
1ಕ್ಕೆ ಸೇರಿರಬೇಕು. ಕುಟುಂಬದ ವಾರ್ಷಿಕ ವರಮಾನ
ಗ್ರಾಮಾಂತರ ಪ್ರದೇಶದವರಿಗೆ ರೂ.98,000/- ಪಟ್ಟಣ
ಪ್ರದೇಶದವರಿಗೆ ರೂ.1,20,000/-ಗಳ ಒಳಗಿರಬೇಕು. ಆಧಾರ್
ಕಾರ್ಡ್/ಚುನಾವಣಾ ಗುರುತಿನ ಚೀಟಿ/ಪಾನ್ ಕಾರ್ಡ್
ದಾಖಲೆಗಳನ್ನು ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ
ಉಳಿತಾಯ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಸರ್ಕಾರದ/ನಿಗಮಗಳ ಯಾವುದಾದರು
ಯೋಜನೆಯಡಿಯಲ್ಲಿ ಕುಟುಂಬದ ಯಾರೇ ಆಗಲಿ ಈಗಾಗಲೇ
ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ
ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಪಡೆಯಲು
ಅರ್ಹರಿರುವುದಿಲ್ಲ ಮತ್ತು ಒಂದು ಕುಟುಂಬದಲ್ಲಿ ಒಬ್ಬರಿಗಿಂತ
ಹೆಚ್ಚಿನವರಿಗೆ ಸೌಲಭ್ಯ ಒದಗಿಸಲಾಗುವುದಿಲ್ಲ. ಮಹಿಳೆಯರಿಗೆ
ಶೇ.33 ರಷ್ಟು ಹಾಗೂ ಅಂಗವಿಕಲರಿಗೆ ಶೇ.5 ರಷ್ಟು ಮೀಸಲು
ನಿಗದಿಪಡಿಸಲಾಗಿರುತ್ತದೆ ಮತ್ತು ನಿಗಮದ ನಿರ್ದೇಶಕ
ಮಂಡಳಿಯು ಕಾಲಕಾಲಕ್ಕೆ ವಿಧಿಸುವ ಇನ್ನಿತರ
ಅರ್ಹತೆಗಳನ್ನು ಹೊಂದಿದವರಾಗಿರಬೇಕು.
ಈ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಇಚ್ಚಿಸುವವರು
ಅರ್ಜಿಯನ್ನು ಕಚೇರಿಯಲ್ಲಿ ಅಥವಾ ವೆಬ್‍ಸೈಟ್‍ನಲ್ಲಿ ಪಡೆದು
ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್
ಕಾರ್ಡ್, ಭಾವಚಿತ್ರವನ್ನು ಮತ್ತು ಅರಿವು ಶೈಕ್ಷಣಿಕ ಸಾಲಕ್ಕೆ
ಸಂಬಂಧಿಸಿದಂತೆ ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ
ದಾಖಲಾತಿಗಳು, ಗಂಗಾ ಕಲ್ಯಾಣ ನೀರಾವರಿ, ಕೊಳವೆಬಾವಿ ಸೌಲಭ್ಯ
ಪಡೆಯಲು ಅರ್ಜಿದಾರರು ಹೊಂದಿರುವ ಜಮೀನಿನ
ದಾಖಲಾತಿಗಳು ಮತ್ತು ಸಣ್ಣ ಮತ್ತು ಅತಿಸಣ್ಣ ರೈತರ
ಪ್ರಮಾಣ ಪತ್ರಗಳನ್ನು ಮತ್ತು ಭೂ ಖರೀದಿಗೆ
ಸಂಬಂಧಿಸಿದಂತೆ ಜಮೀನುದಾರರ ಕಂದಾಯ ದಾಖಲೆಗಳನ್ನು
ನಿಗಮದ ವೆಬ್‍ಸೈಟ್ ತಿತಿತಿ.ಜbಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ
ಆನ್‍ಲೈನ್‍ನಲ್ಲಿ ಅಥವಾ ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ
ಇದ್ದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ
ನಿಗಮದ ಜಿಲ್ಲಾ ಕಚೇರಿಯಿಂದ ಅರ್ಜಿಗಳನ್ನು ಪಡೆದು ಅ.05
ರೊಳಗಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ
ದಾಖಲೆಗಳೊಂದಿಗೆ ಅ.29 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ
ಮಾಹಿತಿಗಾಗಿ ದೂ.ಸಂ: 08192-230934ನ್ನು ಸಂಪರ್ಕಿಸಬಹುದೆಂದು
ಕರ್ನಾಟಕ ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ದಿ ನಿಗಮದ
ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.