ದಾವಣಗೆರೆ ಅ.03
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ದಾವಣಗೆರೆ
ಪ್ರಾದೇಶಿಕ ಕೇಂದ್ರವು ರಾಜ್ಯ
ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ಮತ್ತು ಅಖಿಲ
ಭಾರತ ಸಾಹಿತ್ಯ ಪರಿಷತ್, ಪಟೇಲ್ ಬಡಾವಣೆ ಘಟಕ ಇವರ
ಸಂಯುಕ್ತಾಶ್ರಯದಲ್ಲಿ ‘ಹೊಸ ಶಿಕ್ಷಣ ನೀತಿ ಮತ್ತು
ಭಾರತೀಯತೆಯ ಒಳನೋಟ’ ಎಂಬ ಸಂವಾದ
ಕಾರ್ಯಕ್ರಮವನ್ನು ಕೆಎಸ್‍ಓಯು ಪ್ರಾದೇಶಿಕ
ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ವಿಷಯ ಮಂಡಿಸಿದ ಅಂಕಣಕಾರ
ಮೈಸೂರಿನ ಪ್ರವೀಣ್‍ಕುಮಾರ್ ಮಾವಿನಕಾಡು ಇವರು 2020 ರ
ಹೊಸ ಶಿಕ್ಷಣ ನೀತಿಯು ಜಗತ್ತಿನ ಮೊದಲ ನಾಗರೀಕ ದೇಶವಾದ
ಭಾರತದ ಅಸ್ಮಿತೆಗಳನ್ನು ಹಾಗೂ ದೇಶೀಯ
ಮೌಲ್ಯಗಳನ್ನು ಯುವ ಸಮುದಾಯಕ್ಕೆ
ಅರ್ಪಿಸುವುದರೊಂದಿಗೆ ಭಾರತವನ್ನು ವಿಶ್ವ
ಗುರುವನ್ನಾಗಿಸಲು ಸಹಕಾರಿಯಾಗುತ್ತದೆ. ಹೊಸ ಶಿಕ್ಷಣ
ನೀತಿಯು ಇನ್ನೂ ಕೆಲವು ವರ್ಷಗಳ ಕಾಲ ಚರ್ಚೆ ಮತ್ತು
ತಿದ್ದುಪಡಿಗೆ ತನ್ನನ್ನು ಮುಕ್ತವಾಗಿ
ತೆರೆದುಕೊಂಡಿರುವುದರಿಂದ ಇಂತಹ ಒಂದು ಐತಿಹಾಸಿಕ
ಬದಲಾವಣೆಯಲ್ಲಿ ನಾವೆಲ್ಲರೂ ಕಡ್ಡಾಯವಾಗಿ
ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು
ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಹೊಸ ಶಿಕ್ಷಣ ನೀತಿಯ ಪ್ರಚಾರ
ರಾಯಭಾರಿಯಾಗಿ ಮತ್ತು ಕರ್ನಾಟಕದಲ್ಲಿ ಮೊದಲ ಅಧಿಕೃತ
ಪ್ರಚಾರ ಶಿಕ್ಷಣ ಸಂಸ್ಥೆಯಾಗಿ ಮಾನ್ಯತೆ ಪಡೆದ ದಾವಣಗೆರೆ
ಪ್ರಾದೇಶಿಕ ಕೇಂದ್ರದ ಪೋಸ್ಟರ್‍ನ್ನು ಬಿಡುಗಡೆ
ಮಾಡಲಾಯಿತು.ಒಥಿಓಇP ಪ್ರಚಾರ ರಾಯಭಾರಿ ಹಾಗೂ ಪ್ರಾದೇಶಿಕ
ನಿರ್ದೇಶಕ ಡಾ.ಸುಧಾಕರ ಹೊಸಳ್ಳಿ, ಅಖಿಲ ಭಾರತ ಸಾಹಿತ್ಯ
ಪರಿಷತ್ ಸಂಚಾಲಕ ಉಪಸ್ಥಿತರಿದ್ದರು.