ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ:- 4.10 2020ರಂದು ಇಂದು ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಮುಖಂಡರಾದ ಡಿ.ಎಸ್ ಪ್ರದೀಪ್ ಗೌಡ್ರು ರವರು ಎಬಿಸಿನ್ಯೂಸ್ ಆನ್ಲೈನ್ ಪತ್ರಿಕಾಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿ ಉತ್ತರಪ್ರದೇಶದಲ್ಲಿ ವಾಲ್ಮೀಕಿ ಸಮಾಜದ ಹುಡುಗಿಯನ್ನ ಅತ್ಯಾಚಾರ ಮಾಡಿ ಹತ್ಯೆಗೈದರು ತ್ತಾರೆ .ಆ ಹುಡುಗಿಯ ನೈಜವಾದ ಫೋಟೋ ಸಿಕ್ಕಿಲ್ಲ, ಅದರ ಬದಲಾಗಿ 2018ರ ಚಂಡಿಗಡದಲ್ಲಿ ಮಾನೀಷಾ ಯಾದವ್ ಎಂಬ ಹುಡುಗಿ ವೈದ್ಯರ ನಿರಲಕ್ಷದಿಂದ ಮೃತಪಟ್ಟಿದ್ದರು. ಈಗ ಆದರ ವಿರುದ್ಧ ಆಕೆಯ ಕುಟುಂಬದವರು ಜಸ್ಟೀಸ್ ಫಾರ್ ಮಾನೀಷಾ ಎಂಬ ಆಂದೋಲನವನ್ನು ಆರಂಭಿಸಿದರು. ಸದ್ಯ ಅದೇ ಫೋಟೋವನ್ನು ಹಥ್ರಸ್ ಸಂತ್ರಸ್ತೆ ಎಂದು ಪೋಸ್ಟ್ ಮಾಡಿ ಪ್ರತಿಭಟನೆಗೆ ಅದೇ ಫೋಟೋವನ್ನು ಬಳಕೆ ಮಾಡುತ್ತಿದ್ದು ಇದು ವಿಪರ್ಯಾಸದ ಸಂಗತಿಯಾಗಿದೆ. ಆದ ಕಾರಣ ಯಾವುದೇ ಪಕ್ಷದವರು ಮತ್ತು ಸಂಘಟನೆಯವರು ಮಾನೀಷಾ ಯಾದವ್ ಅವರ ಫೋಟೋವನ್ನು ದೇಶಾದ್ಯಂತ ಯಾರು ಬಳಸಬೇಡಿ ಎಂದು ಅವರಿಗೆ ಸಂತಾಪವನ್ನು ವ್ಯಕ್ತಪಡಿಸುತ್ತಾ ಎಬಿಸಿನ್ಯೂಸ್ ಆನ್ಲೈನ್ ಪ್ರತಿಕಾ ಗೋಷ್ಠಿಯಲ್ಲಿ ತಿಳಿಸಿದರು.
ದಿನಾಂಕ 2 -10- 2020 ರಂದು ಕನ್ನಡಪ್ರಭ ಮತ್ತು ಇಂಡಿಯಾ ಟುಡೇ ಪತ್ರಿಕೆಯಲ್ಲಿ ಪ್ರಕಟವಾದ ಅವರ ವಿಷಯ ಈ ಕೆಳಗಿನಂತಿದೆ👇
ಉತ್ತರಪ್ರದೇಶದ ಹಥ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ 19 ವರ್ಷದ ದಲಿತ ಯುವತಿಯ ಪ್ರಕರಣದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇದರೊಂದಿಗೆ ಆ ಯುವತಿ ಚಿತ್ರ ಎಂದು ಹುಡುಗಿಯೊಬ್ಬಳ ಫೋಟೋವನ್ನು ಪೋಸ್ಟ್ ಮಾಡಲಾಗುತ್ತಿದೆ. ಕೆಲ ಸುದ್ದಿ ವಾಹಿನಿಗಳು ಇದೇ ಫೋಟೋ ಪ್ರಕಟಿಸಿದೆ. ಆದರೆ
ವೈರಲ್ ಫೋಟೋ ನಿಜಕ್ಕೂ ಹಥ್ರಾಸ್ ಸಂತ್ರಸ್ತೆ ಫೋಟೋವೇ ಎಂದು ಇಂಡಿಯಾ ಟುಡೇ ಪರಿಶೀಲಿಸಿದಾಗ ವೈರಲ್ ಫೋಟೋದಲ್ಲಿರುವ ಹುಡುಗಿ, ಅತ್ಯಾಚಾರ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿದು ಬಂದಿದೆ.
ಸುದ್ದಿವಾಹಿನಿಗೆ ಹಥ್ರಾಸ್ ಸಂತ್ರಸ್ತೆಯ ಸೋದರರೇ ಈ ಬಗ್ಗೆ ಸ್ಪಷ್ಟ ನೀಡಿದ್ದು, “ಫೋಟೋದಲ್ಲಿರುವ ಹುಡುಗಿ ತಮ್ಮ ಸೋದರಿ ಅಲ್ಲ’ ಎಂದು ತಿಳಿಸಿದ್ದಾರೆ. ಸ್ಥಳೀಯರು ಸಹ ಫೋಟೋದಲ್ಲಿರುವ ಹುಡುಗಿ ಸಂತ್ರಸ್ತೆ ಅಲ್ಲ ಎಂದಿದ್ದಾರೆ. ಅಂದಹಾಗೆ ವೈರಲ್ ಚಿತ್ರದಲ್ಲಿರುವ ಹುಡುಗಿ ಹೆಸರು ಮನಿಷಾ ಯಾದವ್. ಉತ್ತರ ಪ್ರದೇಶ ಅಯೋಧ್ಯೆ ಮೂಲದ ಮನೀಷಾ ಸರಿಯಾದ ವೈದ್ಯಕೀಯ ಸೌಲಭ್ಯ ಲಭ್ಯವಾಗಿದೆ 2018ರ ಜುಲೈ 22ರಂದು ಚಂಡೀಗಢದಲ್ಲಿ ಮೃತಪಟ್ಟಿದ್ದರು. ವೈದ್ಯರ ನಿರ್ಲಕ್ಷ್ಯದ ವಿರುದ್ಧ ಈಗ ಆಕೆಯ ಕುಟುಂಬದವರು ‘ಜಸ್ಟಿಸ್ ಫಾರ್ ಮನೀಷಾ’ ಎಂಬ ಆಂದೋಲ. ಆರಂಭಿಸಿದ್ದರು. ಸದ್ಯ ಅದೇ ಫೋಟೋವನ್ನು ಹಥ್ರಾಸ್ ಸಂತ್ರಸ್ತೆ ಎಂದು ಪೋಸ್ಟ್ ಮಾಡಿ ಸುಳ್ಳು ಸುದ್ದಿ ಹರಡಲಾಗುತ್ತಿದೆ.