ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕೇಂದ್ರ ಸರ್ಕಾರ 2003 ರ ವಿದ್ಯುತ್ ಪ್ರಸ್ತಾಪಿತ ತಿದ್ದುಪಡಿಯನ್ನು ತರಲು ಉದ್ದೇಶಿಸಿದ್ದು, ಹಾಗೂ ವಿತರಣಾ ಕಂಪನಿಗಳನ್ನು ಖಾಸಗೀಕರಣ ಗೊಳಿಸಿದ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದ್ದು, ಇದರಿಂದಾಗಿ, ರೈತರು/ಜನಸಾಮಾನ್ಯರು ಹೊರೆಯಾಗಿರುವುದರಿಂದ ಕೇಂದ್ರ ಸರ್ಕಾರದ ಈ ಜನವಿರೋಧಿ ಧೋರಣೆಯನ್ನು ಖಂಡಿಸಿ, ದಿನಾಂಕ: 05-10-2020 ರಂದು ಕಪ್ಪು ಬಟ್ಟೆಯನ್ನು ಧರಿಸಿ, ಬೆಳಿಗ್ಗೆ 9.30ಕ್ಕೆ ಸರಿಯಾಗಿ ನಮ್ಮ ಹೊನ್ನಾಳಿ ಉಪ ವಿಭಾಗದ ಕಛೇರಿಯ ಅಂಗಳದಲ್ಲಿ ಒಂದು ದಿನ ಸಾಂಕೇತಿಕವಾಗಿ ಪ್ರತಿಭಟಿಸುವ ಮೂಲಕ
ನಮ್ಮ ಬೇಡಿಕೆಗಳು (Our Demands) ಈ ಕೆಳಗಿನಂತಿವೆ
1.ಬೇಡಾ ಬೇಡಾ, ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಬೇಡ.
- ಬೇಡಾ,ಬೇಡಾ, ವಿದ್ಯುತ್ ಕ್ಷೇತ್ರದ ಖಾಸಗೀಕರಣ ಬೇಡ,
ಕೆಪಿಟಿಸಿಎಲ್ ಎಂಪ್ಲಾಯಿಸ್ ಯೂನಿಯನ್ ಜಿಂಧಬಾದ್
“ಏನೇ ಬರಲಿ ಒಗ್ಗಟ್ಟರಲಿ”
“ಕಾರ್ಮಿಕರ ಒಗ್ಗಟ್ಟ ಚಿರಾಯುವಾಗಲಿ” ಎಂದು ಘೋಷಣೆ ಕೂಗುವುದರ ಮೂಲಕ
ವಿರೋಧವನ್ನು ವ್ಯಕ್ತಪಡಿಸಿ ದೈನಂದಿನ ಕೆಲಸದಲ್ಲಿ ತೊಡಗಿಕೊಂಡರು.
ಈ ಮುಸ್ಕರದಲ್ಲಿ ಭಾಗಿಯಾದವರು:-ಎ.ಇ.ಇ ರವಿಕಿರಣ್, ಸತ್ಯನಾರಾಯಣ್ ಅಧ್ಯಕ್ಷರು ಪ್ರಾಥಮಿಕ ಸಮಿತಿ ಬೆಸ್ಕಾಂ ಹೊನ್ನಾಳಿ, ಎ.ಇ ವಿನಾಯಕ ಕುಂದೂರು,ಜೆ.ಇ ರುದ್ರನಾಯ್ಕ್, ಕಸೀನಕೆರೆ ನೀತೆಶ್, ಹಾಗೂ ಕಂದಾಯ ಇಲಾಖೆಯವರು, ಲೈನ್ ಮ್ಯಾನ್ ಗಳು, ಎಲ್ಲಾ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.