ದಾವಣಗೆರೆ ಅ.06
ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರಿಗೆ ವಿವಿಧ ರೀತಿಯ ಡಿಜಿಟಲ್
ಸೇವೆಗಳನ್ನು ನೀಡುವ ಸಲುವಾಗಿ ಸೇವಾ ಕೇಂದ್ರಗಳನ್ನು
ತೆರೆಯುವ ಉದ್ದೇಶದಿಂದ ಇಡಿಸಿಎಸ್ ಇ-ಗರ್ವನೆನ್ಸ್ ಎಂ.ಡಿ ಸಿಂಧು
ಬಿ.ರೂಪೇಶ್ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು
ಸೋಮವಾರ ಬಾಡಾ ಮತ್ತು ತೋಳಹುಣಸೆ ಗ್ರಾಮಗಳಿಗೆ
ಭೇಟಿ ನೀಡಿ ಕೇಂದ್ರಗಳ ಪರಿಶೀಲನೆ ನಡೆಸಿದರು.
ಈ ವೇಳೆ ಸೇವಾಸಿಂಧು ಯೋಜನಾ ನಿರ್ದೇಶಕ ವರಪ್ರಸಾದ್,
ದಾವಣಗೆರೆ ತಹಶೀಲ್ದಾರ್ ಗಿರೀಶ್, ತಾಂತ್ರಿಕ ಸಿಬ್ಬಂದಿಗಳು
ಹಾಜರಿದ್ದರು.