ದಾವಣಗೆರೆ ಅ.06
ಭಾರತ ಸರ್ಕಾರದ ವಸತಿ ಹಾಗೂ ವ್ಯವಹಾರಗಳ
ಸಚಿವಾಲಯವು ಹೊಸ ಪದವೀಧರರಿಗೆ ಕಾಮಗಾರಿಗಳ
ವೃತ್ತಿಪರ ಕಲಿಕೆಯ ಅನುಭವ ಹೆಚ್ಚಿಸಲು ಸ್ಮಾರ್ಟ್‍ಸಿಟಿಗಳಲ್ಲಿ
ಟ್ಯುಲಿಪ್ ಕಾರ್ಯಕ್ರಮದಡಿ ಇಂಟರ್ನ್‍ಶಿಪ್‍ಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಟ್ಯುಲಿಪ್ ಕಾರ್ಯಕ್ರಮದಡಿ ದಾವಣಗೆರೆ ಸ್ಮಾರ್ಟ್ ಸಿಟಿ ವತಿಯಿಂದ 
ಇಂಟರ್ನ್ ಸಿವಿಲ್, ಎಲೆಕ್ಟ್ರಿಕ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಆಡಳಿತ
ಹಾಗೂ ಹಣಕಾಸು ವಿಭಾಗಗಳಲ್ಲಿ 6 ತಿಂಗಳ ಇಂಟರ್ನ್‍ಗಳಾಗಿ
ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿದ್ದು ಅರ್ಜಿ ಸಲ್ಲಿಸಲು ಅ.31
ಕಡೆಯ ದಿನವಾಗಿರುತ್ತದೆ.
ಈ ವೇದಿಕೆಯಡಿ ಪದವಿಯನ್ನು ಮುಕ್ತಾಯಗೊಳಿಸಿ 36
ತಿಂಗಳುಗಳವರೆಗಿನ ಪದವೀಧರರಿಗೂ ಅವಕಾಶ
ಕಲ್ಪಿಸಲಾಗಿದೆ. ಇಂಟರ್ನ್‍ಶಿಪ್‍ಗೆ ಆಯ್ಕೆಯಾಗುವ ಇಂಟರ್ನಿಗೆ
ಯಾವುದೇ ಪ್ರೋತ್ಸಾಹಧನವನ್ನು ಸ್ಮಾರ್ಟ್ ಸಿಟಿಯಿಂದ
ಭರಿಸಲಾಗುವುದಿಲ್ಲ.
ವಿದ್ಯಾರ್ಥಿಗಳು/ಪದವೀಧರರು
hಣಣಠಿ://ಜಚಿvಚಿಟಿಚಿgeಡಿesmಚಿಡಿಣಛಿiಣಥಿ.mಡಿಛಿ.gov.iಟಿ/ಣuಟiಠಿ-0 oಡಿ hಣಣಠಿs://iಟಿಣeಡಿಟಿshiಠಿ.ಚಿiಛಿಣe-
iಟಿಜiಚಿ.oಡಿg/ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತರು ಈ
ಕಾರ್ಯಕ್ರಮದ ಸದುಪಯೋಗ
ಪಡೆದುಕೊಳ್ಳಬೇಕೆಂದು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವ್ಯವಸ್ಥಾಪಕ
ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *