ದಾವಣಗೆರೆ ಅ.06
ಸ್ಥಳೀಯ ಅಭ್ಯರ್ಥಿಗಳ ಅನುಕೂಲಕ್ಕಾಗಿ ಹಾಗೂ ಈ ಫ್ಯಾಷನ್
ಡಿಸೈನಿಂಗ್ ಕ್ಷೇತ್ರಕ್ಕೆ ವೃತ್ತಿ ಕೌಶಲ್ಯಗಳನ್ನು ಒಳಗೊಂಡ
ಪದವೀಧರ ಅಭ್ಯರ್ಥಿಗಳನ್ನು ಸೃಷ್ಟಿಸುವ
ಸದುದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾನಿಲಯವು ಹೊಸ
ಕೋರ್ಸ್‍ನ್ನು ಪ್ರಸಕ್ತ ಶೈಕ್ಷಣಿಕ ವರ್ಷ 2020-21 ರಿಂದ
ಆರಂಭಿಸಲಾಗುತ್ತಿದ್ದು, ಅ.22 ಅರ್ಜಿ ಸಲ್ಲಿಸಲು ಕಡೆಯ
ದಿನವಾಗಿದೆ.
ಸ್ನಾತಕೋತ್ತರ ಎಂ.ಎಸ್ಸಿ ಫ್ಯಾಷನ್ ವಿನ್ಯಾಸ ಅಧ್ಯಯನ
ವಿಭಾಗವು ಎರಡು ವರ್ಷದ (ನಾಲ್ಕು ಸೆಮಿಸ್ಟರ್) ಕೋರ್ಸ್
ಆಗಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ
ಪಡೆಯಬಹುದು. ಕೋರ್ಸ್‍ನ ಪ್ರವೇಶಾತಿಗಾಗಿ ಈಗಾಗಲೇ
ವಿಶ್ವವಿದ್ಯಾನಿಲಯವು ಅಧಿಸೂಚನೆ ಹೊರಡಿಸಿದೆ.
ಕೋರ್ಸ್‍ನ ಉದ್ದೇಶ: ಫ್ಯಾಷನ್ ವಿನ್ಯಾಸದಲ್ಲಿ ವಿದ್ಯಾರ್ಥಿಗಳಿಗೆ
ಸೃಜನಶಿಲತೆ ಮತ್ತು ಹೊಸತನವನ್ನು
ಕಂಡುಕೊಳ್ಳುವುದು ಮತ್ತು ಫ್ಯಾಷನ್ ವಿನ್ಯಾಸದ
ಪ್ರಕ್ರಿಯೆಯಲ್ಲಿ ಒಳಗೊಂಡಿರುವ ತಾಂತ್ರಿಕ ಅಂಶಗಳ
ಬಗ್ಗೆ ಜ್ಞಾನವನ್ನು ನೀಡುವುದು ಈ ಕೋರ್ಸ್‍ನ ಮುಖ್ಯ
ಉದ್ದೇಶವಾಗಿದೆ.
ಅರ್ಹತೆ: ಈ ಕೋರ್ಸ್ ವ್ಯಾಸಂಗ ಮಾಡಲಿಚ್ಚಿಸುವ ಅಭ್ಯರ್ಥಿಗಳು
ಮಾನ್ಯತೆ ಪಡೆದ ದೇಶದ ಯಾವುದೇ ಅಂಗೀಕೃತ
ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿಯನ್ನು (ಬಿಎ, ಬಿಎಸ್‍ಸಿ,
ಬಿಕಾಂ, ಬಿಬಿಎಂ, ಬಿಬಿಎ, ಬಿಇ ಇನ್ನಿತರೆ) ಹೊಂದಿರಬೇಕು.
ಕೋರ್ಸ್‍ನ ಮಹತ್ವ/ಉಪಯೋಗ: ಮಾರುಕಟ್ಟೆ ಆಧಾರಿತ
ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ವಿನ್ಯಾಸಕಾರರ
ಬೇಡಿಕೆ ಹೆಚ್ಚುತ್ತಿದೆ. ಮುಖ್ಯವಾಗಿ ಜನರು ಹೆಚ್ಚು- ಹೆಚ್ಚು
ಫ್ಯಾಷನ್ ಪ್ರಜ್ಞೆಯನ್ನು ಪಡೆಯುತ್ತಿದ್ದಾರೆ. ಹೀಗಾಗಿ
ಫ್ಯಾಷನ್ ವಿನ್ಯಾಸದಲ್ಲಿ ಸ್ನಾತಕೋತ್ತರ ಪದವಿಯನ್ನು
ಪಡೆದರೆ ಅನುಕೂಲವಿದೆ. ಫ್ಯಾಷನ್ ವಿನ್ಯಾಸ
ಪದವೀಧರರನ್ನು ಪ್ರಸಿದ್ಧ ವಿನ್ಯಾಸಕಾರರು
ಮಾತ್ರವಲ್ಲದೇ ಸ್ಥಳೀಯ ಸಗಟು ಮತ್ತು ಚಿಲ್ಲರೆ ಮಾರಾಟ
ಮಳಿಗೆಗಳಲ್ಲೂ ಬೇಡಿಕೆ ಇದೆ. ಅವರ ನೇಮಕಕ್ಕೆ ಆದ್ಯತೆ
ನೀಡುತ್ತಿವೆ.
ಉದ್ಯೋಗಾವಕಾಶಗಳು: ಫ್ಯಾಷನ್ ಉದ್ಯಮಕ್ಕೆ
ಸೇರಬಯಸುವ ಆಕಾಂಕ್ಷಿಗಳಿಗೆ ಮುಂದೆ ಸಾಕಷ್ಟು
ಅವಕಾಶಗಳಿವೆ. ಕೋರ್ಸ್ ಮುಗಿದ ನಂತರ ಫ್ಯಾಷನ್
ವಿನ್ಯಾಸಕಾರರಾಗಿ ಹಾಗೂ ಕಾರ್ಪೋರೇಟ್ ಕಂಪನಿಗಳೊಂದಿಗೆ
ಕೆಲಸ ಮಾಡಬಹುದು.
ಕ್ಯಾಂಪಸ್ ಆವರಣದಲ್ಲಿ ಅರ್ಜಿ ಮತ್ತು ಕೈಪಿಡಿ ದೊರೆಯುವುದು.
ಅರ್ಜಿ ಸಲ್ಲಿಸಲು ಅ.22 ಕೊನೆಯ ದಿನವಾಗಿರುತ್ತದೆ. ಅ.27, 28
ನತ್ತಯ ಪ್ರವೇಶ ಪರೀಕ್ಷೆ (ತಾತ್ಕಾಲಿಕ) ನಡೆಯಲಿದ್ದು,
ಕೌನ್ಸಲಿಂಗ್ ಪ್ರಕ್ರಿಯೆ
ನ.02 ಮತ್ತು ನ.03 ಬೆಳಗ್ಗೆ 10.30 ಗಂಟೆಗೆ
ನಡೆಯಲಿದೆ(ಮೆರಿಟ್ ಸೀಟುಗಳು: ಜನರಲ್ ಮೆರಿಟ್-Sಅ/Sಖಿ/ಅಚಿಣ-I/II-ಂ/III-
ಂ/III-ಃ) (ತಾತ್ಕಾಲಿಕ), ನ.04 ಬೆಳಗ್ಗೆ 10.30 ಗಂಟೆಗೆ (ತಾತ್ಕಾಲಿಕ)
ಓಪನ್ ಮೆರಿಟ್ ಪ್ರವೇಶಾತಿ ನಡೆಯಲಿದ್ದು ನ.05 ಖಾಲಿ ಉಳಿದ
ಸೀಟುಗಳ ಮಾಹಿತಿ ಲಭ್ಯವಾಗುತ್ತದೆ.
ಈ ಕೋರ್ಸ್ ಸೇರಲಿಚ್ಚಿಸುವ ಅಭ್ಯರ್ಥಿಗಳು ಅರ್ಜಿ ಹಾಗೂ
ಇನ್ನಿತರೇ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ
ವೆಬ್‍ಸೈಟ್ hಣಣಠಿs://ಜಚಿvಚಿಟಿgeಡಿeuಟಿiveಡಿsiಣಥಿ.ಚಿಛಿ.iಟಿ/ ಭೇಟಿ
ನೀಡಬಹುದಾಗಿದ್ದು ಸಂಯೋಜನಾಧಿಕಾರಿಗಳ
ಮೊ.ನಂ.7892631239 ಗೆ ಸಂಪರ್ಕಿಸಬಹುದೆಂದು ಪ್ರಕಟಣೆ
ತಿಳಿಸಿದೆ.