ದಾವಣಗೆರೆ ಅ.07
ಭಾರತ ಚುನಾವಣಾ ಆಯೋಗವು ಕರ್ನಾಟಕ ಆಗ್ನೇಯ
ಪದವೀಧರರ ಕ್ಷೇತ್ರದ ಚುನಾವಣಾ ವೇಳಾಪಟ್ಟಿಯನ್ನು
ಹೊರಡಿಸಿದ್ದು ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಕೋವಿಡ್-
19 ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ
ಪ್ರಚಾರಗಳಲ್ಲಿ ಅಭ್ಯರ್ಥಿಗಳು ಮತ್ತು ಪಕ್ಷದವರು
ಆಯೋಗ ಹೊರಡಿಸಿರುವ ಕೆಳಕಂಡ ಮಾರ್ಗಸೂಚಿಗಳನ್ನು
ಅನುಸರಿಸಬೇಕಿದೆ.
ಚುನಾವಣಾ ಚಟುವಟಿಕೆಗಳನ್ನು ಕೈಗೊಳ್ಳುವ ವೇಳೆ
ಅಭ್ಯರ್ಥಿಗಳು ಮತ್ತು ಪಕ್ಷದವರು ಕೋವಿಡ್-19
ನಿಯಂತ್ರಣಕ್ಕೆ ಸಂಬಂಧಿಸಿದ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್
ಸ್ಕ್ಯಾನರ್ ಇತ್ಯಾದಿಗಳ ಬಳಕೆ ಮಾಡಬೇಕು.
ಕೋವಿಡ್ 19 ಮಾರ್ಗಸೂಚಿಗಳನ್ವಯ ಸಾರ್ವಜನಿಕ
ಸಭೆ/ರ್ಯಾಲಿಗಳನ್ನು ಆಯೋಜಿಸಲು ಕ್ರಮ ವಹಿಸಬೇಕು.
ಸಾರ್ವಜನಿಕ ಸಭೆಗಳನ್ನು ನಡೆಸಲು ಪ್ರವೇಶ/ನಿರ್ಗಮನ
ದ್ವಾರಗಳನ್ನು ಹೊಂದಿರುವ ಮೈದಾನಗಳನ್ನು
ಮುಂಚಿತವಾಗಿ ಗುರುತಿಸಿಕೊಳ್ಳತಕ್ಕದ್ದು.
ಸಾರ್ವಜನಿಕ ಸಭೆಯಲ್ಲಿ ಸಾಮಾಜಿಕ ಅಂತರ
ಕಾಯ್ದುಕೊಳ್ಳುವುದಕ್ಕಾಗಿ ಮುಂಚಿತವಾಗಿ ಅಂತರವನ್ನು
ಗುರುತಿಸಿ ಮಾರ್ಕ್ ಮಾಡಬೇಕು. ಹಾಗೂ ಕೋವಿಡ್ 19 ಗೆ
ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ
ಪಾಲಿಸತಕ್ಕದ್ದು.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ
ಮಾರ್ಗಸೂಚಿಗಿಂತ ಹೆಚ್ಚಿನ ಜನರು ಸಾರ್ವಜನಿಕ ಸಭೆಗಳಲ್ಲಿ
ಪಾಲ್ಗೊಳ್ಳದಂತೆ ಖಾತ್ರಿಪಡಿಸಿಕೊಳ್ಳುವುದು.
ಮೇಲ್ಕಂಡ ಷರತ್ತುಗಳನ್ನು ಕಡ್ಡಾಯವಾಗಿ ಪಾಲನೆ
ಮಾಡಿ ಚುನಾವಣಾ ಪ್ರಚಾರದ ಸಭೆ, ಸಮಾರಂಭಗಳನ್ನು
ಹಾಗೂ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಬೇಕು. ಹಾಗೂ
ಈ ಬಗ್ಗೆ ಮುಂಚಿತವಾಗಿ ಅನುಮತಿಯನ್ನು ಪಡೆಯಬೇಕೆಂದು
ಜಿಲ್ಲಾಧಿಕಾರಿಗಳು ಮತ್ತು ಕ.ಆ.ಪದ.ಕ್ಷೇತ್ರದ ಸಹಾಯಕ
ಚುನಾವಣಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.