ದಾವಣಗೆರೆ ಅ.08
2020-21ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್,
ಜೈನ್, ಸಿಖ್, ಬೌದ್ದ, ಪಾರ್ಸಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ಪೂರ್ವ/ಮೆಟ್ರಿಕ್
ನಂತರದ ಮತ್ತು ಮೆರಿಟ್ ಕಂ ಮೀನ್ಸ್ ವ್ಯಾಸಂಗ ಮಾಡುವ
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಅರ್ಜಿ ಆಹ್ವಾನಿಸಲಾಗಿದೆ.
ಅಲ್ಪಸಂಖ್ಯಾತ ಇಲಾಖೆ ವೆಬ್ಸೈಟ್ goಞಜom.ಞಚಿಡಿ.ಟಿiಛಿ.iಟಿ ನಲ್ಲಿ ಪರಿಶೀಲಿಸಿ
ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದ್ದು ವಿದ್ಯಾರ್ಥಿಗಳು
ಆನ್ಲೈನ್ ಮುಖಾಂತರ ಸಲ್ಲಿಸಿದ ಮೆಟ್ರಿಕ್ಪೂರ್ವ ಅರ್ಜಿಗಳನ್ನು
ವ್ಯಾಸಂಗ ಮಾಡುತ್ತಿರುವ ಶಾಲೆಯಲ್ಲಿ ಹಾರ್ಡ್ ಕಾಪಿಯನ್ನು
ಸಲ್ಲಿಸುವುದು ಹಾಗೂ ಮೆಟ್ರಿಕ್ ನಂತರದ/ಮೆರಿಟ್ ಕಂ ಮೀನ್ಸ್
ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಆಯಾ ತಾಲ್ಲೂಕಿನಲ್ಲಿ
ಕಾರ್ಯ ನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮಾಹಿತಿ
ಕೇಂದ್ರಗಳಿಗೆ ಸಲ್ಲಿಸುವುದು.
ಮೆಟ್ರಿಕ್ ಪೂರ್ವ, ಪೋಸ್ಟ್ ಮೆಟ್ರಿಕ್ ಮತ್ತು ಮೆರಿಟ್ ಕಂ
ಮೀನ್ಸ್ ವಿದ್ಯಾರ್ಥಿವೇನಕ್ಕೆ ಅರ್ಜಿ ಸಲ್ಲಿಸಲು ಅ.31 ಕಡೆಯ ದಿನವಾಗಿದೆ.
ಹೆಚ್ಚಿನ ಮಾಹಿತೆಗೆ ಮಾಹಿತಿ ಕೇಂದ್ರದ ದೂರವಾಣಿ
ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ
ಕಲ್ಯಾಣ ಇಲಾಖೆಯ ಜಿಲ್ಲಾ ಧಿಕಾರಿಗಳು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.