ಮಾನ್ಯ ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ರವರ ಮಾರ್ಗದರ್ಶನದಲ್ಲಿ ಕ್ಯಾಪ್ಟನ್ ಅಜಿತ್ಕುಮಾರ್ ಜಿ ಎ, ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರ ನಿರ್ದೇಶನದಂತೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ಗಾಂಜಾ ಅಕ್ರಮ ಪತ್ತೆಹಚ್ಚಲು ದಾಳಿ ನಡೆಸಲಾಗಿದ್ದು, 1) ಸಾಗರ ತಾಲ್ಲೂಕು, ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಾಪುರ ಗ್ರಾಮದ ಕಲ್ಲುಗುಡ್ಡೆ ಮಂಜಪ್ಪ ಬಿನ್ ಕೆರೆಯಪ್ಪ ಇವರಿಗೆ ಸೇರಿದ ವ್ಯವಸಾಯ ಜಮೀನಿನ ಶುಂಠಿ ಬೆಳೆಯ ಮದ್ಯದಲ್ಲಿ ಅಕ್ರಮವಾಗಿ 15 ಗಾಂಜಾ ಗಿಡಿಗಳನ್ನು 2) ಸಾಗರ ತಾಲ್ಲೂಕು, ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಾಪುರ ಗ್ರಾಮದ ಸಣ್ಣಪ್ಪ ಬಿನ್ ಚೆಲುವರಾಯ ಇವರಿಗೆ ಸೇರಿದ ಮನೆಯ ಹಿಂಭಾಗದ ಅಡಿಕೆ ತೋಟದಲ್ಲಿ ಅಕ್ರಮವಾಗಿ 04 ಗಾಂಜಾ ಗಿಡಿಗಳನ್ನು ಬೆಳಿದಿರುವುದನ್ನು ಹಾಗೂ 3) ಸಾಗರ ತಾಲ್ಲೂಕು, ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಾಪುರ ಗ್ರಾಮದ ಕಲ್ಲುಗುಡ್ಡೆ ಮಂಜಪ್ಪ ಬಿನ್ ಕೆರೆಯಪ್ಪ ಇವರಿಗೆ ಸೇರಿದ ವ್ಯವಸಾಯ ಜಮೀನಿನ ಶುಂಠಿ ಬೆಳೆಯ ಮದ್ಯದಲ್ಲಿ ಅಕ್ರಮವಾಗಿ 15 ಗಾಂಜಾ ಗಿಡಿಗಳನ್ನು ಬೆಳಿದಿರುವುದನ್ನು ಪತ್ತೆಹಚ್ಚಿ ಶ್ರೀ ಡಿ.ಎನ್ ಹನುಮಂತಪ್ಪ, ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ಆಯುಕ್ತರ ಕಛೇರಿ, ಶಿವಮೊಗ್ಗ ಜಿಲ್ಲೆ ಇವರು ಎನ್ಡಿಪಿಎಸ್ ಕಾಯ್ದೆಯಡಿ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಸದರಿ 23 ಗಾಂಜಾಗಿಡಗಳ ಅಂದಾಜು ಮೌಲ್ಯ ರೂ.1,15,000/- ಗಳಾಗಿರುತ್ತದೆ. ಸದರಿ ಪ್ರಕರಣದ ಆರೋಪಿಗಳು ಪರಾರಿಯಾಗಿದ್ದು, ತನಿಖಾ ಸಂದರ್ಭದಲ್ಲಿ ಬಂದಿಸಬೇಕಾಗಿರುತ್ತದೆ.
ಸದರಿ ಕಾರ್ಯಾಚರಣೆಯಲ್ಲಿ ಶ್ರೀ ಡಿ.ಎನ್ ಹನುಮಂತಪ್ಪ, ಅಬಕಾರಿ ನಿರೀಕ್ಷಕರು, ಶ್ರೀ ಜಾನ್ ಪಿ.ಜೆ, ಅಬಕಾರಿ ಉಪ ನಿರೀಕ್ಷರು ಮತ್ತು ಅಬಕಾರಿ ರಕ್ಷಕರಾದ ಶ್ರೀಮತಿ ರಾಜಮ್ಮ, ಚಂದ್ರಪ್ಪ, ಮುದಾಸಿರ್ ಅಹಮ್ಮದ್, ದೀಪಕ್ ಮಹಬಲೇಶ್ವರ, ಬಸವರಾಜ ಹಾಗೂ ವಾಹನ ಚಾಲಕ ಅರ್ಜುನ್ ಇತರ ಅಬಕಾರಿ ಸಿಬ್ಬಂಧಿಗಳು ಭಾಗವಹಿಸಿರುತ್ತಾರೆ.