ಆಧುನಿಕ ಕೃಷಿಯಲ್ಲಿ ಅಧಿಕ ಇಳುವರಿ ಪಡೆಯುವ
ತವಕದಲ್ಲಿ ಶಿಫಾರಸಿಗಿಂತ ಹೆಚ್ಚು ರಸಗೊಬ್ಬರ &ಚಿmಠಿ;
ಪೀಡೆನಾಶಕಗಳ ಅವೈಜ್ಞಾನಿಕ ಬಳಕೆಯಿಂದಾಗಿ ಕೃಷಿಗೆ
ಮಾಡುವ ವೆಚ್ಚವು ಅಧಿಕವಾಗಿ ಪಡೆಯುವ ಲಾಭಾಂಶ
ಕಡಿಮೆಯಾಗಿದೆ. ಆಹಾರವು ವಿಷಯುಕ್ತವಾಗುವುದರ
ಜೊತೆಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.
ಈ ದಿಶೆಯಲ್ಲಿ ಪ್ರಸ್ತುತವಾಗಿ ಅನುಸರಿಸುತ್ತಿರುವ ಆಧುನಿಕ
ಕೃಷಿಯಲ್ಲಿ ಬದಲಾವಣೆಯ ಅವಶ್ಯಕತೆಯಿದ್ದು,
ರಸಾಯನಿಕಗಳನ್ನು ಬಳಸದೇ ಖರ್ಚನ್ನು ಮಿತಗೊಳಿಸಿ,
ಪರಿಸರ ಸ್ನೇಹಿಯಾಗಿ ವಿಷಯುಕ್ತ ಆಹಾರ ಪಡೆಯಲು ಮುಖ್ಯ
ಆಹಾರ ಬೆಳೆಯಾದ ಭತ್ತದಲ್ಲಿ “ಪರಿಸರ ಸ್ನೇಹಿ ವಿಷಮುಕ್ತ
ಭತ್ತ” ಎನ್ನುವ ವಿಷಯದ ಬಗ್ಗೆ ಕೃಷಿ ಇಲಾಖೆಯ ಜಿಲ್ಲಾ ಕೃಷಿ

ತರಬೇತಿ ಕೇಂದ್ರದ ವತಿಯಿಂದ ಒಂದು ದಿನದ ತರಬೇತಿ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ
ಕಾರ್ಯಕ್ರಮದಲ್ಲಿ ನುರಿತ ಹಾಗೂ ಅನುಭವಿ ವಿಜ್ಞಾನಿಗಳು
ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
ಪ್ರಯುಕ್ತ ಆಸಕ್ತಿಯುಳ್ಳ ರೈತ ಬಾಂಧವರು ಜಿಲ್ಲಾ
ಕೃಷಿ ತರಬೇತಿ ಕೇಂದ್ರ, ಕಾಡಜ್ಜಿಯ ಕಚೇರಿಯಲ್ಲಿ ತಮ್ಮ
ಹೆಸರನ್ನು ಅ.15 ರೊಳಗೆ ನೋಂದಾಯಿಸಿಕೊಳ್ಳುವುದು
ಅಥವಾ ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ
ಕೇಂದ್ರ, ಕಾಡಜ್ಜಿ ಇವರ ದೂರವಾಣಿ ಸಂಖ್ಯೆ: 8277931242 ಅಥವಾ
8277928964 ರಲ್ಲಿ ನೋಂದಾಯಿಸಿಕೊಳ್ಳಬಹುದೆಂದು ಕೃಷಿ ಜಂಟಿ
ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *