ದಾವಣಗೆರೆ ಅ.09

ದಾವಣಗೆರೆ ಜಿಲ್ಲೆಯಾದ್ಯಂತ ಸುಮಾರು 66 ಸಾವಿರ ಹೆಕ್ಟೇರ್
ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದ್ದು,
ಭತ್ತದ ಬೆಳೆಯು ಬೆಳವಣಿಗೆ ಹಂತದಿಂದ ತೆಂಡೆ
ಒಡೆಯುವ ಹಂತದಲ್ಲಿದ್ದು, ಕೆಲ ಪ್ರದೇಶಗಳಲ್ಲಿ
ದುಂಡಾಣು ಅಂಗಮಾರಿ ರೋಗದ ಬಾಧೆಯು ಕಾಣಿಸಿಕೊಂಡಿದೆ. ಈ
ರೋಗವು ಕ್ಸಾಂತೊಮೊನಾಸ್ ಒರಿಝೆ(ಘಿಚಿಟಿಣhomoಟಿಚಿs oಡಿಥಿzಚಿe) ಎಂಬ
ದುಂಡಾಣುವಿನಿಂದ (ಬ್ಯಾಕ್ಟೀರಿಯಾ) ಹರಡುವುದು.
ರೋಗದ ಲಕ್ಷಣಗಳು: ಎಲೆಯ ಅಂಚಿನಲ್ಲಿ ಉದ್ದನೆಯ ಒಣಗಿದ
ಪಟ್ಟಿಗಳು ಕಂಡು ಬರುತ್ತವೆ. ನಂತರದ ಹಂತದಲ್ಲಿ
ಎಲೆಗಳು ಪೂರ್ತಿಯಾಗಿ ಒಣಗಿದಂತಾಗುತ್ತದೆ.
ನಿರ್ವಹಣಾ ಕ್ರಮಗಳು: ಗೋಣಿ ಚೀಲದಲ್ಲಿ ಸಗಣಿಯನ್ನು
ಹಾಕಿ ಕಟ್ಟಿ, ನೀರು ಹಾಯಿಸುವ ಜಾಗದಲ್ಲಿ ಇಡುವುದರಿಂದ ನೀರಿನ
ಜೊತೆಯಲ್ಲಿ ಹರಿಯುವ ಸಗಣಿ ರಾಡಿಯಿಂದ ಈ ರೋಗವನ್ನು
ನಿರ್ವಹಣೆ ಮಾಡಬಹುದು. ಸ್ಟ್ರೆಪ್ಟೋಸೈಕ್ಲಿನ್ 0.5 ಗ್ರಾಂ.
ಮತ್ತು ತಾಮ್ರದ ಆಕ್ಸಿಕ್ಲೋರೈಡ್ 2.15 ಗ್ರಾಂ. ಪ್ರತಿ ಲೀಟರ್
ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ
ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು
ಸಂಪರ್ಕಿಸಬೇಕೆಂದು ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *