ದಾವಣಗೆರೆ ಅ,09
ದಾವಣಗೆರೆ ಡಿ.ಸಿ.ಎಂ. ಲೇಔಟ್‍ನಲ್ಲಿರುವ ಶ್ರೀ ಮೌನೇಶ್ವರಿ ಕಿವುಡ &ಚಿmಠಿ;
ಮೂಗ ಮಕ್ಕಳ ವಸತಿಯುತ ಶಾಲೆಯು ವಿಕಲಚೇತನರ
ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ
ಅನುದಾನದಲ್ಲಿ ನಡೆಯುತ್ತಿದ್ದು ಶಾಲೆಯಲ್ಲಿ 2020-21ನೇ
ಸಾಲಿಗೆ ಪ್ರಾಥಮಿಕ, ಮಾಧ್ಯಮಿಕ &ಚಿmಠಿ; ಪ್ರೌಢಶಾಲೆಗೆ ದಾಖಲಾತಿ
ಪ್ರವೇಶ ಪ್ರಾರಂಭವಾಗಿರುತ್ತದೆ.
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಶ್ರವಣದೋಷವುಳ್ಳ
ವಿಕಲಚೇತನ ಮಕ್ಕಳನ್ನು ಈ ಶಾಲೆಗೆ ದಾಖಲಿಸಬಹುದಾಗಿದೆ.
ಸದರಿ ಮಾಹಿತಿಯನ್ನು ಪತ್ರಿಕೆಗಳಲ್ಲಿ ಉಚಿತವಾಗಿ ಪ್ರಕಟಿಸಿ
ಹೆಚ್ಚಿನ ಸಂಖ್ಯೆಯಲ್ಲಿ ಶ್ರವಣದೋಷವುಳ್ಳ ವಿಕಲಚೇತನ
ಮಕ್ಕಳು ವಸತಿಯುತ ಶಾಲೆಗೆ ದಾಖಲಾಗಲು
ಪ್ರೋತ್ಸಾಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ 08192-255433, ಮೊಬೈಲ್ ನಂ.
9449081287 (ದಿನೇಶ್), 901175777 (ಅಂಧಪ್ಪ ಧರ್ಮಪ್ಪ ಇಟಗಿ)
ಸಂಪರ್ಕಿಸಬೇಕೆಂದು ಜಿಲ್ಲಾ ಅಂಗವಿಕಲರ ಮತ್ತು ಹಿರಿಯ
ನಾಗರಿಕರ ಕಲ್ಯಾಣಾಧಿಕಾರಿ ಜಿ.ಎಸ್ ಶಶಿಧರ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.