ದಾವಣಗೆರೆ ಅ.08
ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ
ಚುನಾವಣೆಗೆ ಸಂಬಂಧಿಸಿದಂತೆ ಅ.28 ರಂದು ನಡೆಯುವ
ಮತದಾನ ಕಾರ್ಯಕ್ಕೆ ಮತದಾರರು ಮತ ಚಲಾಯಿಸಲು
ಚುನಾವಣಾ ಗುರುತಿನ ಚೀಟಿ ಅಲ್ಲದೇ ಈ ಕೆಳಕಂಡ
ಪರ್ಯಾಯ ದಾಖಲೆಗಳನ್ನು
ಉಪಯೋಗಿಸಬಹುದಾಗಿರುತ್ತದೆ.
ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್(Pಂಓ) ಕಾರ್ಡ್,
ಭಾರತೀಯ ಪಾಸ್‍ಪೋರ್ಟ್, ರಾಜ್ಯ/ಕೇಂದ್ರ ಸರ್ಕಾರ,
ಸಾರ್ವಜನಿಕ ವಲಯ, ಸ್ಥಳೀಯ ಸಂಸ್ಥೆಗಳು ಅಥವಾ ಇತರೆ
ಖಾಸಗಿ ಕೈಗಾರಿಕಾ ಸಂಸ್ಥೆಗಳು ತಮ್ಮ ನೌಕರರಿಗೆ ನೀಡಿರುವ
ಸೇವಾ ಗುರುತಿನ ಚೀಟಿ. ಸಂಸದರು/ವಿಧಾಸಭಾ
ಸದಸ್ಯರು/ವಿಧಾನ ಪರಿಷತ್ ಸದಸ್ಯರುಗಳಿಗೆ ನೀಡಿರುವ
ಅಧಿಕೃತ ಗುರುತಿನ ಚೀಟಿಗಳು. ಶಿಕ್ಷಕರ/ಪದವೀಧರರ
ಕ್ಷೇತ್ರ ವ್ಯಾಪ್ತಿಯಲ್ಲಿ ಶೈಕ್ಷಣಿಕ ಸಂಸ್ಥೆಗಳಿಂದ ಕರ್ತವ್ಯ
ನಿರ್ವಹಿಸುತ್ತಿರುವ ನೌಕರರಿಗೆ ನೀಡಿರುವ ಸೇವಾ ಗುರುತಿನ
ಚೀಟಿ, ವಿಶ್ವವಿದ್ಯಾನಿಯಲದಿಂದ ನೀಡಿರುವ ಪದವಿ/ಡಿಪ್ಲೊಮಾದ
ಮೂಲ ಪ್ರಮಾಣಪತ್ರಗಳು ಹಾಗೂ ಸಕ್ಷಮ
ಪ್ರಾಧಿಕಾರದಿಂದ ನೀಡಲಾಗಿರುವ ಅಂಗವಿಕಲ ದೃಢೀಕರಣ
ಪತ್ರದ ಮೂಲ ಪ್ರತಿಗಳನ್ನು ಮತದಾನದ ವೇಳೆ
ಪರ್ಯಾಯ ದಾಖಲೆಗಳನ್ನಾಗಿ ಬಳಸಬಹುದೆಂದು ಕರ್ನಾಟಕ
ಆಗ್ನೇಯ ಪದವೀಧರರ ಕ್ಷೇತ್ರದ ಸಹಾಯಕ
ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *