ಕಳೆದ 30 ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ್, ಅವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಡ್ತಿ ಪ್ರಕ್ರಿಯೆಯಲ್ಲಿ ಹೊನ್ನಾಳಿ ಯಲ್ಲಿ ಖಾಲಿ ಇರುವ ಅಧೀಕ್ಷಕ ಹುದ್ದೆಗೆ ಇಲಾಖೆ ಆಯುಕ್ತರು ಆದೇಶ ನೀಡಿದ ಮೇರೆಗೆ ಕಚೇರಿ ವ್ಯವಸ್ಥಾಪಕ ಧರಣೇಂದ್ರಯ್ಯ ಅವರು ಕೆಲಸಕ್ಕೆ ಹಾಜರಾಗಲು ಅವಕಾಶ ಮಾಡಿಕೊಟ್ಟರು.
ಅವರು ಈ ಹಿಂದೆ ತಾಲೂಕಿನ ಸರ್ಕಾರಿ
ಪ್ರೌಢಶಾಲೆಯಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದು ಅಲ್ಲಿಂದ ಬಡ್ತಿ ಹೊಂದಿ ಕಛೇರಿ ಅಧೀಕ್ಷಕರಾದ ಬಸವರಾಜ ಅವರನ್ನು ಶಾಲೆಯ ಮುಖ್ಯೋಪಾಧ್ಯಾಯ ವೀರಭದ್ರಪ್ಪ ಎಲ್ಲಾ ಬೋಧಕ ಬೋಧಕೇತರ ನೌಕರರುಗಳು ಕಛೇರಿ ವರೆಗೂ ಬಂದು ಆತ್ಮೀಯವಾಗಿ
ಬೀಳ್ಕೊಟ್ಟರು.
ಅಧಿಕಾರ ಸ್ವೀಕರಿಸಿ ಪತ್ರಿಕೆ ಯೊಂದಿಗೆ ಪತ್ರಿಕೆ ಯೊಂದಿಗೆ ಮಾತನಾಡಿದ ಬಸವರಾಜ್ ಬಹಳ ದಿನಗಳಿಂದ ಕಚೇರಿಯಲ್ಲಿ ಒಂದು ಅಧೀಕ್ಷಕ ಹುದ್ದೆ ಖಾಲಿ ಇದ್ದು ಕಛೇರಿಯ ಕೆಲಸ ನಿಧಾನವಾಗಿತ್ತು. ಇಲಾಖೆ ನನ್ನನ್ನು ನೇಮಕ ಮಾಡುವ ಮೂಲಕ ಹುದ್ದೆ ಭರ್ತಿ ಮಾಡಿದೆ. ನಾನು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ಈಗಾಗಲೇ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇನ್ನೋರ್ವ ಅಧೀಕ್ಷಕರಾದ ಉಮೇಶ್ ಅವರೊಂದಿಗೆ ಚರ್ಚಿಸಿ ಕೆಲಸ ಮಾಡಿಕೊಂಡು ಹೋಗುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಛೇರಿ ಅಧೀಕ್ಷಕ ಉಮೇಶ್, ರಾಜಪ್ಪ, ರವಿ, ಸುಚಿತ್ರ, ಲಕ್ಷ್ಮಮ್ಮ, ಪ್ರಶಾಂತ್ ಕೆಂಚಿಕೊಪ್ಪ ಪ್ರೌಢಶಾಲೆಯ ವೀರಭದ್ರಪ್ಪ ಕೊಟ್ರಳ್ಳಿ ಶಿವಕುಮಾರ್ ದಿನೇಶ್, ನಾಗರಾಜ್, ಶಶಿಕುಮಾರ್, ಮಲ್ಲಿಕಾರ್ಜುನ, ತಾಲ್ಲೂಕು ಸ್ಕೌಟ್ ಮಾಜಿ ಕಾರ್ಯದರ್ಶಿ ಷಣ್ಮುಖಪ್ಪ, ಶಿಕ್ಷಕ ಚನ್ನವೀರಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.