ಜನರಲ್ಲಿ ಜಾಗೃತಿ ಮೂಡಿಸಲು #ಜೆ‌ಡಿಯು ನಿಂದ ಕರ್ನಾಟಕದ ಕಲ್ಯಾಣಕ್ಕಾಗಿ ಪಾದ ಯಾತ್ರೆ:

ಮಹಿಮಾಜಪಟೇಲ್

ಸಂಯುಕ್ತಜನತಾದಳ ಪಕ್ಷ ಮತ್ತು ಜನತಾ ಪರಿವಾರದ ಸಹಭಾಗಿತ್ವದಲ್ಲಿ ಪಕ್ಷದ ಪುನರ್ ಸಂಘಟನೆಗಾಗಿ ಹಾಗೂ ಕರ್ನಾಟಕದ ಕಲ್ಯಾಣಕ್ಕಾಗಿ ರಾಜ್ಯಾದ್ಯಂತ ಪಾದ ಯಾತ್ರೆ ಹಮ್ಮಿಕೊಳ್ಳಲಾಗಿದೆಯೆಂದು ಪಕ್ಷದ ರಾಜ್ಯಾಧ್ಯಕ್ಷ ಮಹಿಮ ಜ ಪಟೇಲ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಾ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ ಸರ್ಕಾರಗಳು ಎಲ್ಲಾ ರಂಗ ಗಳಲ್ಲೂ ವಿಫಲವಾಗಿವೆಯೆಂದು ಟೀಕಿಸಿದರು.
ಕೋವಿಡ್ ಮಹಾಮಾರಿಗೆ ಸಿಲುಕಿ ಜನರ ಬದುಕು ಆರ್ಥಿಕವಾಗಿ ಜರ್ಜಿರಿತವಾಗಿದ್ದು, ಪರಿಹಾರ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದಾನೆಂದು ಆರೋಪಿಸಿದ ಅವರು ಜನರ ಹಿತ ಕಾಪಾಡುವಲ್ಲಿ ಸರ್ಕಾರ ಹಿನ್ನಡೆ ಅನುಭವಿಸಿದೆಯೆಂದರು.
ಇಂತಹ ಸಂಕಷ್ಟದ ಸಮಯದಲ್ಲಿ ಪರಿಹಾರ ನೀಡಬೇಕಾಗಿದ್ದ ರಾಜ್ಯ ಸರ್ಕಾರ #ಎಪಿಎಂಸಿಕಾಯ್ದೆ ಹಾಗೂ #ಭೂಸುಧಾರಣೆಕಾಯ್ದೆಗೆ ಸುಗ್ರೀವಾಜ್ಞೆ ತರುವುದರ ಮೂಲಕ ತಾನು ಉಳ್ಳವರ ಮತ್ತು ಉದ್ಯಮಿಗಳ ಪರವಾಗಿ ಇರುವುದನ್ನು ಸಾಬೀತು ಪಡಿಸಿದೆ ಎಂದರು. ಅನೇಕ ಜ್ವಲಂತ ಸಮಸ್ಯೆಗಳು ರಾಜ್ಯದಲ್ಲಿ ತಾಂಡವಾಡುತ್ತಿದ್ದು,ಈ ಎಲ್ಲಾ ಸಮಸ್ಯೆಗಳಿಂದ ರಾಜ್ಯವನ್ನು ಮುಕ್ತಗೊಳಿಸುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಪಕ್ಷ #ಗ್ರಾಮಸ್ವರಾಜ್ ಅಭಿಯಾನ ಆರಂಭಿಸಿದೆ ಇದರ ಮೂಲಕ ಸಧೃಡ ಗಾಮಗಳ ನಿರ್ಮಾಣಕ್ಕೆ ಪಣತೊಟ್ಟಿದೆಯೆಂದರು.


ಇದರ ಅಂಗವಾಗಿ ಮೂರು ಹಂತಗಳಲ್ಲಿ #ಪಾದಯಾತ್ರೆ ಹಮ್ಮಿಕೊಂಡಿದ್ದು,ಮೊದಲ ಹಂತವಾಗಿ ಕೋಲಾರದಿಂದ ಬೆಂಗಳೂರಿನ ವರೆಗೆ ಇದೇ ತಿಂಗಳ 18 ರಂದು ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ದೊರೆಯಲಿದೆ ಹಾಗೂ 21 ರಂದು ಬೆಂಗಳೂರಿನ ಮೌರ್ಯವೃತ್ತದಲ್ಲಿರುವ ಗಾಂಧೀಜಿಯವರ ಪ್ರತಿಮೆ ಬಳಿ ಅಂತ್ಯಗೊಳ್ಳಲಿದೆಯೆಂದು ತಿಳಿಸಿದರು. ಎರಡನೇಯ ಹಂತದ ಪಾದ ಯಾತ್ರೆ ಅಕ್ಟೋಬರ್ ಒಂದ ರಂದು ಪ್ರಾರಂಭವಾಗಲಿದೆ.ಮೂರನೇಯ ಹಂತದ ಪಾದ ಯಾತ್ರೆ ಕೂಡಲಸಂಗಮದವರೆಗೆ ನಡೆಯಲಿದ್ದು,ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಾದ ಯಾತ್ರೆ ಸಂಚರಿಸಿ ಸಮರಸವೇ ಜೀವನ ಎಂಬ ಸಂಕಲ್ಪದೊಂದಿಗೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ #ಕರ್ನಾಟಕದಕಲ್ಯಾಣ ಯಾತ್ರೆಯನ್ನು ಪಕ್ಷ ನಡೆಸಲಿದೆಯೆಂದರು.
ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದು,ಹೆಚ್ಚಿನ ಸಂಖ್ಯೆಯಲ್ಲಿ ರೈತರು,ಸಂಘಸಂಸ್ಥೆಗಳು,ಯುವಕರು ಭಾಗವಹಿಸು.

Leave a Reply

Your email address will not be published. Required fields are marked *