ಕರ್ನಾಟಕ ಕಲ್ಯಾಣ ಯಾತ್ರೆಗೆ ಭವ್ಯ ಸ್ವಾಗತ
ಹಿರಿಯೂರು: ರಾಜ್ಯ ಸಂಯುಕ್ತ ಜನತಾದಳ ಮತ್ತು ಜನತಾ ಪರಿವಾರದ ಸಹಭಾಗಿತ್ವದಲ್ಲಿ ಬೆಂಗಳೂರಿನಿಂದ ಕಾರಿಗನೂರು ವರೆಗೆ ಮಹಿಮಾ ಪಟೇಲ್ ನೇತೃತ್ವದ ಲ್ಲಿ ಹಮ್ಮಿಕೊಂಡಿದ್ದ 2ನೇ ಹಂತದ ಕರ್ನಾಟಕ ಕಲ್ಯಾಣ ಪಾದಯಾತ್ರೆ ಶನಿವಾರ ಹಿರಿಯೂರಿಗೆ ಆಗಮಿಸಿತು. ಸ್ಥಳೀಯ ಸಂಯುಕ್ತ ಜನತಾದಳ ಮುಖಂಡರು, ಪಕ್ಷದ ಅಭಿಮಾನಿಗಳು ಪಾದಯಾತ್ರೆಗೆ ಭವ್ಯ ಸ್ವಾಗತ ನೀಡಿದರು. ಈ ಸಂದರ್ಭ ಮಹಿಮಾ ಪಟೇಲ್ ಮಾತನಾಡಿ ರಾಜ್ಯದ ಜನ ಸಾಮಾನ್ಯರ ಹಿತದೃಷ್ಟಿಯಿಂದ ಕರ್ನಾಟಕ ಕಲ್ಯಾಣ ಪಾದಯಾತ್ರೆ ನಡೆಸುತ್ತಿರುವುದಾಗಿ ಹೇಳಿದರು. ರಾಜ್ಯ ಇಂದು ರಾಜಕೀಯ ಅರ್ಥಿಕ, ಔದ್ಯೋಗಿಕ, ಶೈಕ್ಷಣಿಕವಾಗಿ ರೈತರ ಹಿತ ಕಾಪಾಡುವಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದೆ ಕೋವಿಡ್ನ ಭಯದಲ್ಲಿ ಸಿಲುಕಿ ಎಲ್ಲರ ಬದುಕು ಅರ್ಥಿಕವಾಗಿ ಸಾಕಷ್ಟು ಜರ್ಜರಿತಗೊಂಡಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಂಬಲ, ಸಹಾಯಹಸ್ತ, ಜನ ಸಾಮಾನ್ಯರಲ್ಲಿ ಸ್ವಾವಲಂಬನೆ ಬದುಕು ಮತ್ತು ಜೀವನದ ಜಾಗೃತಿ ಅರಿವು ಮೂಡಿಸಲು ಪಾದಯಾತ್ರೆ ನಡೆಸುತ್ತಿರುವುದಾಗಿ ಹೇಳಿದರು.
ದೊಡ್ಡ ಬಳ್ಳಾಪುರದ ನಿರಂಜನ ದೇಶಿಕೇಂದ್ರ ಶ್ರೀ ಮಾತನಾಡಿದರು. ಸೂರ್ಯಪ್ರಕಾಶ್ ಮಹಡಿ, ಕೆ.ಇ ಶಿವರಾಂ, ಚಂದ್ರಶೇಖರ್, ದೀಪಕ್ ನಾರೇಜ್ ಹಾಗೂ ಸ್ಥಳೀಯ ಮುಖಂಡರಾದ ಎಂ.ಕೆ ವೀರೇಂದ್ರಸ್ವಾಮಿ, ಎಸ್ ರವಿಕುಮಾರ್, ತಾಪಂ ಮಾಜಿ ಅಧ್ಯಕ್ಷ ಗೋಪಾಲ್, ಹುಲಕುಂಟೆ ವೆಂಕಟೇಶ್, ಎಂ ಸಿದ್ದಯ್ಯ, ಮಂಜುನಾಥ್, ಹನುಮಪ್ಪ, ಮಂಜುನಾಥ್, ಎನ್ ಮಹೇಶ್ ಇದ್ದರು.