ದಾವಣಗೆರೆ ಅ.13
ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳಲಾಗಿರುವ ರಾಜಾ
ಕಾಲುವೆ(ಸ್ಟಾರ್ ವಾಟರ್ ಡ್ರೈನ್) ಕಾಮಗಾರಿಗಳು ನಗರದ
ಹಲವೆಡೆ ರಸ್ತೆ ಒತ್ತುವರಿಯಿಂದ ನೆನೆಗುದಿಗೆ ಬಿದ್ದಿದ್ದು,
ಮಂಗಳವಾರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ
ಪರಿಶೀಲನೆ ನಡೆಸಿದರು. ನಗರದ ಎಲ್‍ಐಸಿ ಕಾಲೋನಿ, ವಿದ್ಯಾನಗರ
ಮತ್ತು ಸ್ವಾಮಿ ವಿವೇಕಾನಂದ ಬಡಾವಣಗಳಿಗೆ
ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಮಾರ್ಟ್‍ಸಿಟಿ
ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ
ಮಲ್ಲಾಪುರ, ಇಂಜಿನಿಯರ್‍ಗಳು, ಸರ್ವೇಯರ್‍ಗಳೊಂದಿಗೆ
ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗೂ ಸ್ಥಳೀಯ
ನಾಗರೀಕರೊಂದಿಗೆ ಒತ್ತುವರಿ ಕುರಿತು ಸಂವಾದ ನಡೆಸಿದ
ಅವರು ಒತ್ತುವರಿ ಕುರಿತು ಮೋಜಿಣಿದಾರರು ಸರ್ವೇ ಕಾರ್ಯ
ಮಾಡಿ ಅಗತ್ಯ ಕ್ರಮ ಕೈಗೊಂಡು ಸ್ಮಾರ್ಟ್ ಸಿಟಿ
ಕಾಮಗಾರಿಗಳಿಗೆ ಅವಕಾಶ ಮಾಡಿಕೊಡಬೇಕೆಂದು ಸೂಚನೆ
ನೀಡಿದರು.