ದಾವಣಗೆರೆ ಅ.14
2020-21 ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ
ನೆಲಮಟ್ಟಕ್ಕಿಂತ ಮೇಲೆ (ಅಬವ್ ಗ್ರೌಂಡ್ ಲೆವೆಲ್-ಸ್ಟೀಲ್ ಟ್ಯಾಂಕ್)
ರಚಿಸುವ ನೀರು ಸಂಗ್ರಹಣಾ ಘಟಕಗಳ ವಿನ್ಯಾಸಗಳಿಗೆ
ಜಿಲ್ಲೆಗೆ ಭೌತಿಕ 8 ಮತ್ತು ಆರ್ಥಿಕ ರೂ.27.75 ಲಕ್ಷಗಳ ಗುರಿ
ನೀಡಲಾಗಿದೆ.
ಒಂದು ಲಕ್ಷ ಲೀಟರ್ ಮತ್ತು 2 ಲಕ್ಷ ಲೀಟರ್ ಸಾಮಥ್ರ್ಯದ ಘಟಕ
ನಿರ್ಮಾಣಕ್ಕೆ ರೂ.3.25 ಹಾಗೂ ರೂ. 5.00 ಲಕ್ಷ
ಸಹಾಯಧನವಿದ್ದು, ಆಸಕ್ತಿಯುಳ್ಳ ತೋಟಗಾರಿಕೆ ಬೆಳೆ
ಬೆಳೆಯುತ್ತಿರುವ ರೈತರು ಸಂಬಂಧಪಟ್ಟ
ತಾಲ್ಲೂಕುಗಳ ತೋಟಗಾರಿಕೆ ಇಲಾಖೆಯನ್ನು
ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.