ಪ್ರಜಾ ಪರಿವರ್ತನಾ ವೇದಿಕೆ ಕರ್ನಾಟಕ ತಾಲೂಕು ಘಟಕ ಹೊನ್ನಾಳಿ ಇವರ ವತಿಯಿಂದ ಇಂದು ಸಂಗೋಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಛೇರಿವರೆಗೆ ಬಂದು
ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯದಲ್ಲಿ ದಲಿತರು ಮತ್ತು ಮಹಿಳೆಯರ ಮಾನ ಪ್ರಾಣವನ್ನು ರಕ್ಷಿಸುವುದಕ್ಕೆ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ನವರ ಸರ್ಕಾರ ವಿಫಲಗೊಂಡಿದೆ ಯಾವುದೇ ಕಾನೂನು ಭಯವಿಲ್ಲದೆ ಮೇಲ್ಜಾತಿಯ ಗಂಡುಗಳು ಹಗಲಿನಲ್ಲೇ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವ ಪ್ರವೃತ್ತಿ ಸರ್ವೆ ಸಾಮಾನ್ಯವಾಗಿದೆ. ಸಪ್ಟಂಬರ್ 14 -09-2020 ರಂದು ಹಥಾಸ್ನಲ್ಲಿ ಮನಿಷಾ ವಾಲ್ಮೀಕಿ ಎನ್ನುವ 19 ವರ್ಷದ ಯುವತಿಯನ್ನು ಠಾಕೋರ್ ಸಮುದಾಯಕ್ಕೆ ಸೇರಿದ 4 ಜನ ಕಾಮುಕರು ಅವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅವಳ ನಾಲಿಗೆ ಕತ್ತರಿಸಿ ಬೆನ್ನು ಮೂಳೆ ಮುರಿದು ವಿಕೃತಿ ಮೆರೆದಿದ್ದಾರೆ, ಮನುಷಾ ವಾಲ್ಮೀಕಿಯನ್ನು ಆಲಿ ಗಡ್ ಮೆಡಿಕಲ್ ಕಾಲೇಜಿನಲ್ಲಿಯೂ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸೆಪ್ಟೆಂಬರ್ 28 ರಂದು ಸೇರಿಸಲಾಯಿತು. ಆದರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಮರುದಿನ ಸೆಪ್ಟೆಂಬರ್ 29 ರಾದು ಮನಿಷಾ ವಾಲ್ಮೀಕಿ ಮರಣ ಹೊಂದುತ್ತಾಳೆ. ಇಂತಹ ಅಮಾನವೀಯ ಕೃತ್ಯವನ್ನು ಉತ್ತರ ಪ್ರದೇಶದ ಯೋಗಿ ಆದಿನಾಥ್ರ ಸರ್ಕಾರ ಗಂಭೀರವಾಗಿ ಪರಿಗಣಿಸದೇ ಪರೋಕ್ಷವಾಗಿ ಅಪರಾಧಿಗಳನ್ನು ರಕ್ಷಿಸುವ ಕೆಲಸ ಮಾಡಲಾಗಿದೆ, ಸಾವಿಗೀಡಾದ ಮುನಿಷಾಳ ಶವವನ್ನು ಅವರ ಪೋಷಕರಿಗೆ ನೀಡದೇ ಪೋಲಿಸ್ ಅಧಿಕಾರಿಗಳು ಮುಂದೆ ನಿಂತು ರಾತ್ರಿ 3 ಗಂಟೆ ಸುಮಾರಿನಲ್ಲಿ ಸುಟ್ಟು ಹಾಕಲಾಗಿದೆ. ಇದು ಅತ್ಯಾಚಾರಕ್ಕೆ ಸಮನಾದ ಅಪರಾಧವಾಗುತ್ತದೆ. ಈ ಎಲ್ಲಾ ಹಿನ್ನಲೆಯಲ್ಲಿ ಮನಿಷಾ ಳನ್ನು ವಿಕೃತವಾಗಿ ಅತ್ಯಾಚಾರ ಗೈದ ಅವಳ ಅಂಗಾಂಗಳನ್ನು ತುಂಡರಿಸಿ ವಿಕೃತ ಮೆರೆದಿರುವ ಅಪರಾಧಿಗಳನ್ನು ತ್ವರಿತ ವಿಚಾರಣೆ ನಡೆಸಿ ಮರಣ ದಂಡನೆಗೆ ಗುರಿಪಡಿಸಬೇಕು, ಅದೇ ರೀತಿ ಅಪರಾಧಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ತಕ್ಷಣ ಪ್ರಕರಣವನ್ನು ದಾಖಲಿಸದೇ ತಡಮಾಡಿ ಮತ್ತು ಅವಳು ಮರಣಿಸಿದ ಮರಣದ ನಂತರ ಶವವನ್ನು ಅವರ ಪೋಷಕರಿಗೆ ನೀಡದೇ ಪತ್ರಿಕಾ ಪ್ರತಿನಿಧಿಗಳು ಅವಕಾಶ ನೀಡದೇ ರಾತ್ರೋರಾತ್ರಿ ಶವವನ್ನು ಸುಟ್ಟು ಹಾಕಿರುವ ಹಾಗೂ ಈ ಕೃತ್ಯಕ್ಕೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಸಹಕಾರ ನೀಡಿರುವ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಮಹಿಳೆಯರ ಮೇಲಿನ ಅತ್ಯಾಚಾರ ಕೊಲೆ ಹಾಗೂ ದಲಿತರ ಮೇಲಿನ ದೌರ್ಜನ್ಯ ಕೊಲೆ ಅಂತ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಉತ್ತರ ಪ್ರದೇಶ ಕೊಲೆಗಡುಕರ ರಾಜ್ಯ ವಾಗಿ ಮಾರ್ಪಟ್ಟಿದೆ, ರಾಜ್ಯದಲ್ಲಿ ದಲಿತರು ಮತ್ತು ಮಹಿಳೆಯರನ್ನು ರಕ್ಷಿಸಲು ವಿಫಲವಾಗಿರುವ ಆದಿತ್ಯನಾಥ್ ಸರ್ಕಾರವನ್ನು ವಜಾಗೊಳಿಸಬೇಕುಂದು ಕರ್ನಾಟಕ ರಾಜ್ಯ ಮಾಗಡಿಯ ಕುದೂರ್ನ ಹೇಮಲತಾಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪಾತಕಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಮಾನ್ಯ ತಹಶೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಭಾಗಿಯಾದವರು:- ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎ.ಡಿ ಈಶ್ವರಪ್ಪ , ಹೊಳಲೂರು ಶೇಖರಪ್ಪ, ಕೆ.ಓ ಹನುಮಂತಪ್ಪ, ಹೆಚ್.ಕೆ ಕೃಷ್ಣಪ್ಪ ಇನ್ನೂ ಅನೇಕ ಮುಖಂಡರು, ಈ ಹೊರಾಟದಲ್ಲಿ ಮಹಿಳೆಯರು ಸಹ ಭಾಗಿಯಾಗಿದ್ದರು.