ದಾವಣಗೆರೆ ಅ.16
   ಶುಕ್ರವಾರ ನಗರದ ತಹಶೀಲ್ದಾರ್ ಕಚೇರಿ ಆವರಣ, ಎ.ಪಿ.ಎಂ.ಸಿ
ಈರುಳ್ಳಿ ಮಾರ್ಕೆಟ್ ಪಿಸಾಳೆ ಕಾಂಪೌಡ್ ಫೈರ್ ಸ್ಟೇಷನ್ ಹಿಂಭಾಗ,
ಆರ್.ಎಂ.ಸಿ ರಸ್ತೆ, ಪಿ.ಬಿ.ರಸ್ತೆ ಹಾಗೂ ವಿನೋಬನಗರದಲ್ಲಿ
ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ದಾಳಿ ನಡೆಸಿ 2 ದುಡಿಯುವ
ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು.
 ಜಿಲ್ಲಾಧಿಕಾರಿಗಳು ದಾವಣಗೆರೆ ಇವರ ನಿರ್ದೇಶನ ಹಾಗೂ
ಮಾರ್ಗದರ್ಶನದಲ್ಲಿ ಕಾರ್ಮಿಕ ಇಲಾಖೆ, ಮಹಿಳಾ ಮತ್ತು
ಮಕ್ಕಳ ಅಭಿವೃದ್ದಿ ಇಲಾಖೆ, ಪೊಲೀಸ್ ಇಲಾಖೆ ಮತ್ತು
ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ ಅಧಿಕಾರಿಗಳು
ಹಾಗೂ ಸಿಬ್ಬಂದಿಗಳನ್ನೊಳಗೊಂಡ 2 ತಂಡಗಳನ್ನು
ರಚಿಸಿಕೊಂಡು ಅಧಿಕಾರಿಗಳು ದಾಳಿ ನಡೆಸಿದರು.
ದಾಳಿಯ ಕಾಲಕ್ಕೆ ಪತ್ತೆ ಹಚ್ಚಲಾದ 02 ಗಂಡು
ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಪುನರ್ವಸತಿ
ಹಾಗೂ ಮುಂದಿನ ಕ್ರಮಕ್ಕಾಗಿ ಮಹಿಳಾ ಮತ್ತು ಮಕ್ಕಳ
ಅಭಿವೃದ್ದಿ ಇಲಾಖೆಯ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ
ನೀಡಲಾಗಿದೆ. ಹಾಗೂ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ
ಮಕ್ಕಳ ಪ್ರಕರಣಗಳಲ್ಲಿ ಅವರನ್ನು ಕೆಲಸಕ್ಕೆ ನಿಯೋಜಿಸಿದ
ಮಾಲೀಕರ ವಿರುದ್ದ ನಿಯಮಾನುಸಾರ ಪರಿಶೀಲಿಸಿ ಕಾನೂನು
ಕ್ರಮ ಕೈಗೊಳ್ಳಲಾಗುವುದು.
 ಕಾರ್ಮಿಕ ಅಧಿಕಾರಿ ಇಬ್ರಾಹಿಂಸಾಬ್, 1,2,3 ನೇ ವೃತ್ತದ ಕಾರ್ಮಿಕ
ನಿರೀಕ್ಷಕರು, ರಾಜಶೇಖರ್ ಹಿರೇಮಠ, ನಾಗೇಶ್, ರಾಜಪ್ಪ
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಎನ್.ಸಿ.ಎಲ್.ಪಿ
ಯೋಜನಾ ನಿರ್ದೇಶಕ ಪ್ರಸನ್ನ.ಇ.ಎನ್ ಹಾಗೂ ಪೊಲೀಸ್ ಸಿಬ್ಬಂದಿ
ದಾಳಿ ವೇಳೆಯಲ್ಲಿ ಹಾಜರಿದ್ದರು.
   ಯಾವುದೇ ಮಾಲೀಕರು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ
ಮಕ್ಕಳನ್ನು ಯಾವುದೇ ಕೆಲಸಕ್ಕೆ ಹಾಗೂ 14 ರಿಂದ 18
ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ
ಉದ್ಯೋಗಗಳಲ್ಲಿ ನೇಮಕ ಮಾಡಿಕೊಂಡಿರುವುದು ಕಂಡು
ಬಂದಲ್ಲಿ, ಸಾರ್ವಜನಿಕರು ಮಕ್ಕಳ ಸಹಾಯವಾಣಿ ಸಂಖ್ಯೆ 1098,
ದೂ.ಸಂ: 08192-237332, 230094 ಹಾಗೂ ರಾಷ್ಟ್ರೀಯ
ಬಾಲಕಾರ್ಮಿಕ ಯೋಜನಾ ಸಂಸ್ಥೆ ದೂ.ಸಂ: 08192-256626 ನ್ನು
ಸಂಪರ್ಕಿಸಬಹುದೆಂದು ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ
ಸಂಸ್ಥೆಯ ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ
ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *