ನಾವು ಭಾರತದ ಪ್ರಜೆಗಳಾಗಿ, ಕರ್ನಾಟಕ ರಾಜ್ಯದ ವಿವಿಧ ಗ್ರಾಮಸಭೆಗಳ ಸದಸ್ಯರಾಗಿ ವೈಯಕ್ತಿಕ ಜವಾಬ್ದಾರಿಯ ಮೂಲಕ ಗಾಂಧಿವಾದಿ ಗ್ರಾಮ ಸ್ವರಾಜ್ಯದ ಬಗ್ಗೆ ಜಾಗೃತಿ ಮೂಡಿಸುವ ರಾಜ್ಯಾದ್ಯಂತ “ಕರ್ನಾಟಕದ ಕಲ್ಯಾಣ ಪಾದಯಾತ್ರೆ”ಯನ್ನು ಹಮ್ಮಿಕೊಂಡಿದ್ದೇವೆ. ಸ್ವಾತಂತ್ರ್ಯ ಮತ್ತು ಅಭಿವೃದ್ಧಿ ಸಮಾಜದ ಎಲ್ಲ ವರ್ಗಗಳಿಗೂ ಸಮಾನವಾಗಿ ತಲುಪಿಸಬೇಕೆಂಬ ಗಾಂಧೀಜಿಯವರ ಕನಸುಗಳನ್ನು ಸಾಕಾರಗೊಳಿಸಲು ತಳಮಟ್ಟದ ಆಡಳಿತ ಯಂತ್ರವಾದ ಪಂಚಾಯಿತಿ ವ್ಯವಸ್ಥೆಯಿಂದ ಆರಂಭಿಸಿದ ದೇಶ ಕಟ್ಟುವುದು ವಿವೇಕದ ಮಾರ್ಗ, ಗ್ರಾಮ ಸ್ವರಾಜ್ಯಕ್ಕಾಗಿ ದೇಶದ ಎರಡನೇ ಸ್ವಾತಂತ್ರ್ಯ ಸತ್ಯಾಗ್ರಹ ಹಳ್ಳಿಗಾಡಿನ

ಜವಲಿಂದ ಪ್ರಾರಂಭವಾಗಿದೆ.

ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ನಿಮ್ಮ ಜವಾಬ್ದಾರಿ ಅತ್ಯಂತ ಹೆಚ್ಚಿನ. ಹಸಿರು ಕ್ರಾಂತಿಯ ಹೆಸರಿನಲ್ಲಿ ದೇಶದಾದ್ಯಂತ ಯಥೇಚ್ಛವಾಗಿ ರಾಸಾಯನಿಕಗಳನ್ನು ಬಳಸುವುದರ ಮೂಲಕ ಎಲ್ಲರಿಗೆ ಆಹಾರ ನೀಡಬೇಕಾದ ರೈತರು ఎల్లరిగ ಉಣಿಸಿದಂತಾಗಿದೆ. ಪರಸ್ಪರ ಸಹಕಾರದಿಂದ ಸಹಜ ಕೃಷಿ ಯನ್ನು ಅಳವಡಿಸಿಕೊಳ್ಳಬೇಕಾದ ಪರಿವರ್ತನ ಕಾಲಿಗನೂಲಿನಿಂದಲೇ ಪ್ರಾರಂಭವಾಗಿದೆ. ಕೃಷಿಯು ಭಾರತದ ಅತ್ಯಂತ ಪ್ರಮುಖ ಜೀವನ ಮಾರ್ಗವಾಗಿದ್ದು ಹಳ್ಳಿಗಳಲ್ಲಿ ಸಹಜ ಕೃಷಿ ದಿಂದ ಉತ್ಪತ್ತಿಯಾಗುವ ಬೆಳೆಗಳಿಗೆ ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಮೂಲಕ ಮೌಲ್ಯವರ್ಧನೆ ಯಾಲ ಗ್ರಾಮಗಳ ಆರ್ಥಿಕತೆಯನ್ನು ಪಡಿತ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಭಾರತೀಯ ಆರ್ಥಿಕತೆಯ ಕೃಷಿ ಆಧಾರಿತವಾಗಿದೆ. ಅಂದರೆ ಸ್ಥಳೀಯ ಆಹಾರ, ಸ್ಥಳೀಯ ಆರೋಗ್ಯ ಜೀವ ವೈವಿಧ್ಯ, ಪರಿಸರ ವಿಜ್ಞಾನ, ನೈಸರ್ಗಿಕ ಸಂಪನ್ಮೂಲ ಮತ್ತು ಸ್ಥಳೀಯ ರಾಜಕೀಯ ವಿಷಯದಲ್ಲಿ ಮಾತ್ರ ಆರ್ಥಿಕತೆಯನ್ನು ಗಮನಿಸಬೇಕಾಗಿದೆ. ಈ ಕೆಳಗಿನ ಉದ್ದೇಶಗಳನ್ನು ಅನುಸರಿಸಲು ಕಾಲಿಗನೂರು ಪಂಚಾಯಿತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ನಿಮಗೆ ನಾವು ವಿವರಿಸುತ್ತೇವೆ,

1.ಹೊಸ ನೀತಿಗಳನ್ನು ರೂಪಿಸುವಾಗ ಮೊದಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷವಾಗಿ ಭೂಸುಧಾರಣೆ ಗಳನ್ನು ಗುತ್ತಿಗೆ ಕೃಷಿ ಎಪಿಎಂಸಿ ಸುಧಾರಣೆಗಳು ವಿದ್ಯುತ್ ಮಸೂದೆ ಅಗತ್ಯ ಸರಕು ಮಸೂದೆ ಮುಂತಾದ ರೈತರ ಸಮಸ್ಯೆಗೆ ಸಂಬಂಧಿಸಿದ ನೀತಿಗಳನ್ನು ಗ್ರಾಮಗಳಲ್ಲಿ ಚರ್ಚಿಸಿ ಸಭೆಯನ್ನು ಫಲಿತಾಂಶವನ್ನು ಉನ್ನತ ಪ್ರಾಧಿಕಾರಗಳಲ್ಲಿ ಅನುಷ್ಠಾನಕ್ಕಾಗಿ ಕಳುಹಿಸಲು ವಿನಂತಿ.

  1. ಸಂಪೂರ್ಣವಾಗಿ ರಾಸಾಯನಿಕ ಕೃಷಿಯನ್ನು ತ್ಯಜಿಸಿ ನೈಸರ್ಗಿಕ ಕೃಷಿ ಪದ್ಧತಿಗೆ ಬದಲಾಯಿಸೋಣ
  2. ಕಾರಿಗನೂರು ಪಂಚಾಯತಿಯನ್ನು ಜಲಾನಯನ ಭಾಗವಾಗಿ ನೋಡಬೇಕಾಗಿದೆ
  3. ಗ್ರಾಮ ಪಂಚಾಯತಿಯ ಗ್ರಾಮರಾಜ್ಯ ಸಿದ್ಧಾಂತ ತರೋಣ( ಸಮಾಜದ ಕೊನೆಯ ಭಾಗಕ್ಕೆ ಮೊದಲ ಪ್ರಾಮುಖ್ಯತೆ)
  4. ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಪಾಲ್ಗೊಳ್ಳುವಿಕೆಯಿಂದ ಗ್ರಾಮ ಕೈಗಾರಿಕೆಗಳನ್ನು ಬಲಪಡಿಸುವ ಅಗತ್ಯವಿದೆ
  5. ಕಾರಿಗನೂರು ರೈತರಿಗಾಗಿ ಕೆಲಸ ಮಾಡುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೈಸರ್ಗಿಕ ಕೃಷಿ ಅಧ್ಯಯನ ಮತ್ತು ಪ್ರೋತ್ಸಾಹ ಕೈಗೊಳ್ಳಬೇಕಾಗಿದೆ
  6. ಚುನಾವಣೆಗಳು ಸಂಕೀರ್ಣವಾಗಿದ್ದು ಜನಪ್ರತಿನಿಧಿಗಳಾಗ ಬಯಸುವವರು ಯಥೇಚ್ಛವಾಗಿ ಹಣ ಮಾಡಬೇಕಾದಂತ ಪರಿಸ್ಥಿತಿಯಿಂದ ಸರಳ ,ಸಜ್ಜನ ಚುನಾವಣೆಗಳು ಗ್ರಾಮ ಪಂಚಾಯಿತಿ ಚುನಾವಣೆ ಗಳಿಂದಲೇ ಪ್ರಾರಂಭವಾಗಬೇಕಾಗಿದೆ ಮೇಲಿನ ಅಂಶಗಳು ಮೇಲಾಧಿಕಾರಿಗಳಿಗೆ ಮತ್ತು ಉಚ್ಚಮಟ್ಟದ ಆಡಳಿತ ಯಂತ್ರಗಳಾದ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಶಾಸನಸಭೆ ಮತ್ತು ಲೋಕಸಭೆಗಳಲ್ಲಿ ಹುಟ್ಟಿಸುವ ಮತ್ತು ಪ್ರೇರೇಪಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷರಾದ ಮಹಿಮಾ ಜೆ ಪಟೇಲ್ ರವರು ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *