ಕರ್ನಾಟಕ ರಾಜ್ಯ ಬೀದರ್ ಜಿಲ್ಲೆ ಅಖಿಲ ಭಾರತ ರೆಡ್ಡಿ ಸಮಾಜದವರ ವತಿಯಿಂದ ಇಂದು ನಮ್ಮ ರಾಜ್ಯದಲ್ಲಿ ರೆಡ್ಡಿ ಜನ 28 ಜಿಲ್ಲೆಗಳಲ್ಲಿ ಬಹುತೇಕ ರೆಡ್ಡಿ ಸಮುದಾಯದ ಜನರು ಕೃಷಿ ಪ್ರಧಾನ ಕುಟುಂಬ ಮತ್ತು ಉದ್ಯೋಗಸ್ಥ ರಾಗಿದ್ದು, ಇವರಲ್ಲಿ ಅನೇಕರು ಬಡತನ ಸ್ಥಿತಿಯಲ್ಲಿದ್ದು, ಒಕ್ಕಲುತನವನ್ನು ತಮ್ಮ ಬಹುತೇಕ ಬದುಕು ಉಸಿರಾಗಿಸಿಕೊಂಡು ನಮ್ಮ ರೆಡ್ಡಿ ಸಮುದಾಯದ ಹೊಸ ತಲೆಮಾರಿ ಯುವಕರು ಶಿಕ್ಷಣ ವೃತ್ತಿ, ಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿ ಉದ್ಯೋಗ ಅವಕಾಶ ಕಲ್ಪಿಸಬೇಕು. ರೆಡ್ಡಿ ನಿಗಮ ಮಂಡಳಿ ಸ್ಥಾಪಿಸಬೇಕು. ಕರ್ನಾಟಕದಲ್ಲಿ ಸುಮಾರು 95 ಲಕ್ಷ ರೆಡ್ಡಿ ಜನರಿದ್ದು, ಇದರಲ್ಲಿ 70% ಜನ ಬಡತನ ರೇಖೆಗಿಂತ ಕೆಳಗಡೆ ಸ್ಥಿತಿಯಲ್ಲಿದ್ದು. ಹೀಗಾಗಿ ಈ ಸಮಾಜದ ಏಳಿಗೆಗಾಗಿ ರೆಡ್ಡಿ ಸಮಾಜದ ಅಭಿವೃದ್ಧಿಗಾಗಿ ನಿಗಮ/ಮಂಡಳಿ ನಿರ್ಮಿಸಬೇಕು. ರೆಡ್ಡಿ ಸಮುದಾಯ ದವರಿಗೆ ಅನುಕೂಲವಾಗುತ್ತದೆ. ತಾವುಗಳು ಆದಷ್ಟು ಬೇಗ ಈ ಕಡೆ ಗಮನ ಹರಿಸಿ ,ರೆಡ್ಡಿ ಸಮಾಜದ ಅಭಿವೃದ್ಧಿ ನಿಗಮ/ಮಂಡಳಿ ಸ್ಥಾಪಿಸಿ ಹಾಗೂ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಬೀದರಿನ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಕೊಡುವುದರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ನವರಿಗೆ ಈ ಮನವಿ ಪತ್ರವನ್ನು ಕಳಿಸುವಂತೆ ವತ್ತಾಹಿಸಿದರು.

Leave a Reply

Your email address will not be published. Required fields are marked *