ದಾವಣಗೆರೆ ಜಿಲ್ಲೆ ಅಕ್ಟೋಬರ್ 17 ಹೊನ್ನಾಳಿ ತಾಲೂಕು ಹೊನ್ನಾಳಿ ಪಟ್ಟಣದಲ್ಲಿರುವ ನ್ಯಾಯಾಂಗ ಕಚೇರಿಯ ಆವರಣದಲ್ಲಿ ಇಂದು ಹೊನ್ನಾಳಿ ಕೋಟಿನ ಪ್ರಭಾರಿ ನ್ಯಾಯಾಧೀಶರಾದ ಅವಿನಾಶ್ ಚಿಂದು ರವರ ಉಪಸ್ಥಿತಿಯಲ್ಲಿ ಕೋವಿಡ್ 19 ಜನಾಂದೋಲನ ಅಭಿಯಾನಕ್ಕೆ ಪ್ರತಿಜ್ಞೆ ಮಾಡುವುದರ ಮೂಲಕ ಚಾಲನೆಯನ್ನು ಕೊಟ್ಟರು.
ನಂತರ ಅವರು ಮಾತನಾಡಿ ಕೊರೋನಾ ಕೋವಿಡ್ ಗೆ ಯಾರು ಎದರುವ ಅವಶ್ಯಕತೆ ಇಲ್ಲ ಈ ದೇಶಕ್ಕೆ ಕೊರೋನಾ ರೋಗಕ್ಕೆ ವ್ಯಾಕ್ಸಿಂನ್ ಬರುವುದು ಇನ್ನು ಒಂದರಿಂದ ಎರಡು ವರ್ಷಗಳ ಕಾಲ ಬೇಕಾಗಬಹುದು ಆದಕಾರಣ ಕೊರೋನಾ ರೋಗದ ಜೊತೆಗೆ ಬದುಕುವುದು ಅನಿವಾರ್ಯ ಆಗಿದ್ದರೂ ಕೂಡ ನಾವುಗಳು ಅಂತರವನ್ನು ಕಾಪಾಡಿಕೊಂಡು ,ಸ್ವಚ್ಛತೆಯಿಂದ ಕೈತೊಳೆಯುವುದು, ಮುಖಕ್ಕೆ ಮಾಸ್ಕ್ ಹಾಕುವುದು, ಸ್ಯಾನಿಟೈಸರ್ ಅನ್ನು ಬಳಸುವುದರ, ಮೂಲಕ ಎಲ್ಲಾರು ಎಚ್ಚರಿಕೆಯಿಂದ ಬದುಕಬೇಕಾಗುತ್ತದೆ ಎಂದು ಹೇಳಿದರು.
ಹೊನ್ನಾಳಿಯ ಕೋರ್ಟಿನ ನ್ಯಾಯಾಧೀಶರಾದ ಸನ್ಮಾನ್ಯ ಅವಿನಾಶ್ ಚಿಂದುರವರು, ತಾಲೂಕಿನ ದಂಡಾಧಿಕಾರಿಗಳಾದ ತುಷಾರ್ ಬಿ ಹೊಸೂರಾರ ವರು ,ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ರವರು, ತಾಲೂಕು ವೈದ್ಯಾಧಿಕಾರಿಗಳಾದ ಕೆಂಚಪ್ಪನವರ, ಸಿ.ಡಿ.ಪಿ.ಓ ಮಹಾಂತೇಶ್ ರವರು ,ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ವೀರಭದ್ರಯ್ಯ ನವರು, ವಕೀಲರ ಸಂಘದ ಅಧ್ಯಕ್ಷರು ಮತ್ತು ವಕೀಲರು ಕೋರ್ಟಿನ ಸಿಬ್ಬಂದಿ ವರ್ಗದವರು ಹಾಗೂ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.