ದಾವಣಗೆರೆ ಅ.20

ಬಡತನ ನಿರ್ಮೂಲನೆ ಯೋಜನೆ 2015 ಸರ್ಕಾರದ ಯೋಜನೆಗಳನ್ನು ತಲುಪಿಸಲು ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಸಾಮಾಜಿಕ ನ್ಯಾಯದಡಿಯಲ್ಲಿ ಪ್ರತಿಯೊಬ್ಬರಿಗೂ ಸಿಗುವಂತೆ ಕೆಲಸ ನಿರ್ವಹಿಸಬೇಕು ಎಂದು ರಾಜ್ಯಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ ಹೇಳಿದರು.

ಮಂಗಳವಾರ ನಗರದ ಹಳೇಕೋರ್ಟ್ ಸಂಭಾಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಜಿಲ್ಲಾ ವಕೀಲರ ಸಂಘ ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ದಾವಣಗೆರೆ ತಾಲೂಕಿನ ಪಿಡಿಓಗಳಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಉಚ್ಚ ನ್ಯಾಯಲಯದ ನ್ಯಾಯಮೂರ್ತಿಗಳಾದ ಎ.ಎನ್ ವೇಣುಗೋಪಾಲಗೌಡರವರ ಅಧ್ಯಕ್ಷತೆಯಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಬಡತನ ನಿರ್ಮೂಲನೆ ಪರಿಣಾಮಕಾರಿ ಯೋಜನೆಯನ್ನು ತ್ವರಿತವಾಗಿ ಅನುಷ್ಟಾನಗೊಳಿಸುವ ಬಗ್ಗೆ ಮತ್ತು ಸರ್ಕಾರದ ಯೋಜನೆಗಳು ಬಡವರಿಗೆ ತಲುಪುವಂತೆ ಕ್ರಮವಹಿಸಲು ಸಂಭದಿಸಿದ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುಲು ಕರ್ನಾಟಕ ಉಚ್ಚ ನ್ಯಾಯಲಯದ ನಿವೃತ ನ್ಯಾಯಮೂರ್ತಿಗಳಾದ ಎ.ಎನ್ ವೇಣುಗೋಪಾಲರವರು ನಮಗೆ ಸೂಚನೆ ನೀಡಿದ್ದು.

ಪ್ರಸ್ತುತವಾಗಿ ಇಂದು ಬೀದಿಯಲ್ಲಿ ಆನೇಕ ಮಕ್ಕಳು ಇಂದು ಭಿಕ್ಷೆಬೇಡುತ್ತಾ ಶಿಕ್ಷಣ ವಂಚಿತರಾಗಿದ್ದಾರೆ ಆ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಬೇಕು, ಹಾಗೂ ಕೆಲವು ಬಡಜನರಿಗೆ ವೈದ್ಯಕೀಯ ವೆಚ್ಚ ಭರಿಸಲಾಗುತ್ತಿಲ್ಲ, ಬಾಲ್ಯವಿವಾಹ, ದೇವದಾಸಿ ಪದ್ದತ್ತಿ, ಬಡವರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು ನಮ್ಮ ಎಲ್ಲಾ ಇಲಾಖೆಗಳ ಆದ್ಯ ಕರ್ತವ್ಯವಾಗಿದೆ ಎಂದರು.

ಗ್ರಾಮ ಮಟ್ಟದಲ್ಲಿ ರಾಜಕೀಯ ಒತ್ತಡಗಳಿಂದ ಕೆಲವು ಫಲಾನುಭವಿ ಯೋಜನೆಗಳು ಸರಿಯಾಗಿ ಸಿಗುತ್ತಿಲ್ಲ ಅದರಿಂದ ವಂಚಿತರಾಗಿದ್ದಾರೆ ಗ್ರಾಮ ಮಟ್ಟದಲ್ಲಿ ಪಿಡಿಓಗಳು ಸರಿಯಾಗಿ ಅಧ್ಯಯಯನ ಮಾಡಿ ಸೌಲಭ್ಯ ತಲುಪಿಸಿ ಎಂದು ಸೂಚಿಸಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಅರುಣಕುಮಾರ್ ಎಲ್ ಹೆಚ್. ಮಾತನಾಡಿ, ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಒಂದು ನ್ಯಾಯಲಯವಿದ್ದಂತೆ ಈ ಪ್ರಾಧಿಕಾರದಲ್ಲಿ ವಕೀಲರ ಅವಶ್ಯಕತೆ ಇಲ್ಲ ನೊಂದವರು ಅರ್ಜಿ ನೀಡಿ ಯಾವುದೇ ಶುಲ್ಕವಿಲ್ಲದೆ ಇಲ್ಲಿಯೂ ಕೂಡ ನಿಮ್ಮ ಸಮಸ್ಯೆಗಳುನ್ನು ಬಗೆಹರಿಸಿಕೊಳ್ಳಬಹುದು ಮುಂದಿನ ದಿನಗಳಲ್ಲಿ ಹೊಬಳಿ ಮಟ್ಟದಲ್ಲಿಯೂ ಕೂಡ ಒಂದು ನ್ಯಾಯಲಯದ ವ್ಯವಸ್ಥೆ ಮಾಡಲು ಸುಪ್ರೀಂಕೋರ್ಟ್ ತಿರ್ಮಾನಿಸಿದೆ ಎಂದು ಹೇಳಿದರು.

ನಮಗೆ ಸ್ವಾತಂತ್ರ ಬಂದು 70 ವರ್ಷಗಳು ಕಳೆದರು ಸಹ ಇನ್ನೂ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ ನಮ್ಮ ದೇಶದಲ್ಲಿ ಹಸಿವು, ಶಿಕ್ಷಣ, ಆರೋಗ್ಯ ಸೌಲಭ್ಯಗಳು ಮಾತ್ರ ಇಂದಿಗೂ ಸಾಮಾನ್ಯರಿಗೆ ಮಾತ್ರ ತಲುಪುತ್ತಿಲ್ಲ, ಪ್ರಸ್ತುತ ಒಳ್ಳೆಯ ಶಿಕ್ಷಣ ದೊರೆಯುತ್ತಿಲ್ಲ ಅದರಿಂದ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಆ ಯೋಜನೆಗಳನ್ನು ಸರಿಯಾಗಿ ಕೆಲವು ಫಲಾನುಭವಿಗಳಿಗೆ ತಲುಪಿಸುವುದು ಗ್ರಾಮ ಪಂಚಾಯಿತ್ತಿ ಪಿಡಿಓ ಗಳ ಮುಖ್ಯ ಜವಾಬ್ದಾರಿಯಾಗಿದೆ ಎಂದರು

ಗ್ರಾಮೀಣ ಪ್ರದೇಶಗಳಲ್ಲಿ ಪ್ರಸ್ತುತವಾಗಿ ಬಾಲ್ಯ ವಿವಾಹಗಳು ತುಂಬಾ ನಡೆಯುತ್ತಿವೆ ಇದರಿಂದ ಮಕ್ಕಳ ಮೇಲೆ ಆನೇಕ ದುಷ್ಪರಿಣಾಮಗಳಾಗುತ್ತಿದ್ದು ಅದರ ಬಗ್ಗೆ ಜನರಿಗೆ ಜಾಗ್ರತೆಯನ್ನು, ಮತ್ತು ಇದರ ಜೊತೆಯಲ್ಲಿ ಶಿಕ್ಷಣದ ಅರಿವು ಮೂಡಿಸಬೇಕು, ಕೆಲವು ಹಳ್ಳಿಗಳಲ್ಲಿ ಇಂದಿಗೂ ಕೂಡಾ ದೇವದಾಸಿ ಪದ್ದತ್ತಿ, ಕೆಲವು ಅನಿಷ್ಟ ಪದತ್ತಿಗಳು ಇವೆ ಇವುಗಳನ್ನು ತೊಡೆದುಹಾಕಲು ನಾವೇಲ್ಲರು ಶ್ರಮ ಪಡಬೇಕು ಎಂದರು

ಕಾರ್ಯಕ್ರಮದಲ್ಲಿ ದಾವಣಗೆರೆ ಎಲ್ಲಾ ತಾಲೂಕು ಮಟ್ಟದ ಪಿಡಿಓಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *