ದಾವಣಗೆರೆ, ಅ.21
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ,
ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ಸ್ ಸಂಘಟನೆ ದಾವಣಗೆರೆ ಇವರ
ಸಂಯುಕ್ತಾಶ್ರಯದಲ್ಲಿ ಅ.22 ರಂದು ಬೆಳಿಗ್ಗೆ 11.30ಕ್ಕೆ ಜಿಲ್ಲಾ
ಕಾನೂನು ಸೇವಾ ಪ್ರಾಧಿಕಾರ, ಹಳೇ ಕೋರ್ಟ್ ಆವರಣ
ದಾವಣಗೆರೆ ಇಲ್ಲಿ ಸಂವಿಧಾನ ದಿನಾಚರಣೆ ಅಭಿಯಾನ ಅಂಗವಾಗಿ
ಮೂಲಭೂತ ಕರ್ತವ್ಯಗಳು ಕುರಿತು
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ
ಕಾರ್ಯದರ್ಶಿಗಳಾದ ಸಾಬಪ್ಪ ಕಾರ್ಯಕ್ರಮವನ್ನು
ಉದ್ಘಾಟಿಸುವರು. ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷರಾದ
ರಹಮತ್ ಉಲ್ಲಾ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕ.ರಾ.ಕಾ ಸೇ.ಪ್ರಾಧಿಕಾರದ ಸದಸ್ಯರು
ಹಾಗೂ ವಕೀಲರಾದ ಅರುಣಕುಮಾರ್ ಎಲ್.ಹೆಚ್, ಜಿಲ್ಲಾ ವಕೀಲರ
ಸಂಘದ ಕಾರ್ಯದರ್ಶಿಗಳಾದ ಲಿಂಗರಾಜ್ ಪಾಲ್ಗೋಳ್ಳುವರು.
ವಕೀಲರಾದ ಅನಿಸ್ ಪಾಶ ಸಂಪನ್ಮೂಲ ವ್ಯಕ್ತಿಗಳಾಗಿರುವರೆಂದು
ಪ್ರಕಟಣೆ ತಿಳಿಸಿದೆ.