ದಾವಣಗೆರೆ ಅ.21
ಸಹಕಾರ ಇಲಾಖೆಯಲ್ಲಿ 1960ರಡಿ ನೋಂದಣಿಗೊಂಡು 5 ವರ್ಷಗಳಿಗೂ ಮೇಲ್ಪಟ್ಟು ನವೀಕರಣಗೊಳ್ಳದೇ ಇರುವ ಸಂಘ ಸಂಸ್ಥೆಗಳು ಡಿ. 31 ರೊಳಗಾಗಿ ನವೀಕರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಅಂತಹ ಸಂಘ ಸಂಸ್ಥೆಗಳಿಗೆ ನವೀಕರಣಕ್ಕಾಗಿ ಕಡೆಯ ಒಂದು ಅವಕಾಶ ನೀಡಲಾಗಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿನ ಸಂಘ ಸಂಸ್ಥೆಗಳು ಪ್ರತಿ ವರ್ಷಕ್ಕೆ ಹೆಚ್ಚುವರಿ ರೂ.500/-ರಂತೆ ದಂಡ ಪಾವತಿಸಿ ಜೊತೆಗೆ, ಅವಶ್ಯ ದಾಖಲೆಗಳನ್ನು ಸಲ್ಲಿಸಿ ಡಿ.31 ರೊಳಗೆ ನವೀಕರಣ ಮಾಡಿಸಿಕೊಳ್ಳಬಹುದು. ತಪ್ಪಿದಲ್ಲಿ ಅಂತಹ ಸಂಘ ಸಂಸ್ಥೆಗಳ ನೊಂದಣಿ ರದ್ದು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಸಂಘಗಳ ನೋಂದಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕ ಬಿ.ಜಯಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.