ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಹೊನ್ನಾಳಿ ಪಟ್ಟಣದ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ 2019ರ ನವಂಬರ್ ನಿಂದ ಇಲ್ಲಿಯವರೆಗೆ ಸುಮಾರು 35ರಿಂದ 40ಪತ್ರಗಳಲ್ಲಿ ನಕಲಿ ಚಲನ್ ಗಳನ್ನು ಸೃಷ್ಟಿ ಮಾಡಿಕೊಂಡು ಬ್ಯಾಂಕಿಗೆ ಹಣವನ್ನು ಪಾವತಿ ಮಾಡದೆ ಕೆಲವೊಂದು ಪತ್ರಗಳು ರಿಜಿಸ್ಟರ್ ಆಗಿವೆ .ಹೊನ್ನಾಳಿ ಸಬ್ ರಿಜಿಸ್ಟರ್ ಅಧಿಕಾರಿಗಳಾದ ವೀಣಾ ಬಾಯಿಯವರಿಗೆ ಗೊತ್ತಿದ್ದೂ ಅವರು ತಮ್ಮ ತಪ್ಪುಗಳನ್ನು ಮುಚ್ಚಿ ಕೊಳ್ಳಲಿಕ್ಕೆ ಕೆಲವೊಂದು ಮುಖಂಡರುಗಳನ್ನು ಕರೆಸಿ ಹಣವನ್ನು ತುಂಬಲಿಕ್ಕೆ ಒತ್ತಾಯಿಸಿರುತ್ತಾರೆ ,ಆದರೆ ಈ ನಕಲಿ ಚಲನ್ ಗಳು ಎಲ್ಲಿಂದ ತಯಾರಾಗುತ್ತಿವೆ ? ಪತ್ರಗಳ ನೊಂದಣಿ ಆಗುವುದಕ್ಕೆ ಕಾರಣೀಭೂತರಾದ ಅಧಿಕಾರಿಗಳು ಮತ್ತು ನಕಲಿ ಚಲನ್ ಸುಷ್ಟಿ ಮಾಡಿಕೊಂಡು ಅವ್ಯವಹಾರ ಮಾಡಿರುವ ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸತ್ಯಾಸತ್ಯತೆಯನ್ನು ತಿಳಿದುಕೊಂಡು ಅವರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮಾನ್ಯ ಡಿವೈಎಸ್ಪಿ ಎಸಿಬಿ ಕಚೇರಿ ಭ್ರಷ್ಟಾಚಾರ ನಿಗ್ರಹ ದಳ .ದಾವಣಗೆರೆ ಇವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಪ್ರಧಾನ ಸಂಚಾಲಕರಾದ ಮಂಜುನಾಥ್ ಕುರುವರವರು ಮನವಿ ಪತ್ರವನ್ನು ಸಲ್ಲಿಸಿದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.