ಮೀಸಲಾತಿ ಕುರಿತಂತೆ ತಾಲೂಕು ವಾಲ್ಮೀಕಿ ಸಮಾಜದ ವತಿಯಿಂದ ದಿನಾಂಕ ಅ 23 ರ ಶುಕ್ರವಾರದಿಂದ ಬೇಡಿಕೆ ಈಡೇರುವವರೆಗೆ ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ನಡೆಸಲು ಉದ್ದೇಶಿಸಿದ್ದ ಅನಿರ್ದಿಷ್ಟ ವಾಗಿ ರಾತ್ರೋರಾತ್ರಿ ಧರಣಿ ಸತ್ಯಾಗ್ರಹವನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನ ಸ್ವಾಮೀಜಿ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ತಿಮ್ಮೇನಹಳ್ಳಿ ಟಿ.ಆರ ಚಂದಪ್ಪ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ವಾಲ್ಮೀಕಿ ಸಮುದಾಯಕ್ಕೆ ಶೇಕಡ 7.5ರಷ್ಟು ಮೀಸಲಾತಿ ನೀಡುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕಿನಲ್ಲಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ ಹಾಗಾಗಿ ಹೊನ್ನಾಳಿಯಲ್ಲಿ ನಡೆಸಲು ಉದ್ದೇಶಿಸಿದ್ದ ಧರಣಿಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಉಪಚುನಾವಣೆ ಹಿನ್ನಲೆಯಲ್ಲಿ ಯಾವುದೇ ಘೋಷಣೆ ಮಾಡುವಂತಿಲ್ಲ ಆದ್ದರಿಂದ ಈಗ ಏನೂ ಮಾಡಲಾಗುತ್ತಿಲ್ಲ ಹಾಗಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ವಿಷಯದಲ್ಲಿ ನಿರ್ಧಾರಕ್ಕೆ ಬರಲು ಒಂದು ತಿಂಗಳ ಸಮಯಾವಕಾಶ ಕೇಳಿದ್ದಾರೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ನೀರಾವರಿ ಸಚಿವ ಜಾರಕಿಹೊಳಿ ,ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಶಾಸಕರಾದ ರಾಜುಗೌಡ ,ಎಸ್ ವಿ ರಾಮಚಂದ್ರಪ್ಪ ವಾಲ್ಮೀಕಿ ಸಮಾಜದ ರಾಜ್ಯಾಧ್ಯಕ್ಷ ಸಿರಿಗೆರೆ ತಿಪ್ಪೇಶ್ ಮತ್ತಿತರರು ಬಿಎಸ್ ಯಡಿಯೂರಪ್ಪ ಅವರೊಂದಿಗೆ ಗುರುವಾರ ಮಾತುಕತೆ ನಡೆಸಿದ್ದಾರೆ ಆ ಹಿನ್ನಲೆಯಲ್ಲಿ ಅನಿರ್ದಿಷ್ಟಾವಗಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಅಕ್ಟೋಬರ್ 30 ರಂದು ವಾಲ್ಮೀಕಿ ಜಯಂತೋತ್ಸವದ ನಡೆಸಲು ಉದ್ದೇಶಿಸಿದ್ದ ಬೆಂಗಳೂರಿನ ವಿಧಾನ ಸೌಧಕ್ಕೆ ಮುತ್ತಿಗೆ ಕಾರ್ಯಕ್ರಮವನ್ನು ಕೈಬಿಡಲಾಗಿದೆ ಎಂದು ವಿವರಿಸಿದರು .ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಮೊದಲಿನಿಂದಲೂ ವಾಲ್ಮೀಕಿ ಸಮಾಜದ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ ಅವರ ಶ್ರಮದಿಂದಲೇ ಈ ಹಿಂದೆ ವಾಲ್ಮೀಕಿ ಜಯಂತೋತ್ಸವ ವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಬಿಎಸ್ವೈ ನಿರ್ಧರಿಸಿದ್ದರು ಅದಕ್ಕಾಗಿ ಸಮಾಜದ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತಿದ್ದು, ಇದೀಗ ವಾಲ್ಮೀಕಿ ಸಮಾಜಕ್ಕೆ ಶೇಕಡ 7.5 ರಷ್ಟು ಮೀಸಲಾತಿ ಒದಗಿಸುವ ಜಸ್ಟೀಸ್ ನಾಗಮೋಹನ್ ದಾಸ್ ಮೇಲೆ ಒತ್ತಡ ಹಾಕಬೇಕು ಎಂದು ಸಮಾಜ ಅಗ್ರಹಿಸುತ್ತದೆ ಎಂದು ತಿಮ್ಮೇನಹಳ್ಳಿ ಟಿ.ಆರ್ ಚಂದಪ್ಪ ಹೇಳಿದರು.
ತ.ಪಂ ಉಪಾಧ್ಯಕ್ಷ ಕುಳಗಟ್ಟೆ ಕೆ.ಎಲ್ ರಂಗನಾಥ್, ಸದಸ್ಯ ಕವಿತಾ ಪ್ರಭು ಗೌಡ, ತಾಲೂಕು ವಾಲ್ಮೀಕಿ ಸಮಾಜದ ಗೌರವಧ್ಯಕ್ಷ ಕೋಣನತಲೆ ನಾಗಪ್ಪ ,ಮುಖಂಡರಾದ ಸಿ ಹನುಮಂತಪ್ಪ, ಜಗದೀಶ್, ಟಿ.ಎಂ ಶಿವಾನಂದ, ಹತ್ತೂರು ಚಂದ್ರಪ್ಪ ,ಆರ್ ಬಸಣ್ಣ, ಪಕ್ಕೀರಪ್ಪ ಟಿ.ಹೆಚ್ ಅಣ್ಣಪ್ಪ,ಹೊಳಲೂರು ಶೇಖರಪ್ಪ, ಪಿ.ಎಲ್.ಡಿ ಬ್ಯಾಂಕಿನ ಹನುಮಂತಪ್ಪ, ಕಮ್ಮರಗಟ್ಟೇ ಗಂಗಾಧರ್, ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.