ದಾವಣಗೆರೆ ಅ.23
ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಇವರು ಅ.24
ರಂದು ದಾವಣಗೆರೆ ಮತ್ತು ತುಮಕೂರು ಜಿಲ್ಲೆಯಲ್ಲಿ
ತಾತ್ಕಾಲಿಕ ಪ್ರವಾಸ ಕೈಗೊಳ್ಳಲಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ
ನಿಲ್ದಾಣದಿಂದ ಹೊರಟು ಬೆಳಿಗ್ಗೆ 11.15 ಕ್ಕೆ ದಾವಣಗೆರೆಯ ಜಿ.ಎಂ.ಐ.ಟಿ
ಮೈದಾನದ ಹೆಲಿಪ್ಯಾಡ್ಗೆ ಬಂದು ತಲುಪಿ, 11.30ಕ್ಕೆ ದಾವಣಗೆರೆ ಜಿಲ್ಲಾ
ಭಾ.ಜ.ಪ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ನಂತರ ಮಧ್ಯಾಹ್ನ 12.30ಕ್ಕೆ
ಕಾರ್ಯಕ್ರಮದ ಸ್ಥಳದಿಂದ ಹೊರಟು 12.40 ಕ್ಕೆ ಜಿ.ಎಂ.ಐ.ಟಿ
ಮೈದಾನ ತಲುಪುವರು ಹಾಗೂ 1.30ಕ್ಕೆ ಜಿ.ಎಂ.ಐ.ಟಿ ಮೈದಾನದ
ಹೆಲಿಪ್ಯಾಡ್ನಿಂದ ಹೊರಟು ತುಮಕೂರಿಗೆ ತೆರಳುವರೆಂದು
ಪ್ರಕಟಣೆ ತಿಳಿಸಿದೆ.