ಹೊನ್ನಾಳಿ:ಕಿತ್ತೂರು ರಾಣಿ ಚೆನ್ನಮ್ಮನ
ಧೈರ್ಯ ಸಾಹಸ ಮನೋಭಾವವು ಇಂದಿನ
ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆಯಾಗಲಿ
ಎಂಬುದಾಗಿ ರಾಜ್ಯ ಪಂಚಮಸಾಲಿ ಸಮಾಜದ ರಾಜ್ಯ
ಯುವಘಟಕದ ಮಾಜಿಅಧ್ಯಕ್ಷರು ಸಮಾಜದ
ಮುಖಂಡರಾದ ಪಟ್ಟಣಶೆಟ್ಟಿ ಪರಮೇಶ್
ಹೇಳಿದರು.
ಅವರು ಹೊನ್ನಾಳಿಯಲ್ಲಿ ಕಿತ್ತೂರು ಚನ್ನಮ್ಮ
ಪಂಚಮಸಾಲಿ ಯುವಕರ ಸಂಘದಿಂದ ನಡೆದ
197ನೇ ಕಿತ್ತೂರು ಚನ್ನಮ್ಮ ವಿಜಯೋತ್ಸವ
ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ
ಸನ್ಮಾನಿಸಿ ಮಾತನಾಡಿದರು.
ಶಿಕ್ಷಕ ಕೆವಿ ಪ್ರಸನ್ನ ಮಾತನಾಡಿ, ಕಿತ್ತೂರು
ಚನ್ನಮ್ಮ ಎಂಬ ವಿಷಯವಾಗಿ ಉಪನ್ಯಾಸ ನೀಡಿ
ಪಂಚಮಸಾಲಿ ಸಮಾಜ ಸುಧಾರಣೆಯಾಗಲು
ಹಲವಾರು ಮಾರ್ಪಾಡುಗಳನ್ನು
ಕಂಡುಕೊಳ್ಳಬೇಕಿದೆ ಎಂಬುದಾಗಿ ಅಭಿಪ್ರಾಯ
ವ್ಯಕ್ತ ಪಡಿಸಿದರು.
ಶಿಕ್ಷಕ ಗಿರೀಶ್‍ನಾಡಿಗ್ ಮಾತನಾಡಿ ಪಂಚಮಸಾಲಿ
ಸಮಾಜದ ಮೂಲ ಉದ್ದೇಶ ಬೆಳವಣಿಗೆ
ಮತ್ತು ಅದರ ಮಹತ್ವದ ಬಗ್ಗೆ ವಿವರಿಸಿದರು.
ಪತ್ರಕರ್ತ ಮೃತ್ಯುಂಜಯ ಪಾಟೀಲ್
ಮಾತನಾಡಿ ಕಿತ್ತೂರುಚನ್ನಮ್ಮ ಪಂಚಮಸಾಲಿ
ಯುವಕರ ಸಂಘವು ಗಿರೀಶ್ ರವರ
ಅಧ್ಯಕ್ಷತೆಯಲ್ಲಿ ರಚನೆಗೊಂಡು ಇದೇ
ಮೊದಲ ಬಾರಿ ಹೊನ್ನಾಳಿ ಪಟ್ಟಣದಲ್ಲಿ ಸಮಾಜದ
ಪ್ರತಿಭಾನ್ವಿತ ಮಕ್ಕಳ ಸನ್ಮಾನಿಸುವ ಕಾರ್ಯ
ಹಮ್ಮಿಕೊಂಡಿದೆ.
ಸಂಘವು ಉತ್ತರ ಕರ್ನಾಟದ ನೆರೆಸಂತ್ರಸ್ತರ
ನೆರೆವಿಗೆ ಸ್ಪಂದಿಸಿದ್ದು ಹರಿಹರ ಪೀಠಕ್ಕೆ ಭೇಟಿ
ಮಾಡಿ ಕಿತ್ತೂರು ಸಂಸ್ತಾನಕ್ಕೆ ಒಂದು ದಿನದ
ಪ್ರವಾಸ ಹೋಗಿಬಂದಿದ್ದು. ಸಮಾಜದ ಹಲವು
ಅಭಿವೃದ್ದಿ ಕಾರ್ಯಗಳಿಗೆ ಸಂಘವು
ಮುಂದಾಗಿದೆ ಎಂದರು.
ನಿವೃತ್ತ ಪೊಲೀಸ್ ಶೇಖರಪ್ಪ, ದೊಡ್ಡಪೇಟೆ
91 ವರ್ಷದ ಕುಂಕೋದಕೊಟ್ರಮ್ಮ ಇವರನ್ನ
ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ ಪ್ರತಿಭಾನ್ವಿತ
ಮಕ್ಕಳಾದ ಶ್ರೀನಿಧಿಪಾಟೀಲ್, ಕಿರಣಾ,
ಐಶ್ವÀರ್ಯ, ರಾಜೇಶ್, ರುದ್ರೇಶ್, ಪವನ್,
ಧನುಶ್ರೀ, ಚೇತನ್ ಪಿಯುಸಿಯ ಚನ್ನೇಶ್
ಸಂಜನಾ ಶೃತಿ ಎಂಬ ವಿದ್ಯಾರ್ಥಿಗಳನ್ನ
ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು
ಯುವಘಟಕದ ಅಧ್ಯಕ್ಷ ಹೊಟೇಲ್ ಗಿರೀಶ್
ವಹಿಸಿದ್ದರು.ಅತಿಥಿಗಳಾಗಿ ಪಂಚಾಯಿತಿ ಸದಸ್ಯೆ
ಪದ್ಮಾಪ್ರಶಾಂತ್, ರೈತ ಮುಖಂಡ ಬಸವರಾಜಪ್ಪ,
ಹಿರೇಮಠದ ಕಾಯಿಬಸಣ್ಣ, ಮಠದರಾಜಣ್ಣ,
ಕುಂಕೋದ್ ಹಾಲೇಶ್ ಸೇರಿದಂತೆ ಸಂಘದ
ಉಪಾಧ್ಯಕ್ಷರು ಪದಾಧಿಕಾರಿಗಳು ಇದ್ದರು.
ಆರಂಭದಲ್ಲಿ ಸಮಾಜದ ಯುವಕರು ಬೈಕ್
ರ್ಯಾಲಿ ಮೂಲಕ ಸಂಗೊಳ್ಳಿರಾಯಣ್ಣ ಪ್ರತಿಮೆಗೆ
ಹಾರಹಾಕುವ ಮೂಲಕ ಚನ್ನಮ್ಮನ
ಸಹಾಯಕನಾಗಿದ್ದ ಸಂಗೊಳ್ಳಿರಾಯಣ್ಣನಿಗೆ
ಗೌರವಸಲ್ಲಿಸಲಾಯಿತು