ಕಿರುನೋಟದಲಿ ನಕ್ಕು
ಕಚ್ಚಿಹಿಡಿದ ತುಟಿಗಳಲಿ
ಒಸರಿದ್ದೊಂದು ರಸಕಾವ್ಯ !
ಬಿಸಿಯುಸಿರು ತಾಗಿ. . . .
ನಾಚಿ ನೀರಾಗಿ. . . . . . .
ನವಿರು ಕಾಲುಗುರಿನಲಿ
ನೆಲದಿ ಗೀರಿದ ರಂಗೋಲಿ
ಹೊಸ ಮಧುರ ಸರಸಕಾವ್ಯ !
ಕಣ್ಣು ಕಣ್ಣಲಿ ಕಲೆತು
ಕೈಗೆ ಕೈಗಳು ಬೆರೆತು
ಮೈಮನಗಳೊಂದಾಗಿ
ಮಾತಿಲ್ಲದಂತಾದುದು. . . !
ಮರೆಯದ ಮಹಾಕಾವ್ಯ
ಪತ್ರಿಕಾ ರಂಗದ ಸಾಮ್ರಾಟ
ಮಾದ್ಯಮ ಮಿತ್ರ
ಜಿ ಕೆ ಹೆಬ್ಬಾರ್