ವಿಜಯದಶಮಿ ರಾಮ ರಾವಣನೊಂದಿಗೆ ಯುದ್ಧ ಮಾಡಿ ವಿಜಯಿಯಾದ ದಿನ.. ಚಾಮುಂಡೇಶ್ವರಿ ಮಹಿಷಾಸುರನನ್ನು ವಧಿಸಿದ ದಿನ.. ಪಾಂಡವರು ಶತ್ರುಗಳನ್ನು ಮಣಿಸಿದ ದಿನ. ದಸರೆಯ ಕೊನೆಯ ದಿನ. ವಿಜಯದಶಮಿ ಕುರಿತು ಪೌರಾಣಿಕ, ಐತಿಹಾಸಿಕ ಕಥೆಗಳಿವೆ. ತಾಯಿ ದುರ್ಗೆ ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜಾಸುರ, ಮಹಿಷಾಸುರ ಸೇರಿದಂತೆ ಅನೇಕ ರಾಕ್ಷಸರನ್ನು ಸಂಹರಿಸಿ ವಿಜಯೋತ್ಸವ ಸಾಧಿಸಿದ ದಿನವೇ ವಿಜಯದಶಮಿ. ದೇವಾನುದೇವತೆಗಳಿಗೆ ವಿಜಯ ತಂದು ಕೊಟ್ಟ ವಿಜಯದಶಮಿ ರಾಜ-ಮಹಾರಾಜರ ಪಾಲಿಗೂ ಅದೃಷ್ಟದ ದಿನ.

ವಿಜಯದಶಮಿ ರಾಮ ರಾವಣನೊಂದಿಗೆ ಯುದ್ಧ ಮಾಡಿ ವಿಜಯಿಯಾದ ದಿನ.. ಚಾಮುಂಡೇಶ್ವರಿ ಮಹಿಷಾಸುರನನ್ನು ವಧಿಸಿದ ದಿನ.. ಪಾಂಡವರು ಶತ್ರುಗಳನ್ನು ಮಣಿಸಿದ ದಿನ. ದಸರೆಯ ಕೊನೆಯ ದಿನ. ವಿಜಯದಶಮಿ ಕುರಿತು ಪೌರಾಣಿಕ, ಐತಿಹಾಸಿಕ ಕಥೆಗಳಿವೆ. ತಾಯಿ ದುರ್ಗೆ ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜಾಸುರ, ಮಹಿಷಾಸುರ ಸೇರಿದಂತೆ ಅನೇಕ ರಾಕ್ಷಸರನ್ನು ಸಂಹರಿಸಿ ವಿಜಯೋತ್ಸವ ಸಾಧಿಸಿದ ದಿನವೇ ವಿಜಯದಶಮಿ. ದೇವಾನುದೇವತೆಗಳಿಗೆ ವಿಜಯ ತಂದು ಕೊಟ್ಟ ವಿಜಯದಶಮಿ ರಾಜ-ಮಹಾರಾಜರ ಪಾಲಿಗೂ ಅದೃಷ್ಟದ ದಿನ.

ಈ ದಿನದ ಮಹತ್ವವನ್ನು ಅರಿತೇ ರಾಜ ಮಹಾರಾಜರು ಶತ್ರುಗಳ ವಿರುದ್ಧ ಯುದ್ಧಕ್ಕೆ ಹೊರಡುತ್ತಿದ್ದರು ಎನ್ನಲಾಗುತ್ತೆ. ದಸರಾ ಎಂಬುದು ದಶಂ, ಹರಂ ಎಂಬ ಸಂಸ್ಕೃತ ಶಬ್ದದಿಂದ ಬಂದಿದೆ. ದಶ ಎಂದರೆ ಹತ್ತು, ಹರ ಎಂದರೆ ನಿರ್ಮೂಲನೆ. ನಮ್ಮಲ್ಲಿರುವ 10 ವಿಧದ ದುರ್ಗುಣಗಳಾದ ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ, ಸ್ವಾರ್ಥ, ಅನ್ಯಾಯ, ಅಮಾನವೀಯತೆ, ಅಹಂಕಾರವನ್ನು ನಿರ್ಮೂಲನೆ ಮಾಡುವುದೇ ದಸರಾ ಹಬ್ಬದ ಹಿಂದಿರುವ ತತ್ವ. ವಿಜಯದಶಮಿ ಅಂದ್ರೆ ವಿಜಯದ ಸಂಕೇತ. ವಿಜಯದ ಪರಾಕ್ರಮದ ಹಬ್ಬವೇ ವಿಜಯದಶಮಿ. ಈ ವಿಶೇಷ ದಿನದಂದು ಯಾವುದೇ ಕಾರ್ಯಗಳನ್ನು ಆರಂಭಿಸಿದ್ರೂ ಅದರಲ್ಲಿ ವಿಜಯ ಖಚಿತ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ. ನವರಾತ್ರಿಯ ಒಂಬತ್ತು ದಿನಗಳ ವ್ರತ ದಶಮಿಯಂದು ಅಂತ್ಯವಾಗುತ್ತೆ. ದಶಮಿಯಂದು ದುರ್ಗೆ ವಿಜಯ ಪ್ರದಾನಿಸ್ತಾಳೆ ಅನ್ನೋ ನಂಬಿಕೆ ಇದೆ. ದಶಮಿಯಂದು ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿಯ ಪೂರ್ಣ ರೂಪ ಸಾಕಾರವಾಗುತ್ತೆ. ಈ ದಿನ ದುರ್ಗೆ ಬೇಡಿದ್ದನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ.

ನದಿ ಸ್ನಾನ ಮಾಡಿ
ಕುಲದೈವ, ಆರಾಧ್ಯದೇವರಿಗೆ ಪೂಜೆ ಮಾಡಿ
ದೇವರಿಗೆ ಮಹಾ ನೈವೇದ್ಯ ಅರ್ಪಿಸಿ
ದೇವಿಗೆ ಅಷ್ಟೋತ್ತರ, ಶತನಾಮಾವಳಿ ಪಾರಾಯಣ ಮಾಡಿ
ಸಂಪತ್ತಿನ ಪ್ರತೀಕವಾಗಿರುವ ಗೋವಿಗೆ ಪೂಜೆ ಸಲ್ಲಿಸಿ
ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಪ್ರದಾಯ.

ರಾತ್ರಿಅದೇ ಸಂದರ್ಭದಲ್ಲಿ ದೀಪಾರಾಧನೆ ವಿಶೇಷ. ದೀಪ ಅಂದ್ರೆ ಪಂಚಭೂತಗಳ ಸಂಗಮ. ಇಡೀ ಜಗತ್ತಿಗೆ ಆತ್ಮ ಸ್ವರೂಪ. ನವರಾತ್ರಿಯ ವೇಳೆ ಅಖಂಡ ಜ್ಯೋತಿ ಬೆಳಗಿಸಿದವರು ಈ ದಿನ ದೀಪದಲ್ಲಿ ಮಹಾಲಕ್ಷ್ಮೀಯನ್ನು ಆವಾಹಿಸಿ. ದೀಪಲಕ್ಷ್ಮೀಯನ್ನು ಪೂಜಿಸಿದ್ರೆ ಐಶ್ವರ್ಯ ಆರೋಗ್ಯ ಪ್ರಾಪ್ತಿಯಾಗುತ್ತೆ ಅಂತಾ ನಮ್ಮ ಶಾಸ್ತ್ರಗಳು ಹೇಳುತ್ತವೆ. ಇನ್ನು ಈ ದಿನದ ದಾನಕ್ಕೆ ವಿಶೇಷ ಮಹತ್ವ ಇದೆ. ಇಲ್ಲದವರಿಗೆ ಇರುವವರು ನೀಡುವ ಮೂಲಕ ಮತ್ತೊಬ್ಬರ ಅಗತ್ಯ ಪೂರೈಕೆಯಾಗುವ ಆಶಯವೇ ದಾನ. ದಾನ ನಮ್ಮ ಪಾಪಗಳನ್ನು ತೊಳೆಯುವ ಒಂದು ಕ್ರಿಯೆ ಅನ್ನೋದು ಧರ್ಮ ಗ್ರಂಥಗಳ ಅಭಿಪ್ರಾಯ. ಅದರಲ್ಲೂ ವಿಜಯದಶಮಿಯ ದಿನ ಮಾಡುವ ದಾನಕ್ಕೆ ವಿಶೇಷ ಮಹತ್ವವನ್ನು ನಮ್ಮ ಪೂರ್ವಿಕರು ನೀಡಿದ್ದಾರೆ.

ವಿಜಯದಶಮಿಯಂದು ದಾನದ ಮಹತ್ವ:
ಅಕ್ಕಿ ದಾನ ಮಾಡಿದ್ರೆ ಚಂದ್ರಲೋಕ ಪ್ರಾಪ್ತಿ
ವಸ್ತ್ರ ದಾನದಿಂದ ಚರ್ಮ ರೋಗಗಳು ದೂರ
ತೊಗರಿಬೇಳೆ ದಾನದಿಂದ ರಕ್ತದೊತ್ತಡ ನಿವಾರಣೆ
ಬಂಗಾರ ದಾನದಿಂದ ಮಧುಮೇಹ, ರಕ್ತದೊತ್ತಡ ನಿವಾರಣೆ
ಉದ್ದಿನಬೇಳೆ ದಾನದಿಂದ ಸಂತಾನ ಸಮಸ್ಯೆ ನಿವಾರಣೆ
ಎಳ್ಳೆಣ್ಣೆ ದಾನದಿಂದ ದೀರ್ಘಕಾಲದ ರೋಗಗಳು ಉಪಶಮನ
ಹೆಸರುಬೇಳೆ ದಾನದಿಂದ ಮನಸ್ಸಿನ ಭಯ ದೂರ
ಬೆಳ್ಳಿ ದಾನದಿಂದ ಸಂತಾನಭಾಗ್ಯ
ಹುರುಳಿ ದಾನದಿಂದ ಮಾನಸಿಕ ಚಿಂತನೆ ದೂರ
ಗೋದಾನ ಮಾಡಿದ್ರೆ ಪುಣ್ಯಲೋಕ ಪ್ರಾಪ್ತಿ

ಬನ್ನಿ ಪತ್ರೆಯನ್ನು ಬಂಗಾರ ಎಂದೂ ಕರೆಯಲಾಗುತ್ತೆ. ಇಂತಹ ಬನ್ನಿ ಪತ್ರೆಯನ್ನು ವಿಜಯ ದಶಮಿಯಂದು ಪರಸ್ಪರ ವಿನಿಮಯ ಮಾಡಿಕೊಳ್ಳುವ ವಾಡಿಕೆ ಇದೆ. ಬನ್ನಿ ತೆಗೆದುಕೊಂಡು ಬಂಗಾರದಂಗೆ ಇರಿ ಎಂದು ಹೇಳ್ತಾ ಬನ್ನಿಯನ್ನು ಪರಸ್ಪರ ಹಂಚಿಕೊಳ್ತಾರೆ.
ಶಮೀ ಪತ್ರೆ ನೀಡುವಾಗ ಹೇಳುವ ಶ್ಲೋಕ
ಶಮೀ ಶಮಯತೇ ಪಾಪಂ.. ಶಮೀ ಶತ್ರು ವಿನಾಶಿನಿ…
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶಿನಿ
ಶಮೀ ವೃಕ್ಷ ದೇವಲೋಕದಿಂದ ಬಂದ ವೃಕ್ಷ ಎಂದೇ ಹೇಳಲಾಗುತ್ತೆ. ಈ ವೃಕ್ಷದಲ್ಲಿ ಸಾಕ್ಷಾತ್ ದುರ್ಗೆ ನೆಲೆಸಿದ್ದಾಳೆ. ಇಂತಹ ಶಮೀ ವೃಕ್ಷವನ್ನು ವಿಜಯದಶಮಿಯಂದು ಪೂಜಿಸುವುದರಿಂದ ಅನೇಕ ಫಲಗಳನ್ನು ಪಡೆಯಬಹುದು.

ಶಮೀ ವೃಕ್ಷ ಪೂಜಾ ಫಲಗಳು:
ಶಮೀ ಪೂಜೆಯಿಂದ ಶತ್ರುಗಳ ನಾಶ
ಪಾಪ ಪರಿಹಾರ
ಮನುಷ್ಯನ ಅಂತರಂಗ, ಬಹಿರಂಗದ ಶುದ್ಧಿ
48 ದಿನ ಶಮೀ ವೃಕ್ಷ ಪೂಜಿಸಿದ್ರೆ ವಿವಾಹ ಭಾಗ್ಯ
21 ದಿನ ಶಮೀ ವೃಕ್ಷ ಪೂಜಿಸಿದ್ರೆ ದುಷ್ಟ ಶಕ್ತಿಗಳ ಕಾಟ ದೂರ
ಅಕಾಲ ಮೃತ್ಯು ದೋಷ ಪರಿಹಾರ
ಮನೆಯಲ್ಲಿ ಶಾಂತಿ, ನೆಮ್ಮದಿ
ಬನ್ನಿ ಪೂಜೆಯಿಂದ ಮನೆಯಲ್ಲಿ ಲಕ್ಷ್ಮೀ ವಾಸ
ಬನ್ನಿ ಪೂಜಿಸಿದ್ರೆ ದೇವಾನುದೇವತೆಗಳ ಆಶೀರ್ವಾದ
ನಕಾರಾತ್ಮಕ ಶಕ್ತಿಗಳು ದೂರ
ಶಮೀ ಪೂಜೆ, ಪ್ರದಕ್ಷಿಣೆಯಿಂದ ದೈಹಿಕ, ಮಾನಸಿಕ ದೋಷ ಪರಿಹಾರ
ಆರೋಗ್ಯದ ದೃಷ್ಟಿಕೋನ ಇಟ್ಟುಕೊಂಡೇ ನಮ್ಮ ಪೂರ್ವಿಕರು ಕೆಲವು ಗಿಡ ಮರಗಳನ್ನು ಆಧ್ಯಾತ್ಮಿಕ ಚೌಕಟ್ಟಿಗೆ ತಂದಿದ್ದಾರೆ. ಹೀಗಾಗೇ ಇಂತಹ ಪೂಜೆಗಳನ್ನು ಮೂಢನಂಬಿಕೆ ವ್ಯಾಪ್ತಿಗೆ ತರದೇ, ನಿಜವಾದ ಅರ್ಥವನ್ನು ಅರಿತು ಆಚರಣೆ ಮಾಡಿದ್ರೆ ಖಂಡಿತ ಮನುಕುಲದ ಉದ್ಧಾರವಾಗುತ್ತೆ ಎನ್ನಲಾಗುತ್ತೆ.

ಜಿ ಕೆ ಹೆಬ್ಬಾರ್ ಶಿಕಾರಿಪುರ

Leave a Reply

Your email address will not be published. Required fields are marked *