ಹಸಿರು ಬನದ ಆ ಹಾದಿಯಲಿ
ಪ್ರೀತಿ ತುಂಬಿದ ಕಂಗಳಲಿ
ನಾ ಕಾದಿರುವೆ ಇನಿಯ ನಿನಗಾಗಿ
ನಿನ್ನೊಲುಮೆಯ ಸವಿ ನುಡಿಗಾಗಿ

ಹೂಗಾಳಿಯ ಕಂಪಿನಲಿ
ಮನವಿಂದು ಹೂವಾಗಿರಲು
ನೀನೆನ್ನುವ ಮಮತೆಯ ನೆನಪು
ಅಲೆಯಾಗುತಿದೆ ಜಗವೆಲ್ಲವು
ಸವಿ ನೆನಪುಗಳೆ ಹೆಗಲೇರಿವೆ
ನೀ ನೋಡು ಬಾ ನನ್ನ. ಇನಿಯ..

ರಮಿಸುವ ತಂಗಾಳಿಯ ಸುಖದಲಿ
ಹೂಬನದ ವೈಭವದ ಹಾದಿಯಲಿ
ನೀ ಕೈಹಿಡಿದು ನಡೆಸುವೆಯ?
ನಿನ್ನೊಲವಿಗೆ ಹೂವಾಗಿ
ನಾ ನಗುವೆವು ಅನುದಿನವು ಅರಳಲಿ ಇನಿಯ

ಹನಿ ಹನಿ ಪ್ರೀತಿಯು ಮಳೆಯಾಗುತಿದೆ
ನೀನೆನ್ನುವ ಜೀವವು ಮನಕೆ ಆವರಿಸಿರಲು
ಅಕ್ಕರೆಯ ನದಿಯು ಮೈದುಂಬಿದೆ
ಬಾಳಿಗೆ ನೀ ಚೇತನವಾಗಿ ನಗುತಿರಲು
ನೋಡು ಬಾ ತಂಗಾಳಿಯ ಸಪ್ಪಳದಲ್ಲು ನಾ ಆಲೈಸುವೆ ನಿಿನ್ನ್ನಾ. ಕೆರೆಯ

ಕಾಲ್ಗೆಜ್ಜೆಯ ನಾದದ ಖುಷಿಯಲ್ಲು
ಆಲಿಸುತಿದೆ ನಿನದೇ ಹೆಸರು
ನಿನ್ನೊಲುಮೆಯದೆ ಗುಣಗಾನವು
ಏನಿದು ಮಾಯೆಯು ನ್ನ್ನ್ನಇನಿಯ

ತುಂಬಿದ ಕಂಗಳಲಿ
ನಾ ಕಾದಿರುವೆ ಗೆಳೆಯ
ಹರುಷದ ಬಾಳಿಗೆ ವರವಾಗು
ಕನಸಿನ ನಾವೆಗೆ ಜೊತೆಯಾಗು
ಕಾದಿರುವೆ ನಿನಗಾಗಿ
ನೀ ಬರುವ ಸವಿ ಘಳಿಗೆಗಾಗಿ..

ಬರಾಲಾರೆಯ ನನ್ನ ಇನಿಯಾ

ಜಿ ಕೆ ಹೆಬ್ಬಾರ್

Leave a Reply

Your email address will not be published. Required fields are marked *