ದಾವಣಗೆರೆ ಅ.27
ಅ.27 ರಂದು ರಾಹುಲ್ ಅಗರ್ವಾಲ್ರವರು ಮೈಸೂರಿನಲ್ಲಿ
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ನೂತನ
ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಅಧಿಕಾರ
ವಹಿಸಿಕೊಂಡರು.
ರಾಹುಲ್ ಅಗರ್ವಾಲ್ರವರು ರೂರ್ಕಿಯ ಇಂಡಿಯನ್
ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಕಲ್
ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ ಹಾಗೂ ಅದೇ
ಸಂಸ್ಥೆಯಿಂದ ಎರಡನೇ ಸ್ನಾತಕೋತ್ತರ ಪದವಿಯನ್ನು
ಥರ್ಮಲ್ ಎಂಜಿನಿಯರಿಂಗ್ನಲ್ಲಿ ಪಡೆದಿದ್ದಾರೆ.
ಅರ್ಗವಾಲ್ರವರು ರೈಲ್ವೆ ಕಾರ್ಯಾಚರಣೆ ಹಾಗೂ
ನಿರ್ವಹಣೆಯ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಕ ಶ್ರೇಣಿಯ
ಅನುಭವವನ್ನು ಹೊಂದಿದ್ದು, ನವದೆಹಲಿಯ ರೈಲ್ವೆ
ಮಂಡಳಿಯಲ್ಲಿ ಸಂಚಾರ ಸಾರಿಗೆ(ಉಕ್ಕು) ಕಾರ್ಯನಿರ್ವಾಹಕ
ನಿರ್ದೇಶಕರಾಗಿ ಹಾಗೂ ಉತ್ತರ ಮಧ್ಯೆ ರೈಲ್ವೆಯಲ್ಲಿ ಮುಖ್ಯ
ಪ್ರಯಾಣಿಕರ ಸಂಚಾರ ವ್ಯವಸ್ಥಾಪಕರಾಗಿ ಹಾಗೂ ಸರಕು
ಮಾರಾಟ ವಿಭಾಗದ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾಗಿ ಸೇವೆ
ಸಲ್ಲಿಸಿದ್ದಾರೆ.
ಸಿಂಗಾಪುರ ಹಾಗೂ ಮಲೇಷ್ಯಾದಲ್ಲಿ ತರಬೇತಿ
ಕೋರ್ಸ್ಗಳಿಗೆ ಹಾಜರಾಗಿದ್ದು, ವಡೋದರಾದ ವ್ಯಾಷನಲ್
ಅಕಾಡೆಮಿ ಆಫ್ ಇಂಡಿಯನ್ ರೈಲ್ವೆಯಲ್ಲಿ ನಡೆದ ಸುಧಾರಿತ
ನಿರ್ವಹಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅತ್ಯುತ್ತಮ
ಸೇವೆಗಾಗಿ 2013ರಲ್ಲಿ ರೈಲ್ವೆ ಸಚಿವರ ಪ್ರಶಸ್ತಿಗೆ
ಭಾಜನರಾಗಿದ್ದಾರೆ.
ಇಂದು ಕಚೇರಿಯನ್ನು ತೆರವಿಗೊಳಿಸಿದ ಅಪರ್ಣ
ಗರ್ಗರವರು ಬೆಂಗಳೂರಿನ ಯಲಹಂಕ ರೈಲ್ವೆ ಗಾಲಿ
ಕಾರ್ಖಾನೆಯಲ್ಲಿ ಪ್ರಧಾನ ಹಣಕಾಸು ಸಲಹೆಗಾರರಾಗಿ ಅಧಿಕಾರ
ವಹಿಸಿಕೊಳ್ಳಲಿದ್ದಾರೆ ಎಂದು ವಿಭಾಗೀಯ ವಾಣಿಜ್ಯ
ವ್ಯವಸ್ಥಾಪಕರು ಹಾಗೂ ಜನಸಂರ್ಪಕಾಧಿಕಾರಿ ಪ್ರಿಯಾ ಶೆಟ್ಟಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.