ದಾವಣಗೆರೆ ಅ.27  
ಕೋವಿಡ್-19ನಿಂದ ಎದುರಾಗಿರುವ ಸಂಕಷ್ಟ ಸ್ಥಿತಿಯಲ್ಲಿ
ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಮತ್ತು ದ್ವಿತೀಯ
ಪಿಯುಸಿ ಅಂಕಪಟ್ಟಿ ವಿತರಣೆಯ ವಿಳಂಬದ ಕಾರಣದಿಂದ
ದಾವಣಗೆರೆ ವಿಶ್ವವಿದ್ಯಾನಿಲಯವು ಪದವಿ ಮತ್ತು
ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ
ದಿನವನ್ನು 2020ರ ನವೆಂಬರ್ 7 ರವರೆಗೆ ವಿಸ್ತರಿಸಿದೆ.
ಈ ಹಿಂದೆ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅಕ್ಟೋಬರ್ 23
ಕೊನೆಯ ದಿನವಾಗಿತ್ತು. ದಂಡ ಶುಲ್ಕ ಸಹಿತ ಪ್ರವೇಶ ಅರ್ಜಿ
ಸಲ್ಲಿಸಲು ಅ. 29 ಕೊನೆಯ ದಿನವಾಗಿತ್ತು. ಆದರೆ ಪ್ರಸ್ತುತ
ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ

ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತು ಕಾಲೇಜು
ಪ್ರಾಚಾರ್ಯರ ಮನವಿಯ ಮೇರೆಗೆ ಪ್ರವೇಶ ಅರ್ಜಿ
ಸ್ವೀಕಾರಕ್ಕೆ ಅವಧಿ ವಿಸ್ತರಿಸಲಾಗಿದೆ.
ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಪರೀಕ್ಷೆಗಳು ಅ. 23
ರಂದು ಮುಗಿದಿವೆ. ರಜೆಯ ನಡುವೆಯೂ ಕಾರ್ಯ ನಿರ್ವಹಿಸಿ,
ಅ. 26ರಂದು ಅಂತಿಮ ವರ್ಷದ ಎಲ್ಲ ಪದವಿ ಪರೀಕ್ಷೆಗಳ
ಫಲಿತಾಂಶ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು
ಅನುಕೂಲವಾಗುವ ಉದ್ದೇಶದಿಂದ ನ. 7ರವರೆಗೆ ಅರ್ಜಿ ಸಲ್ಲಿಸಲು
ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ
ಪಡೆದು ಉನ್ನತ ಶಿಕ್ಷಣದ ಅವಕಾಶವನ್ನು ಬಳಸಿಕೊಳ್ಳಬೇಕು
ಎಂದು ಎಂದು ಕುಲಸಚಿವ ಪ್ರೊ.ಬಸವರಾಜ ಬಣಕಾರ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *