ದಾವಣಗೆರೆ ಅ.27
ಜಿಲ್ಲೆಯಲ್ಲಿ  2020-21ನೇ ಸಾಲಿನ ಮುಂಗಾರಿನ ಹಂಗಾಮಿನಲ್ಲಿ
66046 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು,
ಸದ್ಯ ಭತ್ತದ ಬೆಳೆಯು ಬಹುತೇಕ ಕಾಳು ಬೆಳೆಯುವ
ಹಂತದಲ್ಲಿರುವುದರಿಂದ ಇನ್ನು 1 ರಿಂದ 3 ವಾರಗಳಲ್ಲಿ 
ಕಟಾವು ಪ್ರಾರಂಭವಾಗಲಿದೆ.
ಜಿಲ್ಲೆಯಲ್ಲಿ ಶೇ.95% ರಷ್ಟು ರೈತರು ಭತ್ತದ
ಬೆಳೆಯನ್ನು ಭತ್ತ ಕಟಾವು ಯಂತ್ರಗಳ ಮೂಲಕ
ಕಟಾವು ಮಾಡುತ್ತಿದ್ದು, ತಮ್ಮ ಸಮೀಪದ ಕೃಷಿ
ಯಂತ್ರಧಾರೆ ಕೇಂದ್ರಗಳಲ್ಲಿ ಲಭ್ಯಯವಿರುವ ಭತ್ತ
ಕಟಾವು ಯಂತ್ರಗಳ ಪ್ರಯೋಜನವನ್ನು
ಪಡೆಯಬಹುದಾಗಿರುತ್ತದೆ.
ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲೀಕರು
ರೈತರಿಂದ ಪ್ರತಿ ಗಂಟೆಗೆ ರೂ.2,500 ರಿಂದ
ರೂ.3 ಸಾವಿರಗಳವರೆಗೆ  ಬಾಡಿಗೆ ಹಣ ನಿಗದಿಪಡಿಸುತ್ತಿರುವುದು
ಕಂಡುಬಂದಿರುವುದರಿಂದ  ರೈತರಿಗೆ ಹೆಚ್ಚಿನ ಆರ್ಥಿಕ
ಹೊರೆಯಾಗಲಿದ್ದು, ಕೋವಿಡ್-19 ಸೋಂಕಿನ ಸಂಕಷ್ಟದ
ಸಂದರ್ಭದಲ್ಲಿ ಪ್ರತಿ ಗಂಟೆಗೆ ರೂ.1,800 ಮೀರದಂತೆ
ಬಾಡಿಗೆಯನ್ನು ನಿಗದಿಪಡಿಸಿಬೇಕು. ತಪ್ಪಿದಲ್ಲಿ ಭತ್ತ ಕಟಾವು
ಯಂತ್ರದ ಮಾಲೀಕರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ
2005ರ ಪ್ರಕಾರ ಕಾನೂನು ಕ್ರಮ
ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *