ದಾವಣಗೆರೆ ಅ.28
ಕೇಂದ್ರ ವಿಚಕ್ಷಣಾ ಆಯೋಗದ ಸೂಚನೆಯಂತೆ
ಭ್ರಷ್ಟಾಚಾರದ ವಿರುದ್ದ ಜಾಗೃತಿ ಮೂಡಿಸಲು ಅ.27 ರಿಂದ ನ.02
ರವರೆಗೆ ಜಾಗೃತಿ ಅರಿವು ಸಪ್ತಾಹ (ವಿಜಿಲಿಯನ್ಸ್ ಅವೇರ್‍ನೆಸ್ ವೀಕ್)
ವನ್ನು ‘ಜಾಗರೂಕ ಭಾರತ, ಸಮೃದ್ದ ಭಾರತ’ ಎಂಬ
ಧ್ಯೇಯವಾಕ್ಯದೊಂದಿಗೆ ಜಿಲ್ಲೆಯಾದ್ಯಂತ
ಆಚರಿಸಲಾಗುತ್ತಿದೆ.
ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ
ಭ್ರಷ್ಟಾಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿ
ಪಾರದರ್ಶಕ ನೀತಿಗಳನ್ನು ರೂಪಿಸಿ ಪರಿಣಾಮಕಾರಿಯಾಗಿ
ಅವುಗಳನ್ನು ಜಾರಿಗೊಳಿಸಲು ಮತ್ತು ಇಂದಿನ
ವ್ಯವಸ್ಥೆಯನ್ನು ಸುಧಾರಿಸಲು ಸಂಬಂಧಪಟ್ಟವರೆಲ್ಲರನ್ನು
ಒಗ್ಗೂಡಿಸಿ ಜಾಗೃತಿ ಮೂಡಿಸುವುದು ಈ ಸಪ್ತಾಹದ
ಉದ್ದೇಶವಾಗಿದೆ. ಹಾಗೂ ಧಾರ್ಮಿಕತೆ ಮತ್ತು
ಪ್ರಾಮಾಣಿಕತೆಯೊಂದಿಗೆ ಜೀವನ ನಡೆಸುವಂತೆ
ಯುವಪೀಳಿಗೆಗೆ ಸ್ಪೂರ್ತಿ ತುಂಬುವುದರ ಮೂಲಕ
ಬಹಳಷ್ಟು ಪ್ರಗತಿಯನ್ನು ಸಾಧಿಸಬಹುದೆಂದು ಈ ಜಾಗೃತಿ
ಅರಿವು ಸಪ್ತಾಹದ ಮೂಲಕ ಸಂದೇಶ ಸಾರಲಾಗುವುದು
ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ
ಜಿ.ಸಿ.ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.