ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ದಿನಾಂಕ 25 -10- 2020 ರಂದು ಬೆನಕನಹಳ್ಳಿ ಗ್ರಾಮದ ವಿನಾಯಕ ದೇವಸ್ಥಾನದಲ್ಲಿರುವ ಶ್ರೀ ಜಗಜ್ಯೋತಿ ಬಸವೇಶ್ವರರ ಫೋಟೋವನ್ನು ಕೆಲವೊಂದು ರಾಜಕೀಯ ಮುಖಂಡರ ಷಡ್ಯಂತ್ರದಿಂದ VA,RI,DT ಇವರು ಈ ಫೋಟೋವನ್ನು ತೆಗೆದಿದ್ದಾರೆ ಎಂದು ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಬೆನಕನಹಳ್ಳಿ ಗ್ರಾಮದ ಜನರು ಮತ್ತು ಬಸವೇಶ್ವರ ಅನುಯಾಯಿಗಳು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಯಾಕೆ ಈ ಫೋಟೋವನ್ನು ತೆಗೆದು ಹಾಕಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರೆ ,ಆ ಪರಿಸ್ಥಿತಿಯನ್ನು ನೋಡಿ ಅಧಿಕಾರಿಗಳು ಮೂಖ ಪ್ರೇಕ್ಷಕ ರಾಗುತ್ತಾರೆ ತದದನಂತರ ಬಸವೇಶ್ವರ ಅನುಯಾಯಿಗಳು ಕೋಪಗೊಂಡು ತಾವೇ ಸ್ವತಃ ಹೊಸದಾದ ಬಸವೇಶ್ವರರ ಫೋಟೋವನ್ನು ತೆಗೆದುಕೊಂಡು ಬಂದು ತುಂಗಭದ್ರಾ ನದಿಗೆ ಹೋಗಿ ಪೂಜೆ ಮಾಡಿಕೊಂಡು ಬಂದು ಬೆನಕನಹಳ್ಳಿ ರಾಜಬೀದಿಗಳಲ್ಲಿ ಡೋಲು, ಹಲಿಗೆ ಬಾರಿಸುತ್ತಾ ಪಟಾಕಿಗಳನ್ನು ಸಿಡಿಸಿ ಬಸವೇಶ್ವರರಿಗೆ ಜಯವಾಗಲಿ ಎಂದು ಜೈಕಾರ ಹಾಕುತ್ತ ಮೆರವಣಿಗೆ ಯನ್ನು ಮುಗಿಸಿ ಶ್ರೀ ಬಸವೇಶ್ವರರ ಫೋಟೋವನ್ನು ವಿನಾಯ ದೇವಸ್ಥಾನದ ಬಲಗಡೆಗೆ ಕಂಬವನ್ನು ನೆಟ್ಟು ಆ ಕಂಬಕ್ಕೆ ಫೋಟೋವನ್ನು ಕಟ್ಟುವುದರ ಮೂಲಕ ಪ್ರತಿಷ್ಠಾಪನೆ ಮಾಡಿ ಅವರವರ ಮನೆಗೆ ತೆರಳಿದರು.
ಈ ಘಟನೆ ನಡೆದ ತರುವಾಯ 27-10-2020 ಹೊನ್ನಾಳಿ ದಂಡಾಧಿಕಾರಿಗಳಾದ ತುಷಾರ್ ಬಿ ಹೊಸೂರಾರವರು ಆದೇಶದ ಮೆರೆಗೆ VA,RI,DT ಯವರು ಶಾಂತಿ ಸಭೆಯನ್ನು ಕರೆಯುತ್ತಾರೆ. ಈ ಸಭೆಯಲ್ಲಿ ಜನರು ಜಾತ್ಯಾತೀತವಾಗಿ ದೇವಸ್ಥಾನದ ಸಭಾಭವನದಲ್ಲಿ ದೇವಸ್ಥಾನದ ಸಂಬಂಧಪಟ್ಟ ಅಹವಾಲುಗಳಾದ ನಿಮ್ಮ ಮುಜರಾಯಿ ಇಲಾಖೆಯವರು ಈ ದೇವಸ್ಥಾನಕ್ಕೆ ಬಂದ ಹಣವು ಹುಂಡಿಯಲ್ಲಿದೆ ನೀವುಗಳು ಇದನ್ನು ತೆಗೆದುಕೊಂಡು ಹೋಗಲಿಕ್ಕೆ ನಮ್ಮ ಅಭ್ಯಂತರವಿಲ್ಲ ಆದರೆ ಈ ವಿನಾಯಕನಿಗೆ ಸೇರಿದ ಒಡವೆಗಳನ್ನು ಭಕ್ತರು ಮತ್ತು ಸಾರ್ವಜನಿಕರು ಸೇರಿ ಮಾಡಿಸಿದ್ದೇವೆ ನಾವುಗಳು ಯಾವುದೇ ಕಾರಣಕ್ಕೂ ಆ ಒಡುವೆಗಳನ್ನು ಕೊಡಲಿಕ್ಕೆ ಸಾಧ್ಯವಿಲ್ಲ ಎಂದು ಆ ಶಾಂತಿ ಸಭೆಯಲ್ಲಿ ಜನರು ಘೋಷಣೆ ಕೂಗುವುದರ ಮೂಲಕ ಜನರ ಒಕ್ಕೋರೂಲು ಇದನ್ನು ಅಲ್ಲಿದ್ದ ಅಧಿಕಾರಿಗಳು ನಾವುಗಳು ತಹಶೀಲ್ದಾರ್ ಅವರ ಗಮನಕ್ಕೆ ತರುತ್ತೇವೆ ಎಂದರು ಬೆನಕನಹಳ್ಳಿ ಎಲ್ಲಾ ಗ್ರಾಮಸ್ಥರು ಈ ಬಸವೇಶ್ವರರ ಫೋಟೋವನ್ನು ದೇವಸ್ಥಾನದಲ್ಲಿ ಹಾಕಬೇಕೆಂದು ಆಗ್ರಹಪಡಿಸಿದರು ಮಾರನೆಯದಿನ 28 -10- 2020 ರಂದು ಬೆನಕನಹಳ್ಳಿ ಯ ಸಭೆಯ ಸಭಾ ನಡುವಳಿಯ ಬಗ್ಗೆ ದಂಡಾಧಿಕಾರಿಗಳ ಗಮನಕ್ಕೆ ತರಲಾಯಿತ್ತು.
ಈ ಬಗ್ಗೆ ಮುಜರಾಯಿ ಇಲಾಖೆಯ ದೇವಸ್ಥಾನಗಳಾದ ಬೆನಕನಹಳ್ಳಿ ವಿನಾಯಕ ದೇವಸ್ಥಾನ ,ಆಂಜನೇಯ ದೇವಸ್ಥಾನ, ಕರಿಯಮ್ಮ ದೇವಸ್ಥಾನ ,ಚಿಕ್ಕಬಾಸೂರು ಆಂಜನೇಯ ದೇವಸ್ಥಾನ ಗಳು ಸೇರಿವೆ ಎಂದು ಪಕ್ಷಾತೀತವಾಗಿ ಸರ್ಕಾರದ ಸುತ್ತೋಲೆಯಂತೆ ಮುಜರಾಯಿ ಇಲಾಖೆಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸಮಿತಿಯನ್ನು ರಚನೆ ಮಾಡಿಕೊಂಡು ಅನುಮೋದನೆಗೆ ಕಳಿಸಿಕೊಡಲು ಮುಜರಾಯಿ ದೇವಸ್ಥಾನದ ಆಡಳಿತಾಧಿಕಾರಿಗಳಾದ ತುಷಾರ್ ಬಿ ಹೊಸುರ ರವರು ಆದೇಶ ನೀಡಿರುತ್ತಾರೆ ಎಂದು ಬೆನಕನಹಳ್ಳಿ ಆಡಳಿತಾಧಿಕಾರಿಗಳಾದ ಧರ್ಮಪ್ಪ ನವರು ಹೇಳಿಕೆಯನ್ನು ಆದರಿಸಿ ಉಪತಹಸೀಲ್ದಾರರು ಪರಮೇಶ್ ನಾಯ್ಕ್ ರವರು ತಿಳಿಸಿದರು.ಇವರುಗಳು ಪುನಃ ಮಾತನಾಡಿ ಶ್ರೀ ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ಹಾಕಲು ದೇವಸ್ಥಾನದಲ್ಲಿ ತೀರ್ಮಾನಿಸಲಾಗಿದೆ ಎಂದು ಆಡಳಿತ ಅಧಿಕಾರಿಗಳು ಎ.ಬಿ.ಸಿ ನ್ಯೂಸ್ ಆನ್ಲೈನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.